ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿ ಮಡಿ-ಮೈಲಿಗೆಗಳ ಗುಟ್ಟಿ, ವನ್ನು ನೀವು ಸಮಂಜಸವಾಗಿ ತಿಳಿಸಿದರೆ ಮುಂದಿನ ಆಕ್ಷೇಪಣೆಗಳನ್ನು ಹೇಳುವೆನು, ಶಾಮರಾಯ-ನೀನು ಯಾವ ಆಕ್ಷೇಪಣೆಯನ್ನು ತಕ್ಕೊಳ್ಳುತ್ತೀಯೆಂಬ ದು ನನಗೆ ಗೊತ್ತಿರುವದು, ನಿನ್ನ ಬಾಯಿಂದಲೇ ಬರಲೆಂದು ಕೇಳಿರುವೆನು. ಇವೆಲ್ಲ ಕ್ಕೆ ಕ್ರಮವಾಗಿ ಉತ್ತರವನ್ನು ಕೊಡುತ್ತೇನೆ. ಲಕ್ಷಗೊಟ್ಟು ಕೇಳು ; ನಿನ್ನ ಒಂದ ನೆಯ ಆಕ್ಷೇಪಣೆಯು ಸಕೇತಿಗಳೊಡನೆ ಯಾಕೆ ಬಳಿಕೆಮಾಡಬಾರದೆಂಬದಷ್ಟೇ; ಈ ಪ್ರಶ್ನೆಯನ್ನು ನೀನು ಒಳ್ಳೆ ಕನಿಕರಭಾವದಿಂದ ಮಾಡಿರುವೆಯಲ್ಲವೇ? ಯ ಕ೦ದರೆ ವಿಧವೆಯರ ವಿಷಯವಾಗಿ ನಿಮ್ಮ ಜನರ ಭೂತದಯಾಪರ ಬುದ್ದಿಯು ಈ ಕೈರುತ್ತಲಿದೆ. ಮೊದಲು ನಿಮ್ಮ ಈ ಬುದ್ದಿಯೇ ದುರ್ಹತುಕವಿರುತ್ತದೆ. ಇದರಿಂ ದ ಸಮಾಜವು ಎಷ್ಟು ನಿಕೃಷ್ಟಸ್ಥಿತಿಗೆ ಬರುವದಿಂಬದನ್ನು ನೀವು ಲಕ್ಷದಲ್ಲಿ ತರುವ ದಿಲ್ಲ; ಇರಲಿ, ವಿಧವೆಯರು ನೀತಿಭ್ರಷ್ಟರಾಗಬಾರದೆಂದು ಧರ್ಮಶಾಸ್ತ್ರವು ಅವರನ್ನು ವಿರೂಪಗೊಳಿಸುತ್ತದೆ. ಅವರು ವೈರಾಗ್ಯಶೀಲರಾಗಿ ದೇಹದ ಹಾಗು ಮನಸ್ಸಿನ ಸ ವಿತ್ರತೆಯನ್ನು ಕಾಯ್ದುಕೊಳ್ಳಬೇಕೆಂಬದೇ}ಧರ್ಮಶಾಸ್ತ್ರದ ಇಚ್ಛೆಯು; ಇಂದಿನ ನ ರೆಗೆ ಕೋಟ್ಯಂತರ ವಿಧವೆಯರು ಧರ್ಮಶಾಸ್ರಾಜ್ಞೆಯಂತೆ ವರ್ತಿಸಿ ತಮ್ಮ ಪರಿ ಶುದ್ಧ ಕೀರ್ತಿಯನ್ನು ಕಾಯ್ದುಕೊಂಡದ್ದರಿಂದ ಶುದ್ಧರಕ್ತಾಂಶದಿಂದಾದರೂ ನಾವು ಬ್ರಾಹ್ಮಣರೆನಿಸಿಕೊಳ್ಳಲಿಕ್ಕೆ ಅರ್ಹರಾಗಿರುತ್ತೇವೆ. ಒಂದು ವೇಳೆ ಅವರು ವಿಷಯ ಲೋಲುಪರಾಗಿ ವೈರಾಗ್ಯಭ್ರಷ್ಟರಾಗಿದ್ದರೆ, ನಾವು ನಮ್ಮ --~ಖರ ವಂಶಾವಳಿ ಯನ್ನು ಹೇಳುವದೇ ಕಠಿಣವಾಗುತ್ತಿತ್ತು; ಸ್ತ್ರೀಯು ಪ್ರಜೋತ್ಪಾದನಕ್ಕೆ ಕ್ಷೇತ್ರ ಸ್ವರೂಪಳಾದ್ದರಿಂದ ಆಕೆಯ ಪವಿತ್ರತೆಯನ್ನ ಕಾಯುವದಕ್ಕಾಗಿ ಧರ್ಮಶಾಸ್ತ್ರವು ಇಷ್ಟು ದಕ್ಷತೆಯನ್ನು ವಹಿಸಿರುತ್ತದೆ. ವಿಧವೆಯಾದ ಸ್ತ್ರೀಯು ಶೃಂಗಾರವನ್ನು ಹೆ ಚ್ಚಿಸುವ ಸಾಧನಗಳನ್ನು ವರ್ಜ ಮಾಡಬೇಕಾಗಿರುವದರಿಂದ ಸಕೇಶಿಯಾದವಳು ಧರ್ಮಶಾಸ್ತ್ರಜ್ಞೆಗೆ ತಪ್ಪಿ ನಡೆದಂತಾಗುತ್ತದೆ. ಈ ಅಪರಾಧಕ್ಕಾಗಿ ಅವಳೊಡನೆ ಬಳಿಕೆಯನ್ನು ಬಿಡಬೇಕಾಗುವದು. ಬರಿಯ ಧಾರ್ಮಿಕಬಾಬಿನಲ್ಲಿಯೇ ಯಾಕೆ ಈಗಿನ ರಾಜಕೀಯ ಬಾಬಿನಲ್ಲಿಯ ಈ ತತ್ವವು ಭರದಿಂದ ಬೆಳೆಯ ಹತ್ತಿದ್ದು ನಿನ ಗೆ ಗೊತ್ತಿಲ್ಲವೇನು? ಅದೇನಂದರೆ "ನಾನ್ ಕೋ ಅಪರೇಶನ್ನವು! ಅಧರ್ಮವಂತರ ಕೂಡ ಸಹಕಾರದಿಂದ ನಡೆಯಬಾರದೆಂದು ಮಹಾತ್ಮಾ ಗಾಂಧಿಯು ಉಪದೇಶಿಸು ವದಿಲ್ಲವೇ? ಅಧರ್ಮದಿಂದ ನಡೆಯುವವರನ್ನು ಹಾದಿಗೆ ತರಬೇಕಾದರೆ ಅಸಹಕಾರ ವೇ ಮಹಾಮಂತ್ರವು; ಇದೇ ತತ್ವವನ್ನು ಸ್ವಲ್ಪ ಶಿಥಿಲವಾಗಿ ವಿಧವೆಯರಾದ ಸಕೇ ಶಿ ಸ್ತ್ರೀಯರ ವಿಷಯವಾಗಿಯ ಧರ್ಮಶಾಸ್ತ್ರಕಾರರು ಉಪಯೋಗಿಸಿರುತ್ತಾರೆ.