ಈ ಪುಟವನ್ನು ಪರಿಶೀಲಿಸಲಾಗಿಲ್ಲ.

be ಮಡಿ-ಮೈಲಿಗೆಗಳ ಗುಟ್ಟು ವಿಚಾರವನ್ನು ಮಿಕ್ಕ ರಾಷ್ಟ್ರದವರಾರೂ ಮಾಡಿರಲಿಲ್ಲ, ನಮ್ಮ ದೇಶದಲ್ಲಿ ನಮ್ಮ ಸ್ಕಾರ ಪದ್ಧತಿಯದೆಯಷ್ಟೆ? ಅನ್ಯ ದೇಶಗಳಲ್ಲಿಯೂ ಈ ಪದ್ಧತಿಯುಂಟು. ಆದರೆ ಕೆಲಕೆಲವು ದೇಶಗಳಲ್ಲಿಯ ಪದ್ಧತಿಯನ್ನು ಕೇಳಿದರೆ, ಹುಚ್ಚು ನಗೆ ಬರುವ ಹಾಗಿದೆ. ನಮ್ಮವರು ಅನ್ಯರ ಸನ್ಮಾನಕ್ಕೊಸ್ಕರ ದೂರಿನಿಂದಲೇ ಕರಗಳನ್ನು ಜೋಡಿಸುವ ರೂಢಿಯಲ್ಲಿ ಬಹಳ ಮಹತ್ವವುಂಟು. ಈ ನಮಸ್ಕಾರದ ಶಿಷ್ಟಾಚಾರದಲ್ಲಿ ತಾತ್ವಿಕ ದೃಷ್ಟಿಯಿಂದ ಮಹತ್ವವಿದ್ದಷ್ಟು ಲೌಕಿಕದೃಷ್ಟಿಯಿಂದಲೂ ಇರುತ್ತದೆ. ಆದರೆ ಅನ್ಯದೇಶದ ಪದ್ಧತಿಗಳನ್ನು ನೋಡು; ಅವು ಎಷ್ಟು ಅಸಹ್ಯಕರಗಳಾಗಿವೆ. ಪಾಶ್ಚಾ ತ್ಯರು ಅನ್ಯರನ್ನು ಸ್ವಾಗತ ಮಾಡುವಾಗ ಷೆಕಹ್ಯಾಂಡ ಕೊಡುವರಷ್ಟೇ; ಇದು ಪಾಶ್ಚಾತ್ಯರಲ್ಲಿಯ ಬಹುಮಾನದ ಪದ್ಧತಿಯಿದ್ದಂತೆ ಚೀನೀಜನರಲ್ಲಿ ಪರಸ್ಪರರ ಸಂದ ರ್ಶನವಾದಾಗ ಒಬ್ಬರ ಮೇರೆಗೆ ಮತ್ತೊಬ್ಬರು ಮೋರೆಯನ್ನು ತಿಕ್ಕುವದು ಬಹು ಮಾನದ ಪದ್ಧತಿಯಾಗಿದೆ. ಇದೇ ಅವರ ನಮಸ್ಕಾರ-ಚಮತ್ಕಾರವು. ಇನ್ನೂ ಕೆಲವೆಡೆಗಳಲ್ಲಿ ಇದಕ್ಕೂ ಹೆಚ್ಚಿನ ವಿಲಕ್ಷಣ ಪದ್ಧತಿಗಳುಂಟು. ಅವನ್ನೆಲ್ಲ ಹೇಳುತ್ತ ಕುಳಿತರೆ, ಅದೇ ಒಂದು ಗ್ರಂಥವಾಗಬಹುದು. ಇರಲಿ, ಪರಸ್ಪರರು ಮೋರೆಗೆ ಮೋರೆ ತಿಕ್ಕುವದು ಎಷ್ಟು ಅಸಹ್ಯವು. ಸನ್ಮಾನಮಾಡಿಸಿಕೊಳ್ಳತಕ್ಕ ಮನುಷ್ಯ ನಾಗಲಿ, ಅಥವಾ ಮಾಡತಕ್ಕ ಮನುಷ್ಯನಾಗಲಿ,-ರೋಗಿಯಿರಲಿ ಮಹಾರೋಗಿಯಿ ರಲಿ ಹ್ಯಾಗಿದ್ದರೂ ಅವನ ಸ್ಪರ್ಶವನ್ನು ಮಾಡಲೇಬೇಕು. ಇಲ್ಲದಿದ್ದರೆ ಸನ್ಮಾನದ ಕಾರ್ಯವೇ ಜರಗುವಂತಿಲ್ಲ. ಆದ್ದರಿಂದ ಹಸ್ತಾಂದೋಲನವನ್ನು ಮಾಡಿಯಾಗ ಲಿ, ಮೋರೆಗೆಮೋರೆ ತಿಕ್ಕಿಯಾಗಲಿ ಪರರನ್ನು ಸನ್ಮಾನಗೊಳಿಸುವ ಪದ್ಧತಿಯು ಯೋಗ್ಯವಾದದ್ದಲ್ಲವೆಂದು ಈಚೀಚೆಗೆ ಜರ್ಮ೯ ಪಂಡಿತರು ಸಹ ಒಪ್ಪಿಕೊಂಡು, ಹಿಂದೂ ಜನರ ನಮಸ್ಕಾರ ಪದ್ಧತಿಯನ್ನು ಹೊಗಳಿರುವರು. ಹೀಗೆ ಪಾಶ್ಚಾತ್ಯ ರೇ ನಮ್ಮ ಪದ್ಧತಿಗಳನ್ನು ಕಂಠೋಕ್ತವಾಗಿ ಹೊಗಳುತ್ತಿರಲು, ನಮ್ಮಲ್ಲಿಯ ಕೆಲವರು-ಪಾಶ್ಚಾತ್ಯ ಸಂಸ್ಕೃತಿಯು ತಲೆಗೇರಿದವರು-ಹಿಂದೂಜನರ ನಮಸ್ಕಾರ ಪದ್ದತಿಯನ್ನು ಬಿಟ್ಟು, ಹಸ್ತಾಂದೋಲನದ ಪದ್ಧತಿಯನ್ನು ಬಳಕೆಯಲ್ಲಿ ತರಹ ರುವರು. ಇದು ನಮ್ಮ ಜನರ ಮರುಳತನವೆಂದು ಬಿಚ್ಚಿ ಹೇಳುವ ಕಾರಣವೇನು? ಸುಧಾರಕ (ಸಣ್ಣ ಮೋರೆಮಾಡಿ)-ರಾಯರೇ, ನಮ್ಮ ಜನರು ಬರಿಯ ಅನುಕರಣ ಪ್ರಿಯರೆಂಬದು ಸುಳ್ಳಲ್ಲ. ಗುಣಾವಗುಣಗಳ ಪರೀಕ್ಷೆಯಿಲ್ಲದೆ ಕಂಡ ದ್ದನ್ನು ಮಾಡಿಯೇ ತೀರಬೇಕೆಂದು ಕುಣಿಯ ಹತ್ತು ವರು. ಇದಲ್ಲದೆ ಇದಕ್ಕೆ ಇನ್ನೂ ಒಂದು ಕಾರಣವುಂಟು; ಅದನ್ನು ಹೇಳಿದರೆ ನಮ್ಮ ದೇ ಮಾನನಷ್ಟ; ನೀವು