೪೨ ಕರ್ಣಾಟಕ ಕಾವ್ಯಕಲಾನಿಧಿ ಕಡುಗಲಿ ಹನೂಮಂತ ಸರಸಿಯ | ತಡಿಯೊಳಸುರೆಯ ಕಂಡು ವಿನಯದಿ | ನುಡಿಸಿದನು ಕಾಮನ ಸುವಾರ್ತೆಯನವ ತವಕದಲಿ ||೩|| ತಾಯೆ ನಿಮಗೀದುಗುಡವೇಕೆನು | ತಾಯತದಿ ಬೆಸಗೊಂಡನಾಕೆಯ, | ಬಾಯ ಬಿಡುತು ಹೇಳಿದಳು ದುಃಖಗಳ ದುಸ್ಥಿತಿಯ || ರಾಯರಿಬ್ಬರ ತಂದು ರಕ್ಕಸ | ನಾಯಿಯೆನ್ನ ಕುಮಾರಸಹಿತವು | ಪಾಯದಲಿ ಮವರನು ಕೊಲುವನೆನುತ್ತೆ ಮಲಗಿದಳು ||೪|| ಆಕುಮಾರಕನೆನ್ನ ಸುತ ಲೋ | ಕೈಕವೀರನು ವೈಷ್ಣವಪ್ರಿಯ || ಕಾಕುತನದಲಿ ಕೊಲುವನೆಂದಳು ಹಗೆಗಳೊಡಗೂಡಿ || ಏಕೆ ದುಃಖವೊ ಶಿಶುವಿನಲಿ ಜನ | ಲೋಕವಿಂತಿದ ನೋಡಲಮ್ಮದು | ಶೋಕರೂಪವು ಕೇಳು ಕಪಿವರಯೆಂದಳಾದನುಜೆ ||೫|| ಕಂಕಣಾದೇವಾಲಯದ ನಿ | ಶಂಕರಹ ಮೂವರನು ಮಲಗಿಸಿ | ಶಂಕೆಯಿಲ್ಲದೆ ಮಂತ್ರದಿಂ ದೇವತೆಯನರ್ಚಿಸುತ || ಪಂಕಜವ ನೀ ಹೋಗಿ ಬೇಗದಿ | ಶಂಕಿಸದೆ ಭರದಲಿ ತಹುದೆನೆ ? ಭೋಂಕನೆಕ್ಕಿದೆನೆಂದು ನುಡಿದಳು ಹನುಮಗಾದನುಜೆ ||೬|| ಕೇಳಿದನು ಹನುಮಂತ ಲಕ್ಷ್ಮಿ | ಲೋಲಲಕ್ಷ್ಮಣರುಗಳ ಕುಶಲವ | ತಾಳಿದನು ಹರುಷವನು, ನೊಂದನು ಬಂಧನಸ್ಥಿತಿಗೆ || ಹೇಳಿದೆಯಲಾ ಒಸಗೆಯನು ನೀ || ತಾಳದಿರು ಮನದೊಳಗೆ ಚಿಂತೆಯ | ಕೇಳು ಭಾಷೆಯನನುತ ನುಡಿದನು ಹನುಮನಂಗನೆಗೆ ||೭||
ಪುಟ:ಮಹಿರಾವಣನ ಕಾಳಗ.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.