ಈ ಪುಟವನ್ನು ಪರಿಶೀಲಿಸಲಾಗಿಲ್ಲ.

חש - ಮಡಿ-ಮೈಡಿಗೆಯ ಗುಟ್ಟು. ಶಾಮರಾಯ (ನಕ್ಕು)-ಆಚಾರ್ಯರೇ, ಇದೇನುಬೃಹತ್‌ಸೈತ್ರ ವನ್ನೇ ಪ್ರಾರಂಭಿಸಿದಿರಿ? ದೇಶಾವರಿಗೆ ಹೋದಾಗ ಗೃಹಸ್ಥರನ್ನು ವ್ಯಥಾಸ್ತುತಿಸಿಸ್ತುತಿಸಿ ನಿಮಗೆ ಚಾಳಿಬಿದ್ದು ಹೋಗಿರುತ್ತದೆ. ದೊಡ್ಡ ದೊಡ್ಡ ಶಬ್ದಗಳೂ ಉಪ ಮಾನ-ಉಪಮೇಯಗಳೂ ನಿಮ್ಮ ನಾಲಿಗೆಯ ಮೇಲೆ ಕುಣಿಯುತ್ತಿರುತ್ತವಲ್ಲವೇ? ಸುಧಾರಕ-ಬಿಡಿರಿ; ರಾಯರೇ, ಆಚಾರ್ಯರದೇನು ಯಾವಾಗಲೂ ವಿನೋದ ನಡದೇ ಇರುತ್ತದೆ. ನಾವು ನಮ್ಮ ಪ್ರಕೃತ ವಿಷಯವನ್ನನುಸರಿಸೋಣ; ಬ್ರಾಹ್ಮಣರಾದ ನಮ್ಮಲ್ಲಿ ಊಟಕ್ಕೆ ಕೂಡಬೇಕಾದರೆ ಪ್ರತಿಯೊಬ್ಬರು ದೂರ ದೂರ ಯಾಕೆ ಕುಳಿತುಕೊಳ್ಳುವರು? ಒಬ್ಬೊಬ್ಬರ ನಡುವೆ ಹಾಗೆ ಅಂತರ ಬಿಡುವದರ ಉದ್ದೇಶವೇನು? ಶಾಮರಾಯ-ಇದಕ್ಕೆ ಧರ್ಮಶಾಸ್ತ್ರದಲ್ಲಿ ಆಧಾರವುಂಟು. ಅದೇನಂ ದರೆ ಪ್ರತಿಯೊಂದು ಪ್ರಾಣಿಗೂ ಪ್ರಾಣತೇಜದ ಆವರಣವುಂಟು. ಅದರಲ್ಲಿ ಮನು ಪ್ಯಮಾತ್ರರ ಪ್ರಾಣತೇಜದ ಆವರಣವು ಪ್ರತಿಯೊಬ್ಬ ಮನುಷ್ಯನ ಮಸ್ತಕದ ಸುತ್ತು ವರೆದು ಒಂದು ಒಂದೂವರೆ ಮೊಳದ ವರೆಗೆ ಪಸರಿಸಿರುತ್ತದೆ. ಈ ತೇಜಾವರಣವು ಸುಷ್ಟ ಅಥವಾ ದುಷ್ಟ ವಿಚಾರಗಳಲ್ಲಿ ಮಗ್ನನಾದವನ ಅಥವಾ ಆ ಬಗೆಯ ಕಾರ್ಯಮಾಡುವವನ ಏಕಾಗ್ರತೆಯ ಪ್ರಮಾಣದಿಂದ ಹೆಚ್ಚು ವಿಸ್ತ್ರತವಾಗಿಯಾ ಗಲಿ, ಆಕುಂಚಿತವಾಗಿಯಾಗಲಿ ಆಗಿರುತ್ತದೆ. ಆದ್ದರಿಂದ ಬ್ರಾಹ್ಮಣರಲ್ಲಿ ಪರಸ್ಪರರ ತೇಜಾವರಣದ ಮಂಡಲಗಳು ಕೂಡಬಾರದೆಂದು ನಡುವೆ ತಕ್ಕಷ್ಟು ಅಂತರಬಿಟ್ಟು ಊಟಕ್ಕೆ ಕೂಡುವ ಕಟ್ಟು ಮಾಡಲ್ಪಟ್ಟಿರುತ್ತದೆ; ಮತ್ತು ಕ್ರೂರ ವೃತ್ತಿಯವರ ನೆರಳು ಸಹ ಬೀಳಲಾಗದೆಂದು ಪ್ರತಿಬಂಧಕವಿರುತ್ತದೆ. ಮನುಷ್ಯನಿಗೆ ಅನ್ನ ಸೇವ ನೆಯ ಕಾಲವು ಆತನ ಆಯುಷ್ಯದಲ್ಲಿ ಬಹು ಮಹತ್ವದ್ದಿರುತ್ತದೆ. ಯಾಕಂದರೆ ಆತನು ತಿಂದ ಅನ್ನದಿಂದ ರಕ್ತವುಂಟಾಗಿ ಅದರಿಂದ ಆತನ ದೇಹಯಂತ್ರವು ನಡೆಯ ಬೇಕಾಗುತ್ತದೆ. ದೇಹಚಾಲಕನಾದ ಆ ರಕ್ತವು ಶುದ್ಧವೂ ಪವಿತ್ರವೂ ಆಗಿದ್ದರೆ ಅದರಿಂದ ಸುಬುದ್ಧಿ-ಶುದ್ಧ ಮನಸ್ಸುಗಳುಂಟಾಗುತ್ತವೆ. ಅಶುದ್ಧ ಮನಸ್ಸಿನಿಂದ-ಅಶು ಚಿಸ್ಥಿತಿಯಿಂದ ಸೇವಿಸಿದ ಅನ್ನವು ಶುದ್ಧರಕ್ತವನ್ನು ಎಂದಿಗೂ ಕೊಡಲಾರದು, ಅಷ್ಟು ದೂರವೇಕೆ? ಕೆಟ್ಟ ಕಣ್ಣಿನ ಜನರು ನೋಡಿದ ಆಹಾರವನ್ನು ತಿಂದರೆ ಅದ ರಿಂದ ಏನು ಪರಿಣಾಮವಾಗುತ್ತದೆಂಬದು ಅನುಭವ ಸಿದ್ದವಷ್ಟೇ? ಆ ದೃಷ್ಟಿಯಿಂದ ಅನ್ನದಲ್ಲಿ ಹ್ಯಾಗೆ ದೋಷವುಂಟಾಗುತ್ತದೋ ಹಾಗೆಯೇ ಅಶುಚಿಸ್ಥಿತಿಯಿಂದ ಅನ್ನ ದಲ್ಲಿ ದೋಷವುತ್ಪನ್ನವಾಗುತ್ತದೆ. ಊಟಕ್ಕೆ ಕುಳಿತಾಗ ಪರಸ್ಪರರನ್ನು ಮುಟ್ಟಿದರೆ