ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರೋರ ವ್ರತ. ತರುವಾಯ, ಯಾವತ್ತರನ್ನು ಕರೆದು, ಆಹೇರಿಯಾ ಉತ್ಸವಕ್ಕೆ ಹೊರಡಲು ಸಿದ್ದ ರಾಗಬೇಕೆಂದು ಹೇಳಿದನು; ಸೇವಕರಿಗೆ ಕುದುರೆಗಳನ್ನು ಸಿದ್ದ ಮಾಡುವದಕ್ಕೆ ಅಪ್ಪಣೆಮಾಡಿದನು. ಎಲ್ಲ ಕಡೆಯಲ್ಲಿಯೂ ನವೀನ ಉತ್ಸಾಹದ ಸಂಚಾರವಾಯಿ ತು, ತೀವ್ರವೇ ಪ್ರತಾಪನು ತನ್ನ ಸಾಮಂತ-ಸರದಾರರೊಡನೆ ಬೇಟೆಗಾಗಿ ಹೊರ ಬಿದ್ದನು. ಅಂದು ಬಹು ಮೃಗಗಳನ್ನು ಬೇಟೆಯಾಡಿದರು. ಇದರಿಂದ ರಜಪೂತ ರಿಗಾದ ಆನಂದವನ್ನು ಹೇಳಲಾಸಲ್ಲ. ಯಾವತ್ತರೂ ಇನ್ನು ಹೊಸಯುಗವು ಪ್ರಾರಂಭವಾಯಿತೆಂದೂ, ಈ ಸಾರೆ ಸೂರ್ಯವಂಶದಲ್ಲಿ ಗೌರವ-ರವಿಯು ಉದ ಯಿಸಿದನೆಂದೂ ಭಾವಿಸಿದರು. ನವನು ಪರಿಚ್ಛೇದ. ಕಠೋರ ವ್ರತ, ಭಾರತಭೂಮಿಯೊಳಗಣಿತ | ಸಾರತರ ಪಿರಾಗಿಗಳುದಯಿಸಿರುವರವರೊಳ 11 ಶೂರಪ್ರತಾಪನಂತಹ | ಗೌರವ ಪಡೆದ ಸ್ವದೇಶ ಭಕ್ತರ್ವಿರಳರ್ || ೧ || ಪ್ರತಾಪಸಿಂಹನು ರಾಜ್ಯವನ್ನು ಹೊಂದಿದನು; ಆದರೆ ಆ ರಾಜ್ಯದಲ್ಲಿ ಅರ್ಧ ಬಲವಿದ್ದಿಲ್ಲ, ಜನರ ಬಲವೂ ಇರಲಿಲ್ಲ. ರಾಜಧಾನಿಯಾದ ಚಿತೋಡವು ಮೊಗ ಲರ ಆಧೀನವಾಗಿತ್ತು; ಅದರಿಂದ ಇಂದು ಚಿತೋಡದ ಮಹಾರಾಣಾನು ಮಾರ್ಗ ದಲ್ಲಿಯ ಭಿಕ್ಷುಕನಾಗಿದ್ದನು. ನಾಲ್ಕೂ ದಿಕ್ಕುಗಳಿಂದ ಮೊಗಲ-ಸೇನೆಯು ಬಂದು, ಮೇವಾಡದ ರಾಜ್ಯವನ್ನು ವ್ಯಾಪಿಸಹತ್ತಿತು. ಭಾರತಭೂಮಿಯ ಅತುಲೈಶ್ವರ್ಯದ ದೊಡ್ಡ ಭಾಗವು ಅಕಬರನ ವಶದಲ್ಲಿತ್ತು. ಅಕಬರನು ಆ ಯಾವತ್ತು ಧನವನ್ನು ರಜಪೂತರ ನಾಶಕ್ಕಾಗಿ ವೆಚ್ಚ ಮಾಡಲು ಹಿಂದೆಮುಂದೆ ನೋಡುತ್ತಿರಲಿಲ್ಲ. ಅಕ ಬರನ ಆಸ್ಥಾನದಲ್ಲಿ ಒಂಬತ್ತು ಮಂದಿ ದೊಡ್ಡ ಪಂಡಿತರು. ಇವರಿಗೆ ನವರತ್ನ ಗಳೆಂದು ಹೆಸರು. ಈ ಪಂಡಿತರು ಅಕಬರನಿಗೆ ಆಲೋಚನೆಯನ್ನು ಹೇಳುತ್ತಿ ದ್ದರು. ಅಕಬರನು ಚಿತೋಡದ ನಾಶಕ್ಕಾಗಿ ಪ್ರತಾಪಸಿಂಹನ ಕೇಡಿಗಾಗಿ, ಈ ಯಾವತ್ತು ಪಂಡಿತರ ಬುದ್ದಿಯ ಸಹಾಯವನ್ನು ಹೊಂದುತ್ತಿದ್ದನು. ಇವರೆಲ್ಲರ