ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಮಹಾರಾಣಾ ಪ್ರತಾಪ ಸಿಂಹ •/Wv M + Mr +M +

+ + + + - ಕುಂಭನ ಮೊಮ್ಮಗನಾದ ಸಂಗ ಅಧವಾ ಸಂಗ್ರಾಮಸಿಂಹನ ಕಾಲದಲ್ಲಿ ರಜಪೂತರ ಗೌರವವು ಪರಮಾವಧಿ ಘನತೆಗೇರಿತು. ಇವನ ಕಾಲದಲ್ಲಿಯೇ ಯಾವತ್ತು ಸಾಮಂತ ಸರದಾರರು ರಾಣಾನ ಆಧೀನಕ್ಕೊಳಪಟ್ಟರು. ಬಹು ದಿನ ಸಗಳಿಂದ ದಿಲ್ಲಿಯಲ್ಲಿ ತೊಗಲಕ, ಸೈಯದ, ಲೋಡಿ ವಂಶಗಳ ಪರಾಣರು ರಾಜ್ಯ ವಾಳುತ್ತ ಬಂದಿದ್ದರು ಈ ವರೆಗೆ ಆಳಿದ ರಾಣಾರು ದಿಲ್ಲಿಯ ರಾಜ್ಯ ಕಾರಭಾರ ದಲ್ಲಿ ಕೈ ಹಾಕುತ್ತಿರಲಿಲ್ಲ ಇವರು ಸ್ವದೇಶ, ಸ್ವಜಾತಿಗಳ ವಿಷಯದಲ್ಲ, ಆತ್ಮ ಕಲಹದಲ್ಲಿಯೂ ಕಾಲಯಾಪನೆ ಮಾಡುತ್ತಿದ್ದರು. ಕ್ರಿ. ಶಕದ ಹದಿನಾರನೇ ಶತಾಬ್ಲಿಯ ಪ್ರಾರಂಭದಲ್ಲಿ ಸಂಗನು ಸಿಂಹಾಸನವನ್ನೇರಿದ ಕಾಲದಲ್ಲಿ, ಇಬ್ರಾ ಹಿಮ ಲೋಡಿಯು ದಿಲ್ಲಿಯ ಅರಸನಾಗಿದ್ದನು ಈ ಸಮಯದಲ್ಲಿ ಮೊಗಲವಂಶದ ಬಾಬರನು ಹಿಂದುಸ್ತಾನದ ಮೇಲೆ ದಂಡೆತ್ತಿ ಬಂದನು. ಮಧ್ಯ ಏಶಿಯಾದಿಂದ ಬಹಳ ಮಂದಿ ದಾಳಿಗಾರರು, ಹಿಂದುಸ್ತಾನದ ಮೇಲೆ ಅನೇಕ ಸಾರ ದಂಡೆತ್ತಿ ಬಂದಿದ್ದಾರೆ. ಇವರಲ್ಲಿ ಬಹುಜನರ ಲಕ್ಷವು ರಾಜ್ಯಗಳಿಸುವದರ ಕಡೆಗಿರಲಿಲ್ಲ ಇವರು ಕೇವಲ ಧನ-ರತ್ನಗಳನ್ನು ಸುಲಿಗೆ ಮಾಡಿಕೊಂಡು ಹೋಗುವದಕ್ಕೆ ಬಂದವರಾಗಿದ್ದರು, ಆದರೆ ಬಾಬರನ ಉದ್ದೇ ಶವು ಬೇರೆಯಾಗಿದ್ದಿತು ಇವನು ಪಾಣಿಪತ್ಯದ ಯುದ್ದದಲ್ಲಿ ಇಬ್ರಾಹಿಮ ಲೋಡಿ ಯನ್ನು ಸೋಲಿಸಿ, ದಿಲ್ಲಿಯ ಸಿಂಹಾಸನವನ್ನೇರಿದನು (೧೫೨೬ ), ಮತ್ತು ತನ್ನ ಜಯಶಾಲಿಗಳಾದ ಸೈನಿಕರ ಸಹಾಯದಿಂದ ರಾಜ್ಯ ಬೆಳೆಸುವ ಪ್ರಯತ್ನ ವನ್ನು ಮಾಡತೊಡಗಿದನು. ಈ ಸಮಯದಲ್ಲಿ ಸಂಗ್ರಾಮಸಿಂಹನು ತಾನು ಸುಮ್ಮನೆ ಕುಳಿತುಕೊಳ್ಳುವದು ಸರಿಯಲ್ಲವೆಂದು ಭಾವಿಸಿದನು, ಯಾಕಂದರೆ ಸುಮ್ಮನೆ ಬಿಟ್ಟಲ್ಲಿ ಯಾವತ್ತು ಹಿಂದೂ ರಾಜ್ಯಗಳು ಒಂದರ ಹಿಂದೊಂದು ಯುವ ನರ ಆಧೀನಕ್ಕೊಳಗಾಗುವವೆಂದು ಅವನು ಆಲೋಚಿಸಿದನು, ಕಾರಣ ಅವನು ಬಾಬರನ ವಿರುದ್ಧವಾಗಿ ಯುದ್ಧ ಮಾಡುವದಕ್ಕಾಗಿ ಸೈನ್ಯಸಂಗ್ರಹ ಮಾಡತೊಡ ಗಿದನು ಇವರಿಬ್ಬರ ನಡುವೆ ಆದ ಕಾನೂಯವೆಂಬ ಸ್ಥಳದ ಮೊದಲನೇ ಯುದ್ಧ ದಲ್ಲಿ ಬಾಬರನ ಬಹು ಸೈನಿಕರು ಮರಣಹೊಂದಿದರು. ಇದರಿಂದ ಬಾಬರನು ಹೆದರಿ, ಒಪ್ಪಂದದ ಸಂಧಾನವನ್ನು ನಡೆಸಿದನು; ಆದರೆ ಸಂಗ್ರಾಮಸಿಂಹನು ಒಪ್ಪಂದಕ್ಕೆ ಒಪ್ಪಿಕೊಳ್ಳಲಿಲ್ಲ. ಮುಂದೆ ತುಸು ದಿವಸಗಳಲ್ಲಿ ಶಿಕ್ರಿಯ ಹತ್ತರ ಬಿಯಾನಾನದಿಯ ದಂಡೆಯಲ್ಲಿ ಘೋರ ಕಾಳಗವಾಯಿತು (೧೫೨೭), ಬಾಬರನು