ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಕರ್ಣಾಟಕ ಕಾವ್ಯಕಲಾನಿಧಿ ಗರುಡಿಯೋಲಗಸಾಲೆ ಹೋಮದ | ಹಿರಿಯ ನೆಲೆಯುಪ್ಪರಿಗೆ ಮಂಗಳ | ತರದ ಮಂದಿರ ದೇವಪೂಜೆಯ ನಿಳಯಗಳ ನೋಡಿ || ಅರಸಿಯರ ನೆಲೆವಾಡ ಮಿಕ್ಕಿನ | ತರುಣಿಯರ ಸಾಲೆಸೆವ ಕೋಟೆಯ | ವಿರಚಿಸಿದ ಮಣಿಮಯದ ಶಯಾಲಯಗಳೊಪ್ಪಿದುವು |೨೯|| ಸುಂದರದ ತೋಪಿನಲಿ ಬೆಳೆದಿಹ | ಗೊಂದಣದ ಫಲಭರಿತ ಭೂರುಹ | ದಿಂದ ನಾನಾವಿಹಗಸಂತತಿಯೊಂದು ಕಳಕಳದ || ಇಂದುಸಖತಾವರೆಯ ಕೊಳಗಳ | ಮುಂದೆ ನವಿಲುಯ್ಯಲೆಯ ಕ್ರೀಡಾ || ಮಂದಿರದ ಮಣಿಮಾಡವೆಸೆದುದನಂತರಚನೆಯಲಿ ||೬೦|| ಈ ಪರಿಯೋಳೆಸದಿರವಿನರಮನೆ | ಯಾಪರಿಯ ವಿಸ್ತರವನೆಲ್ಲವ || ನಾಪರಸ್ಪರವಯುತಂತಸ್ತಿಗರ ವಚನದು 18 ಈ ಪುರವ ಹೋಲುವನೆ ಪುರಗಳು | ಕಾಪುರಗಳೆಂದೆನುತ ಮನದೊಳ | ಗಾಪರಿಯ ಸಂತಸದೆ ರಾಜಾಲಯವನೊಳಪೊಕ್ಕ ||೬೧| ಹಲವು ಬಾಗಿಲ ಕಳೆಕಳೆದು ದಶ | ಗಳನು ಬರೆ ಮೈರಾವಣನು ಮನ | ದೊಳಗೆ ನಲಿಯುತ ಬಂದೆಗಿದೊಡೆ ತೆಗೆದು ಬಿಗಿಯ ! ಒಳಗಿನೋಲಗಸಾಲೆಗೀತನ | ನೊಲವಿನಿಂ ಕೈವಿಡಿದು ಕೊಂಡು | ಮೈ ಜುಹಿದನು ಮಣಿಖಚಿತಸಿಂಹಾಸನದಿ ರಾವಣನ ೬೨|| ತರುಣಿಯರ ಕೈಯಿಂದ ಪಡಿಗವ | ತರಿಸಿ ಚರಣವ ತೊಳೆದು ದಿವ್ಯಾಂ | ಬರದೆ ಗಂಧಾಕ್ಷತೆಗಳಿಂದುಪಚರಿಸಿ ವೀಳೆಯವ |