ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಮಹಾರಾಣಾ ಪ್ರತಾಪಸಿಂಹ, + +++++ / / h /, /++++++ ••••••MMMM ಪೂತರನ್ನು ಉತ್ಸಾಹಗೊಳಿಸುತ್ತಿದ್ದವು ಬಾಲ್ಯಕಾಲದಿಂದಲೂ ಪ್ರತಾಸನು ಚಾರ ಣರ ಗಾಯನವನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ರಾಜಸ್ತಾನದ ಆಬಾಲವೃದ್ಧ-ವನಿತೆಯರೆಲ್ಲರು ಚಾರಣರನ್ನು ಪ್ರೀತಿಸುತ್ತಿದ್ದರು; ಆದರೆ ಭಕ್ತಿವಂತನಾದ ಪ್ರತಾಪನ ತೇಜೋದೀಪ್ತ ಪವಿತ್ರಮೂರ್ತಿಯಂತೆ ಆನಂದ ಹೊಂದುವವರು ಕಡಿಮೆ. ಪ್ರತಾಪ-ಶಕ್ತರೀರ್ವರೂ ಶಸ್ತ್ರಕುಶಲರಿದ್ದರೆಂದು ಮೇಲೆ ಹೇಳಿದ್ದೇವೆ. ಕತ್ತಿಯನ್ನು ತಿರವುದರಲ್ಲಿ, ಬರ್ಚೆಯನ್ನೆ ಸೆಯುವದರಲ್ಲಿ ಇವರಿಗೆ ಸಮಾನರಾದ ವರು ಆ ಕಾಲದಲ್ಲಿ ಯಾರೂ ಇರಲಿಲ್ಲ. ಒಂದು ದಿವಸ ಬೇಟೆಗೆ ಹೋದಾಗ್ಗೆ, ಗುರಿಹೊಡೆಯುವದರ ವಿಷಯವಾಗಿ ಇವರಿಬ್ಬರ ನಡುವೆ ತರ್ಕವಿತರ್ಕವು ನಡೆ ಯಿತು ಈ ಸಮಯದಲ್ಲಿ ಪ್ರತಾಪನು ತನ್ನ ಕುದುರೆಯನ್ನು ಚಕ್ರಾಕಾರವಾಗಿ ತಿರುಗಿಸುತ್ತಿದ್ದನುಇವನ ಕೈಯಲ್ಲಿಯ ಬರ್ಚೆಯು ಹೊಳೆಯುತ್ತಿದ್ದಿತು. ಈ ವೇಳೆಯಲ್ಲಿ ಇಬ್ಬರಲ್ಲಿಯ ದ್ವೇಷವು ಪ್ರಕಾಶವಾಗುವ ಸಮಯ ಬಂದಿತು. ಪ್ರತಾ ಪನು ಗಟ್ಟಿಯಾಗಿ ಹೇಳಿದನು -" ನೋಡು, ಹಿಂದಿರುಗಬೇಡ; ಬಾ, ಯುದ್ಧ ವನ್ನಾರಂಭಿಸು ” ಇಬ್ಬರಿಗೂ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ರಾಜಪುರೋಹಿತನು ದೂರದಿಂದ ಈ ದೃಶ್ಯವನ್ನು ನೋಡುತ್ತಿದ್ದನು. ಅವನು ಅಣ್ಣ ತಮ್ಮಂದಿರರ ಈ ಕಲಹವನ್ನು ನೋಡಿ, ತಿಶೋದಿಯಾವಂಶದ ಸರ್ವನಾಶ ವಾಗುವದೆಂದು ಭಾವಿಸಿದನು. ಕಾರಣ ಅವನು ಸುಮ್ಮನಿರಲಿಕ್ಕೆ ಮನಸು ಮಾಡ ಲಿಲ್ಲ; ತೀವ್ರವೇ ಓಡಿಬಂದು ಇಬ್ಬರ ನಡುವೆ ನಿಂತುಕೊಂಡನು, ಮತ್ತು ಯುದ್ದ ವನ್ನು ನಿಲ್ಲಿಸುವದಕ್ಕೆ ಹೇಳಿದನು ಆದರೆ ಕ್ರೋಧವಶರಾದ ಅವರು ಪುರೋಹಿ ತನ ಮಾತಿಗೆ ಕಿವಿಗೊಡಲಿಲ್ಲ. ಆಗ ಪುರೋಹಿತನು ಕೆಲಹೊತ್ತು ಸಂಭಿತನಾಗಿ ನಿಂತುಕೊಂಡನು; ತರುವಾಯ ತನ್ನ ವಸ್ತ್ರದಲ್ಲಿರುವ ಸಣ್ಣ ಆಯುಧವನ್ನು ಕಡೆಗೆ ತೆಗೆದು, ಇರಿದುಕೊಂಡು ಸತ್ಯ ಬಿದ್ದನು. ಅವನ ರಕ್ತದಿಂದ ಭೂಮಿಯು ಪವಿತ್ರ ವಾಯಿತು. ರಜಪೂತ ಕುಲಪುರೋಹಿತನು ರಾಜಪುತ್ರರೀರ್ವರ ರಕ್ಷಣೆಗಾಗಿ ಆತ್ಮವಿಸರ್ಜನೆ ಮಾಡಿದನು; ಮತ್ತು ಅಸಾಧಾರಣ ಆತ್ಮಯಜ್ಞದಿಂದ ಲೋಕ ದಲ್ಲಿ ಅಮರನಾಗಿ ಉಳಿದನು. ಎದುರಿನಲ್ಲಾದ ಬ್ರಹ್ಮಹತ್ಯೆಯನ್ನು ನೋಡಿ, ಧಾರ್ಮಿಕನಾದ ಪ್ರತಾಪನು ಭೀತನೂ, ಸ್ತಂಭಿತನೂ ಆದನು. ತನ್ನ ಉದ್ಧಟತನಕ್ಕಾಗಿಯೂ, ಭ್ರಾತೃದ್ವೇಷ