ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಮಹಾರಾಣಾ ಪ್ರತಾಪಸಿಂಹ w- - ಆಗಿತ್ತು. ಅದರಿಂದ ರಜಪೂತರು ಈ ವಿಷಯವಾಗಿ ಚಿಂತೆಯನ್ನು ವಹಿಸುವ ಕಾರಣವಿದ್ದಿಲ್ಲ. ಮೊಗಲರು ಒಂದುವೇಳೆ ಕೋಟೆಯನ್ನು ಬಹು ದಿವಸ ಮುತ್ತಿ ದರೆ ಅನ್ನದ ಕೊರತೆಯು ಬೀಳುವಂತಿತ್ತು. ರಜಪೂತರು ವಿಶೇಷ ಪ್ರಯತ್ನ ಮಾಡಿ ಕೆಲವು ವರ್ಷಗಳ ವರೆಗೆ ಸಾಲುವಷ್ಟು ಆಹಾರದ ಪದಾರ್ಥಗಳನ್ನು ಸಂಗ್ರಹಿಸಿ ಕೋಟೆಯಲ್ಲಿ ತಂದಿಟ್ಟರು. ಚಿತೋಡದಲ್ಲಿ ಜಲಾಶಯಗಳು ಸಾಕಷ್ಟು ಇದ್ದುದರಿಂದ ನೀರಿನ ಕೊರತೆಯು ಬೀಳುವಂತಿರಲಿಲ್ಲ. ಉದಯಸಿಂಹನು ಮೊದಲು ಹ್ಯಾಗೇ ಇರಲಿ, ವಿಪತ್ತು ಸಮೀಪದಲ್ಲಿ ಬಂದುದನ್ನು ನೋಡಿ ಕಾರ್ಯ ತತ್ಪರನಾದನು. ಸಾಮಂತ ಸರದಾರರು ವೇಳೆಯ ಮಹತ್ವವನ್ನರಿತು ಯಾವತ್ತೂ ಕಾರ್ಯಗಳನ್ನು ಉತ್ಸಾಹದಿಂದ ಮಾಡಿದರು. ಶತ್ರುಗಳಿಗೆ ಆಹಾರದ ಪದಾರ್ಧ ಗಳು ದೊರೆಯಬಾರದೆಂದು, ದುರ್ಗದ ಕೆಳಗಿರುವ ನಾಲ್ಕೂ ಕಡೆಯ ಭೂಮಿ ಯನ್ನು ಜನರಿಲ್ಲದಂತೆಯೂ, ಬೆಳೆಗಳಿಲ್ಲದಂತೆಯೂ, ಹುಲ್ಲು ಸಹ ಇರದಂತೆಯೂ ಮಾಡಿದರು. * ಇಂತಹ ಪ್ರದೇಶದಲ್ಲಿ ಅಕಬರನು ತನ್ನ ಶಿಬಿರವನ್ನು ಬಿಟ್ಟನು. ಉದಯಸಿಂಹನು ವಿಲಾಸಿಯಾಗಿ, ತನ್ನ ವೀರತ್ವಗೌರವಗಳನ್ನು ಮರೆತು ಬಿಟ್ಟಿದ್ದನು; ಆದರೆ ಮೇವಾಡವು ವೀರರಿಲ್ಲದಂತಾಗಿರಲಿಲ್ಲ. ಮಹಾರಾಣಾನು ಮನುಷ್ಯತ್ವವನ್ನು ಕಳೆದುಕೊಂಡಿದ್ದನು, ಆದರೆ ಸಾಮಂತರಾದ ಸರದಾರರು ಮನುಷ್ಯತ್ವವನ್ನು ಕಳೆದುಕೊಂಡಿರಲಿಲ್ಲ. ರಜಪೂತರು ಉದಯಸಿಂಹನ ವಿಷಯ ವಾಗಿ ಅನಾದರರಾಗಿರಬಹುದು; ಆದರೆ ಅವರು ಚಿತೋಡದ ವಿಷಯದಲ್ಲೆಂದಿಗೂ ಆದರವಿಲ್ಲದವರಾಗುವ ಸಂಭವವಿದ್ದಿಲ್ಲ. ಮೊಗಲ-ಸೈನ್ಯವು ಅನೇಕ ಮಾರ್ಗಗ ಳಿಂದ ಚಿತೋಡದ ಕಡೆಗೆ ಸಾಗಿಬರುತ್ತಲಿತ್ತು. ಚಾರಣರ ವೀಣೆಯ ಝಂಕಾರ ದಲ್ಲಿಯ ವೀರರಸ ಪದ್ಯಗಳು ರಜಪೂತರಲ್ಲಿ ಉತ್ಸಾಹವನ್ನುಂಟುಮಾಡುತ್ತಲಿದ್ದವು. ಅಕಬರನ ಆಕ್ರಮಣದ ಸುದ್ದಿಯನ್ನು ಕೇಳಿದ ಕೂಡಲೇ ಸಾಮಂತ ಸರದಾರರು ಚಿತೋಡದ ರಕ್ಷಣೆಯ ಸಲುವಾಗಿ ಗುಂಪು ಗುಂಪಾಗಿ ಬರಹತ್ತಿದರು. ರಾಣಾನ ಬಲಗೈಯಂತಿದ್ದ ಸಾಲುಂಬ್ರಿ ಕೋಟೆಯ ಅಧಿಪತಿಯಾದ ಸಹಿದಾಸನು, ತನ್ನ ಅಸಂಖ್ಯ ಚಂದಾಯತ್ ಸೇನೆಯೊಡನೆ, ಸೂರ್ಯತೋರಣದ ರಕ್ಷಣೆಗಾಗಿ ಬಂದನು; ಕೈಲಿಬಾರದಿಂದ ( ಜಗಾಯತ್ > ಕುಲತಿಲಕನಾದ ಪುತ್ತನು ಬಂದನು;

  • Akbardanah, Vol. II P. 464 (Major Price's translation)