ಮಹಾರಾಣಾ ಪ್ರತಾಪಸಿಂಹ v v , YY• 1 y v\ /YYY #
- v
V | /v # #v / vvv - ರಜಪೂತರ ರಾಜ್ಯವು ಪೂರ್ವಕಾಲದಲ್ಲಿ ವಿಸ್ತಾರವಾಗಿದ್ದಷ್ಟು ಈಗ ಇಲ್ಲ. ಮುಸಲ್ಮಾನರ ವಿಜಯದ ಪೂರ್ವದಲ್ಲಿ ರಜಪೂತರ ಅಧಿಕಾರವು ಉತ್ತರದಲ್ಲಿ ಗಂಗಾಯಮುನೆಗಳ ಎರಡನೆಯ ಧಡದಲ್ಲಿ ಪಂಜಾಬದವರೆಗೆ, ಮತ್ತು ಪೂರ್ವ ಭಾಗದಲ್ಲಿ ಬಿಹಾರ-ಬಂಗಾಲಗಳ ವರೆಗೆ ನಡೆಯುತ್ತಿದ್ದಿತು. ಮುಂದೆ ದುರ್ದೈವ ದಿಂದಲೂ, ದಾಳಿಗಾರರ ಹಾವಳಿಯಿಂದಲೂ ವೀರಭೂಮಿಯಾದ ರಾಜಸ್ತಾನವ, ಛಿನ್ನ ವಿಚ್ಛಿನ್ನವಾಗಿ ಹೋಯಿತು. ಈಗ ಇದರ ಮಧ್ಯಭಾಗದಲ್ಲಿರುವ ಅಜಿ ಮೀರ, ಮೈರಚಾರ ಸಂಸ್ಥಾನಗಳಲ್ಲಿ ಬ್ರಿಟಿಶರ ಅಧಿಕಾರವು ನಡೆಯುವದು. ಪೂರ್ವಭಾಗದಲ್ಲಿರುವ ಟೊಂಕ ಸಂಸ್ಥಾನವು ಒಬ್ಬ ಮುಸಲ್ಮಾನ ಅರಸನ ಅಧೀನ ಕ್ಕೊಳಪಟ್ಟಿದೆ. ಉಳಿದ ಭಾಗವು ಸಣ್ಣ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, ಇವು ರಜಪೂತರ ಆಧೀನದಲ್ಲಿರುವವು. ಆದರೆ ಇವರೆಲ್ಲರು ಬ್ರಿಟಿಶ ಸರಕಾರದ ಸಾಮಂತರಾಜರು ಸದ್ಯದಲ್ಲಿರುವ ರಜಪೂತಸ್ತಾನದ ಒಟ್ಟು ಕ್ಷೇತ್ರಫಲವು ೧೩೦,೯೩೪ ಚೌರಸ ಮೈಲು ಇರುವದು ಅರವಲೀ ಎಂಬೊಂದು ಬಹು ಉದ್ದವಾದ ಪರ್ವತಾವಳಿಯು, ರಾಜ ಸ್ನಾನದ ಆಗ್ನೆಯ ದಿಕ್ಕಿನಲ್ಲಿ ಪ್ರಾರಂಭವಾಗಿ, ನೈರುತ್ಯಮಾರ್ಗವಾಗಿ ವಿಸ್ತಾರ ವಾಗುತ್ತ ಹೋಗಿ, ರಜಪೂತಸ್ತಾನವನ್ನು ಎರಡು ಸಮಭಾಗಗಳಾಗಿ ವಿಭಾಗಿಸಿದೆ. ಈ ಎರಡು ಭಾಗಗಳಲ್ಲಿ ಒಂದಕ್ಕೆ ಪೂರ್ವಭಾಗವೆಂದೂ, ಬೇರೊಂದಕ್ಕೆ ಪಶ್ಚಿಮ ಭಾಗವೆಂದೂ ಹೆಸರು ಕೊಡಬಹುದು. ಪಶ್ಚಿಮಭಾಗದಲ್ಲಿ ಮಾರವಾಡ ಅಥವಾ ಜೋಧಪುರ, ಜಸಲ್ಮೀರ, ಬಿಕಾನೇರಗಳೆಂಬ ಮುಖ್ಯ ಸಂಸ್ಥಾನಗಳುಂಟು. ಪೂರ್ವಭಾಗದಲ್ಲಿ ಮೇವಾಡ, ಕೋಟಾ, ಬುಂದಿ ಸಂಸ್ಥಾನಗಳಿವೆ. ಮಧ್ಯಭಾಗ ದಲ್ಲಿ-ಅರವಲೀ ಪರ್ವತದ ಮೇಲ್ಬಾಗದಲ್ಲಿಯೂ, ಪಾರ್ಶ್ವಗಳಲ್ಲಿಯೂ ಇಂಗ್ಲೀ ಷರ ಆಧೀನದಲ್ಲಿರುವ ಅಜಮಿರ-ಮೈರಬಾರ ಸಂಸ್ಥಾನಗಳುಂಟು. ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಟೋಲಪುರ, ಭರತಪೂರ, ಟೊಂಕ, ನಿಮಚ, ಡೊಂಗಾ ರಪುರ ಮೊದಲಾದ ಇನ್ನು ಕೆಲವು ಸಣ್ಣ ಸಂಸ್ಥಾನಗಳಿವೆ. ಇಲ್ಲಿ ಅವುಗಳನ್ನು ಉಲ್ಲೇಖಿಸುವದು ನಿಷ್ಟ್ರಯೋಜನವು, ಅರವಲೀ ಪರ್ವತವು ರಾಜಸ್ತಾನದ ಸರ್ವಸ್ವವಾಗಿದೆ. ರಾಜಸ್ತಾನಕ್ಕಿರುವ ಪ್ರಾಕೃತಿಕ ಅನುಕೂಲತೆಗಳಿಗೆ ಈ ಪರ್ವತವು ಮೂಲಕಾರಣವಾಗಿದೆ. ಇದು ಮಳೆಗಾಳಿಯನ್ನು ತಡೆಯುವದು; ಅದರಿಂದ ಮಳೆಗಾಳಿಯು (ಮನ್ಸೂನ) ಈ