ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿರಿ ಮಾಡಿದ್ದುಣ್ಣೆ ಮಹಾರಾಯ, ವಿತ್ತು. ಮೈಸೂರಲ್ಲಿ ಈತನ ಸೋದರಮಾವನು ಅರಮನೆ ಯಲ್ಲಿ ಸಮ್ಮು ಖದ ವಿದ್ವಾಂಸನಾಗಿದ್ದನು. ಪಶುಪತಿಸಾಂಬಶಾ ಸ್ತ್ರೀ ಎಂದು ಆತನ ಹೆಸರು. ಇವನಿಗೆ ಅರಮನೆಯಲ್ಲಿ ವಿವರ ಸರ ಸಂಬಳವೆಂತ ತಿಂಗಳಿಗೆ ೫ ನರಸ ಬರುತಾ ಇತ್ತು. ಆಗಿನ ಕಾಲದಲ್ಲಿ ಇದು ಭಾರೀ ಸಂಬಳವೆನಿಸಿಕೊಂಡಿತ್ತು. ಈ ನೋ ದರಮಾವನ ಮೂಲಕ ಸದಾಶಿವದೀಕ್ಷಿತನು ಆಗಾಗ್ಗೆ ಅರನುನೆ ಗೆ ಹೋಗಿ ತನ್ನ ಮಾವನಸಂಗಡ ಸಭೆಯಲ್ಲಿ ಕೂತುಕೊಳ್ಳು ತ ಇದ್ದನು. ಶಾಸ್ತ್ರವಿಚಾರ ಬಂದಾಗ ಪಾಂಡಿತ್ಯದ ಕೆಚ್ಚು ಸುಮ್ಮ ನೇ ಇರಗೊಡಿಸುತಿರಲಿಲ್ಲ. ತಾನೂ ಬಾಯಹಾಕಿ ಚರ್ಚೆ ಗೆ ನುಗ್ಗುತ್ತಿದ್ದನು. ಒ೦ದಾನೊಂದುದಿವಸ ಅರಮನೆಯು ನಾನು ತೀರ್ಧದ ತೊಟ್ಟಿಯಲ್ಲಿ ಖಾಸಾ ಶಿವಪೂತಿ ನಡೆಯುತ್ತಿರುವಾಗ ಯಾವುದೋ ಒಂದು ಶಾಸ್ವಾರ್ಧವಿಚಾರ ಬಂತು. ಆಗ ಸದಾ ಶಿವದೀಕ್ಷಿತ ಮಾಡಿದ ವಾ ಕ್ಯಾರ್ಧ ವನ್ನು ಕೇಳಿ ಕೃಷ್ಮರಾಜ ಭುವು ಸಂತೋಇಸಮ್ಮು-ಇವನು ಯಾರಯ್ಯ ಸಿಡಿಲಮರಿಯಾ ಗಿದಾನೆ, ಎಂದುಹೇಳಿ ಆದಿನವೇ ೨ ವರಹ ಸಂಬಳವನ್ನು ನಾ ಡಿಕೊಟ್ಟರು. ವಾಂಡಿತ್ಯವಿದೆಯೆಂದರೆ ಸಾಕು. ಯಾರ ಒತ್ತಾ ಸೆಯ ಅಗತ್ಯವಿಲ್ಲದೆ ಪ್ರಭುವು ಗುಣದಲ್ಲಿ ಪಕ್ಷವಾತವನ್ನಿಟ್ಟು ಪುರಸ್ಕಾರಮಾಡುತಿದ್ದ ರು. ಹೀಗೆ ಸದಾಶಿವದೀಕ್ಷಿತನ ಯೋಗ್ಯತೆಗೆ ರಾಜಪೂಜ್ಯತೆಯೂ ಉಂಟಾಗಿತ್ತು. ಆದಾಗ್ಯೂ ತಾಯಿ ಮುದುಕಿ, ಮಗು ಇನ್ನೂ ಎಳೇದು, ಮನೆಯಲ್ಲಿ ಬೇರೆ ಹೆಣ್ಣುದಿಕಾ ಗಲಿ ಗಂಡುದಿಕಾಗಲಿ ಯಾರೂ ಇರಲಿಲ್ಲ. ಈ ಕಾರಣಕ್ಕಾಗಿಯೂ, ಸೋದರಮಾವನ