ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಮಹಾರಾಣಾ ಪ್ರತಾಪಸಿಂಹ, ಅಷ್ಟದಶ ಪರಿಚ್ಛೇದ. ಇನಟಿಸು ಪೃಥ್ವಿರಾಜನ ಪತ್ರ, / ಆಸಾರ ವೀರಯೋಗಿಯು | ಸಂಸಾರದ ಸಣ್ಣ ಘಟನೆಯೊಂದರ ಕತದಿ೦ | ಸಂಸಾರಕ್ಕೊಳಗಾದೊಡೆ | ಸಾಂಸಾರಿಕಮೋಹವತಿ ವಿಚಿತ್ರವಿದಿ ? || ೧ || ಈ ಜಗತ್ತಿನಲ್ಲಿ ಪ್ರೇಮಕ್ಕೆ ಸಮಾನವಾದ ಶಕ್ತಿಯು ಬೇರೊಂದಿಲ್ಲ. ಕರೋರ ರಾಜದಂಡವನ್ನು ಕೈಯಲ್ಲಿ ಹಿಡಿದು, ರುದ್ರಮೂರ್ತಿಯನ್ನು ಧರಿಸಿ ರಾಜ್ಯ ಕಾರಭಾ ರವನ್ನು ಸಾಗಿಸುತ್ತಿರುವ ಮನುಷ್ಯನು ಅಂತಃಪುರದಲ್ಲಿ ಪ್ರವೇಶಿಸಿದನೆಂದರೆಸ್ತ್ರೀಪುತ್ರಾದಿ ಪರಿವಾರದ ಮಧ್ಯವರ್ತಿಯಾದನೆಂದರೆ ಸಹಾಸ್ಯವದನನಾಗಿ, ಸರಸ ವಾದ ಮಾತುಗಳನ್ನಾಡತೊಡಗುವನು ರಣಕ್ಷೇತ್ರದಲ್ಲಿ, ಶತ್ರುಗಳ ಮಧ್ಯದಲ್ಲಿ, ಶಸ್ತ್ರ-ಕ್ರೀಡೆಯ ಮಧ್ಯದಲ್ಲಿ ಪ್ರತಿಯಮನ ಮೂರ್ತಿಯನ್ನು ಧರಿಸಿದ ಮನುಜನು, ತನ್ನ ಸ್ನೇಹಪುತ್ಥಳಿಯ-ಪ್ರೇಮಪಾತ್ರಳಾದ ರಮಣಿಯ ಕೋಮಲ ಪಾದದಲ್ಲಿ ಮುಳ್ಳು ನಟ್ಟರೂ ಕಣ್ಣೀರು ಸುರಿಸತೊಡಗುವನು ಅಂತೆಯೇ, ತನ್ನ ಕರೋರ ಪ್ರತಿಜ್ಞೆಯಿಂದಲೂ, ಅಸಮ ಸಾಹಸದಿಂದಲೂ, ಅಪ್ರತಿಮ ಕಷ್ಟಸಹಿಷ್ಣುತೆ ಯಿಂದಲೂ ಶತ್ರುಗಳ ಭಕ್ತಿ ಪ್ರೀತಿಯನ್ನು ಆಕರ್ಷಣಮಾಡಿಕೊಂಡಿದ್ದ ಪ್ರತಾ ಪನು, ಹೆಂಡತಿ-ಮಕ್ಕಳ ದಾರುಣವಾದ ದುರ್ದೆಶೆಯನ್ನು ನೋಡಿ, ಒಮ್ಮೊಮ್ಮೆ ಆತ್ಮಹಾರನಾಗಿ ಹೋಗುತ್ತಿದ್ದನು-ಸಾಂಸಾರಿಕ ಮೋಹಕ್ಕೊಳಗಾಗುತ್ತಿದ್ದನು. ಪ್ರತಾಪನ ಪರಿವಾರದ ಜನರು ಭಿಲ್ಲರಿಂದ ರಕ್ಷಿತರೂ, ಪಾಲಿತರೂ ಆಗಿ, ಹೇಗೆ ಕಾಲಕಳೆಯುತ್ತಿದ್ದರೆಂಬದನ್ನು ಹಿಂದೆ ಸೂಚಿಸಿದ್ದೇವೆ. ಭಿಲ್ಲರು ಕ್ರೂರಪ್ರಾಣಿಗ ಗಳಿಂದ ರಕ್ಷಿಸುವದಕ್ಕಾಗಿ, ಇವರನ್ನೊಂದು ಪೆಟ್ಟಿಗೆಯಲ್ಲಿ ಕುಳ್ಳಿರಿಸಿ, ದೊಡ್ಡ ಗಿಡ ಗಳಿಗೆ ತೂಗುಬಿಡುತ್ತಿದ್ದರು; ಮತ್ತು ಅಡವಿಯಲ್ಲಿ ತಿರುಗಾಡಿ, ಕಂದಮೂಲಾದಿ ಗಳನ್ನು ತಂದು, ಇವರ ಸೇವೆಯನ್ನು ವವಡುತ್ತಿದ್ದರು. ಶತ್ರುಗಳು ಚಾಂದಾನಗರ ವನ್ನು ಕೈವಶಮಾಡಿಕೊಂಡ ಸಮಯದಲ್ಲಿ ಭಿಲ್ಲರು ಇವರನ್ನು ಜಹುರಾದ ಸತು ವಿನ ಕಣಿಯಲ್ಲಡಗಿಸಿಟ್ಟಿದ್ದರು. ಈ ಕಣಿಯು ಬಹು ಅಂಧಕಾರಮಯವಾಗಿದ್ದಿತು. ರಾಜಮಹಿಷಿಯೂ, ರಾಜಕುಮಾರ-ಕುಮಾರಿಯರೂ ಪೆಟ್ಟಿಗೆಯಲ್ಲಿ ಕುಳಿತು