ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ, ಬಿಟ್ಟು ಹೋದದ್ದರಿಂದ, ಕೋಟೆಯು ಅನಾಯಾಸವಾಗಿ ಮೊಗಲರ ವಶವಾ ಯಿತು. ಅಕಬರನು ಇದರ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ, ಕೋಟಾನಗರಕ್ಕೆ ಬಂದನು; ಇದನ್ನು ಕೈವಶಮಾಡಿಕೊಂಡು +ಗಾಡ್ರನ ಕೋಟೆಯ ಸಮೀಪದಲ್ಲಿ ಶಿಬಿರಬಿಟ್ಟನು. ಈ ಸ್ಥಳದಿಂದ ಚಿತೋಡವು ಪಶ್ಚಿಮಕ್ಕೆ ಸುಮಾರು ನೂರು ಮೈಲಿನ ಮೇಲೆ ಇತ್ತು.” ಅಕಬರನು ಈ ಸಮಯದಲ್ಲಿ ಮಾಳವದ ಕಡೆಗೆ ಸೈನ್ಯ ಕಳಿಸುವ ವ್ಯವಸ್ಥೆ ಯನ್ನು ಮಾಡುವದಕ್ಕೆ ಕೆಲವು ದಿವಸಗಳನ್ನು ಕಳೆದನು. ಈ ಅವಧಿಯಲ್ಲಿ ಅವನು ಮಂಡಲಗಡವನ್ನಾಕ್ರಮಿಸುವದಕ್ಕೆ ಅಸಫಖಾನನನ್ನೂ, ವಜೀರಖಾನನನ್ನೂ ಸಸ್ಯೆ ನ್ಯವಾಗಿ ಕಳಿಸಿದನು. ಮಂಡಲಗಡವು ಚಿತೋಡದ ಉತ್ತರಕ್ಕೆ ೩೦ ಮೈಲುಗಳ ಮೇಲಿರುವದು. ಇದು ಮಹಾರಾಣಾನ ಸ್ವಾಧೀನದಲ್ಲಿದ್ದು, ಇದರ ರಕ್ಷಣೆಯ ಭಾರವನ್ನು ವಲ್ಲಭೀ ನಾಳೆಂಕಿ ಎಂಬವನು ವಹಿಸಿದ್ದನು. ಇವನು ಯುದ್ಧದಲ್ಲಿ ಸೋತದ್ದರಿಂದ ಕೋಟೆಯು ಮೊಗಲರ ವಶವಾಯಿತು. ಇತ್ತ ಕಡೆಯಲ್ಲಿ ಬಾದ ಶಹನು ಚಿತೋಡದ ಸಮೀಪಕ್ಕೆ ಬಂದಿಳಿದನು (೧೫೬೭), ಅಕಬರನು ತಾನು ಶಿಬಿರಬಿಟ್ಟ ಸ್ಥಳದಲ್ಲಿ ಒಂದು ಸಂಗಮರವರಿ ಕಲ್ಲಿನ ಸ್ತಂಭವನ್ನು ಕಟ್ಟಿಸಿದನು. ಇದಕ್ಕೆ ಅಕಬರಕಾ-ದಿವಾ' ಅಧವಾ ಅಕಬರನ ದೀಪಸ್ತಂಭವೆನ್ನುವರು. ಈ ಕಂಬದ ಮೇಲೊಂದು ದೊಡ್ಡ ದೀಪವಿದ್ದಿತು. ಅದರಿಂದ ದೂರದಿಂದ ಶತ್ರು-ಮಿ ತ್ರರು ಬಾದಶಹನ ಶಿಬಿರವನ್ನು ನೋಡಬಹುದಾಗಿದ್ದಿತು. ಉದಯಸಿಂಹನು ಶಕ್ತನಿಂದ ಅಕಬರನು ದಂಡೆತ್ತಿ ಬರುವ ಸುದ್ದಿಯನ್ನು ಮೊದಲು ಕೇಳಿದನು. ತರುವಾಯ ಒಂದೂವರೆ ತಿಂಗಳ ಮೇಲೆ ಬಾದಶಹನು 'ಸಸೈನ್ಯನಾಗಿ ಚಿತೋಡಕ್ಕೆ ಬಂದನು. ಈ ಅವಧಿಯಲ್ಲಿ ಚಿತೋಡದ ರಕ್ಷಣೆಗಾಗಿ ಬೇಕಾದ ಸಿದ್ಧತೆಯು ಮಾಡಲ್ಪಟ್ಟಿತು. ಚಿತೋಡವು ದುರ್ಭೇದ್ಯವೂ, ದುರಾ ರೋಹವೂ ಇದ್ದುದರಿಂದ ಯಾವ ಶತ್ರುವೂ ಇದನ್ನು ಜಯಿಸಲಾರನೆಂದು ರಜ ಪೂತರ ಗ್ರಹಿಕೆಯಿತ್ತು. ರಾಣಾ ಸಂಗನ ಕಾಲದಲ್ಲಿ ಚಿತೋಡದ ಕೋಟೆಯ ಗೋಡೆಗಳ ಮತ್ತು ಬಾಗಿಲುಗಳ ಉತ್ತಮವಾದ ಸುಧಾರಣೆ ( ದುರಸ್ತಿ )ಯು + ಗಾಗ್ರನವು ಕೋಟಾ ಸಂಸ್ಥಾನದಲ್ಲಿರುವ ಒಂದು ವಿಖ್ಯಾತ ಕೋಟೆಯು ಇದು ಆಹು ಮತ್ತು ಕಾಲೀನದಿಯ ಸಂಗಮ ಸ್ಥಳದಲ್ಲಿದೆ Rajputana Gazetteer Vol II PP. 208-4 4