ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವಪುರುಷರು, >

  • *

7 – 2 ಎರಡೂ ಕಡೆಗೆ ಅಶ್ವಾರೋಹಿಗಳನ್ನೂ, ನಡುವೆ ತೋನುಗಳನ್ನೂ ಇರಿಸಿ, ರಜಪೂ ತರ ಮೇಲೆ ಸಾಗಿ ಬಂದನು. ರಜಪೂತರಿಗೆ ಈ ತರದ ಯುದ್ಧದ ಅಭ್ಯಾಸವಿರ ಲಿಲ್ಲ. ಅವರು ಈ ವರೆಗೆ ತೋಸುಗಳನ್ನು ಉಪಯೋಗಿಸಿರಲಿಲ್ಲ. ತೋಫಿನ ಗುಂಡುಗಳು ರಜಪೂತ ಸೈನ್ಯದಲ್ಲಿಯ ಬಹು ವೀರರನ್ನು ನಾಶಮಾಡತೊಡಗಿದವು. ಈ ಸಮಯದಲ್ಲಿ ಮುಂದಿರುವ ಒಬ್ಬ ರಜಪೂತ ಸೇನಾಪತಿಯು ವಿಶ್ವಾಸಘಾತ ಮಾಡಿ, ಓಡಿಹೋಗತೊಡಗಿದನು ಮೊಗಲರು ಜೀವದ ಹಂಗುದೊರೆದು ಬಹು ಕಾಲ ಯುದ್ಧ ಮಾಡಿದರು ಕಡೆಗೆ ಸಂಗನು ಪರಾಜಿತನಾದನು ವಿಧಿಯ ವಿಧಾ ನವ ಜನರಿಗೆ ತಿಳಿಯದಂತಹದಿರುವದು! ಈ ಯುದ್ಧದಲ್ಲಿ ಮೊಗಲರು ಪರಾಜಿತ ರಾಗಿದ್ದರೆ, ಭಾರತದ ಇತಿಹಾಸವು ಯಾವ ಭಾವದಿಂದ ಪರಿವರ್ತಿತವಾಗುತ್ತಿ ತೆಂಬದನ್ನು ಯಾರು ಹೇಳಬಲ್ಲರು ? ಪರಾಜಿತನಾದ ಸಂಗನು ಮೊಗಲರನ್ನು ಸೋಲಿಸದೆ, ರಾಜಧಾನಿಯನ್ನು ಪ್ರವೇಶಿಸಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿದನು. ಆದರೆ ತುಸು ದಿವಸಗಳಲ್ಲಿಯೇ ಇವನು ತೀರಿಕೊಂಡನು (೧೫೨೮ ) ರಜಪೂತರ ಆಶೆಯು--ಭಾವೀ ವಿಜಯ ಸಂಪಾದನೆಯ ಮಹತ್ವಾಕಾಂಕ್ಷೆಯು ನಾಶವಾಯಿತು. ರಾಣಾ ಸಂಗನು ಸಾಯುವ ವರೆಗೆ ವೀರಧರ್ಮವನ್ನು ತಪ್ಪದೆ ಪಾಲಿಸಿದನು ಇವನು ಅನೇಕ ಕಡೆಯಲ್ಲಿ ಮುಸಲ್ಮಾನರೊಡನೆ ಯುದ್ಧ ಮಾಡಿ, ಹದಿನೆಂಟುಸಾರೆ ಜಯ ಪಡೆದಿದ್ದನು. ಯುದ್ಧ ದಲ್ಲಿ ಇವನ ಒಂದು ಕೈ, "ಒಂದು ಕಾಲು, ಒಂದು ಕಣ್ಣು ನಾಶವಾಗಿದ್ದವು. ಇವನ ಶರೀರದ ಮುಂಭಾಗದಲ್ಲಿ ಎಂಭತ್ತು ಶಸ್ತ್ರದ ಗಾಯಗಳಿದ್ದವು ವೀರ ಕೇಸರಿಯಾದ ಸಂಗ ರಾಣಾನ ಆಕಸ್ಮಿಕ ಮೃತ್ಯುವಿನಿಂದ ಕೇವಲ ರಾಜಸ್ತಾನದ್ದೇ ಏಕೆ, ಇಡೀ ಹಿಂದುಸ್ತಾನದ ಭಯಂಕರ ಹಾನಿಯಾಯಿತು. ರಜಪೂತರಿಗೆ ಯೋಗ್ಯವಾದ ಗುಣಗಳ ವಿಷಯದಲ್ಲಿ ಸಂಗ್ರಾಮಸಿಂಹನಿಗೆ ಸರಿಯಾದವರು, ಇವನ ಮೊಮ್ಮಗನಾದ ಮಹಾರಾಣಾ ಪ್ರತಾಪಸಿಂಹನ ಹೊರತು ಬೇರೆ ಯಾರೂ ಇಲ್ಲ. ಸಂಗ್ರಾಮಸಿಂಹನ ಮರಣದ ತರುವಾಯ ಬಾಬರನು ಇವನ ಮಗನಾದ ವಿಕ್ರಮಜಿತುವಿನೊಡನೆ ಒಪ್ಪಂದ ಮಾಡಿಕೊಂಡನು (೧೫೨೮), ವಿಕ್ರಮಜಿತು ವಿನ ಆಳಿಕೆಯ ದೋಷದಿಂದ ಬೇರೆ ಬೇರೆ ಸಂಧದ ರಜಪೂತರಲ್ಲಿ ಆತ್ಮ ಕಲಹ