ರ್೨ ಮೈರಾವಣನ ಕಾಳಗ ಬಾಲವನು ತಲೆಗಿಂಬನೆಸಗುತೆ | ನೀಲಗಿರಿ ಪವಡಿಸಿದ ತೆಕದಲಿ | ಕಾಲುಗಳ ಮಡಿಸಿಯೊತ್ತೊಳುಗಳನಳವಡಿಸಿ | ಆಲಿಗಳ ನೆರೆ ಮುಚ್ಚಿ ಶ್ಯಾಸದ || ಹೊಯ್ಲಿನಲಿ ಗುರುಗುರಿಸುತೊರೆಯುತ | ತಾಳಿ ನಿದ್ದೆಯೊಳಿಪ್ಪ ಕಟಕವ ಕಂಡು ಬೆಗಾದ ||೩೫|| ನೆಗೆದು ವಿದ್ಯಾಧರರ ಗತಿಯಲಿ | ಜಗದೊಡೆಯನರಮನೆಯ ಹೊಕ್ಕನು || ಆಗಣಿತದ ಮಣಿಮಯುದ ಶಯ್ಯಾನಿಲಯದೆಡೆಗೈದಿ || ಹೊಗಿ ಕಾಣವು ನಿಗವ ತತಿ ಯೋ | ಗಿಗಳು ಬಯಸುವ ದಿವ್ಯಮರ್ತಿಯ | ಹೊಗರು ಮೋರೆಯ ದನುಜ ಕಂಡನು ಮಣಿಯ ಮಂಚದಲಿ || ಸುತ್ತುವಳಯದ ಸಕಲ ಕಪಿಗಳು | ಮತ್ತರಾಗಿರಲವರ ಕಾಣುತ | ಲುತ್ತಮದ ಪರಿಪೂರ್ಣಚಂದ್ರಮರಂತೆ ತೊಳತೊಳಗಿ || ಇತ್ತ ಮಲಗಿಹ ರಾಮಲಕ್ಷ್ಮಣ || ರತ್ತ ಚಿತ್ತ ವನಿತ್ತು ದನುಜನು | ಹತ್ತಿರದೆ ನೋಡಿದನು ಬೆಸೆಗಾದನು ಮಹೀಶ್ವರರ ||೩೫|| ಲೋಕವನು ಕುಕ್ಕಿಯೊಳು ಧರಿಸುವ | ಲೋಕವೆಲ್ಲ ವನೊಲಿದು ರಕ್ಷಿಪ | ಲೋಕಕೋಟಿಯ ರೋಮರೋಮಂಗಳೊಳಗಿಂಬಿಡುವ ಲೋಕಕರ್ತುವೆನಿಪ್ಪ ಮೂರುತಿ | ಲೋಕನಾಥನನಂತರೂಪನ | ನೇಕಗುಣಮಣಿ ರಾಮ ಲಕ್ಷ್ಮಣರುಗಳನೀಸಿದ |a೬|| ದನುಜನಳುಕುತ ಮಗುಳೆ ಹಿಗ್ಗುತ | ಮನದೊಳಗೆ ಶಂಕಿಸುತ ನಲಿಯುತ | ಅನುಚಿತವಿದೆಂದೆಂದವಜ್ಞತೆಗಳನ್ನು ಕಲ್ಪಿಸುತ ||
ಪುಟ:ಮಹಿರಾವಣನ ಕಾಳಗ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.