________________
ಮೈತಿಕ್ಕುತ್ತಿದ್ದರು. ಅಷ್ಟರಲ್ಲಿ ಈ ಹಾಲಾಹಲವಿಷವು ಕುದಿಯುತ್ತ ಹೃದ
ಯವನ್ನು ಭೇದಿಸಲು ಆ ಹೆಣ್ಣು ಮಗಳು ಸ್ಮೃತಿದಪ್ಪಿ ಉಟ್ಟ ಬಟ್ಟೆಯಿಂದಲೇ
ನೆಲದಮೇಲೆ ಹೊರಳಾಡಿ ಅಳಹತ್ತಿದಳು. ಶ್ರೀಮಂತ ಪರಿವಾರವೆಲ್ಲವೂ
ಗೋಳಿಟ್ಟಿತು.ಎಲ್ಲರಮುಖದಿಂದಲೂ ಹಾಯ್! ಹಾಯ್! ಎಂಬ ಶಬ್ದದ
ಹೊರತು ಮತ್ತಾವ ಶಬ್ಬವೂ ಹೊರಡದಂತಾಯಿತು. ಹೀಗೆ ಅವರ ದುಃಖವು
ವಿಕೋಪಕ್ಕೆ ಹೋಗಿರಲು ಅಪಜಯಹೊಂದಿದ ಸಿಪಾಯಿಗಳು ಶ್ರೀಮಂತರನ್ನು
ಕಂಡರು. ಆಗ ನಾನಾ ಸಾಹೇಬನು ಅತ್ತತ್ತು ಶೋಕದ ಭರವು ತಗ್ಗಿದ ಬಳಿ
ಕ ಆ ಸಿಪಾಯಿಗಳನ್ನು ಕುರಿತು-ನಾಗ್ರ ಸಂಗತಿಯನ್ನು ಕೇಳಿಕೊಂಡನು.
ಸಿಪಾಯಿಗಳು ಹೇಳಿದ್ದೇನಂದರೆ - ಸರಕಾರ:ಎಷ್ಟು ಹೇಳಿದರೂ ವ್ಯರ್ಥವು;
ಕಡೆಗೆ ಕೃಷ್ಣ ಮುಖವನ್ನು ತಮಗೆ ತೋರಿಸಿ ತಮ್ಮನ್ನು ಶೋಕಸಾಗರದಲ್ಲಿ
ನೂಕಬೇಕಾಯಿತು, ಸರಕಾರ; ನಮ್ಮ ಭಾವೂಸಾಹೇಬರ ಹಾಗು ರಾವಸಾ
ಹೇಬರ ಪರಾಕ್ರಮಕ್ಕೆ ಬೋಡಿಲ್ಲ: ಮಹಾರಾಜ, ನಮ್ಮ ಪಕ್ಷವು ಮೊದಲು
ಮುಂದೆ ಬಂದಷ್ಟು ಪರಿಣಾಮದಲ್ಲಿ ಅನರ್ಥವನ್ನು ಹೊಂದಿತು. ನಮ್ಮಲ್ಲಿಯ
ಸಾವಿರಾರು ಜನ ಹೆಂಗಸರು ಮುಸಲ್ಮಾನರ ಕಾಮಾಗ್ನಿಗೆ ಆಹುತಿಯಾದರು.
ಅಸಂಖ್ಯ ಕುದುರೆಗಳೂ ಆನೆಗಳೂ ಅವರ ಕೈಸೇರಿದವು. ನಮ್ಮ ಛಾವಣಿಯ
ಸರ್ವ ಸಾಮಾನುಗಳನ್ನು ಆ ಲಂಡರು ಹರಣ ಮಾಡಿದರು. ಛಾವಣಿಯ ಕಂದಕ
ವೆಲ್ಲ ನಮ್ಮ ಜನರ ಹೆಣಗಳಿಂದಲೇ ತುಂಬಿಹೋಯಿತು, ಎಂದು ಸಂಗ್ರಾಮದ
ವರ್ಣನೆಯನ್ನು ಯಥಾರ್ಥವಾಗಿ ಮಾಡಿದನು. ಅವರ ಮುಖದಿಂದ ಆಸಂಗತಿ
ಗಳನ್ನು ಕೇಳುತ್ತ ಹೋದಂತೆ ನಾನಾಸಾಹೇಬನ ಮನಸ್ಸು ಕೇವಲ ಉದಾ
ಸವಾಗತೊಡಗಿತು, ಪುತ್ರವಿಯೋಗ,ಭ್ರಾತ್ರವಿಯೋಗ, ಅಪ್ತೇಷ್ಟರ
ವಿಯೋಗ,ಕೀರ್ತಿವಿಯೋಗ ಮೊದಲಾದ ವಿಯೋಗ ಪೂರ್ವಕವಾದ ದುಃಖಗಳು
ಅವನನ್ನು ಹಣ್ಣು ಮಾಡಿಬಿಟ್ಟವು.
ಮುಂದೆ ಸ್ವಲ್ಪ ದಿವಸಗಳಲ್ಲಿ ನಾರೋಶಂಕರ, ವಿಠ್ಠಲಶಿವದೇವ ಮೊದಲಾ
ದ ಸರದಾರರು ಭಾವೂಸಾಹೇಬನ ಹೆಂಡತಿಯಾದ ಪಾರ್ವತೀಬಾಯಿಯನ್ನು ಸುರ
ಕ್ಷಿತವಾಗಿ ಕರಕೊಂಡು ಬಂದರು. ಆಸಂಖ್ಯೆ ಜನ ಹೆಂಗಸರು ಮುಸಲ್ಮಾನರ ಕೈ
ಸೇರಿದ್ದರೂ ಖುದ್ದ ಭಾವೂಸಾಹೇಬನ ಹೆಂಡತಿಯು ಪಾರಾಗಿ ಬಂದದ್ದಕ್ಕೆ ಮ
ರಾಟರಿಗೆ ಒಂದು ಬಗೆಯ ಸಮಾಧಾನವೆನಿಸಿತು. ರಾಘೋ ಬಾದಾದಾ,ಹೋಳ
ಕರ ಮೊದಲಾದವರು ಬಹುವಿಧವಾಗಿ ನಾನಾಸಾಹೇಬನ ಸಮಾಧಾನವನ್ನು ಮಾ
ಡಿದರು. ಆದರೆ ಸಂಗ್ರಾಮದ ಮಹಾದುಃಖದಿಂದ ಬೆಂದುಬೆಂಡಾಗಿ ಹೋಗಿದ್ದ.