ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಮಾಡಿದ್ದು ಮಹಾಲಯ, ವನ್ನು ತಬ್ಬಲಿವಾಡಿ ಹೋಗುತ್ತೀಯ ? ತಾಯಿ, ನಿನಗೆ ಯಾರೇನುಮಾಡಿ ಅವರ ಕೈಸೇದಿಸಿಕೊಂಡರೇ ? ಅವರ ಮನೆ ಹಾಳಾಗ, ಅಯೋ ದೇವರೇ ! ನಿನಗೆ ವಾಸಿಯಾಗಲಿ ಎಂದು ಹದಿನೆಂಟು ದೇವರಿಗೆ ಹರಕೆ ಹೊತ್ತೆನ, ಕೊಲ್ಲಾಪುರದ ಅಮ್ಮ ನ ಗುಡಿಗೆ ತಂಬಿಟ್ಟಿನ ದೀಪಾ ವಾರವಾರಕ್ಕೂ ಹೊತ್ತೆ ನಲ್ಲಮ್ಮ, ನಮ್ಮ ಭಾಗಕ್ಕೆ ಯಾವ ದೇವರೂ ಇಲ್ಲದೇ ಹೋಯಿತೇ ? ಅಯ್ಯೋ ಸೀತ, ಸೀತಮ್ಮ, ಅಯ್ಯೋ ನಿಧಿ ಯೇ, ನಾವು ಏನು ಪಾಪಮಾಡಿದೆವು ? ಹಾಳ ಜವರಾಯನೇ, ನನ್ನ ಸೊಸೆ ಇಲ್ಲದಿದ್ದರೆ ನಿನ್ನ ಪಟ್ಟಣ ತುಂಬುತಿರಲಿಲ್ಲವೇ ನೋ, ಈ ಬೆಳದಿಂಗಳ ಮುಖವಿಲ್ಲದಿದ್ದರೆ ನಿನ್ನ ಹಾಳಪ ತೃಣ ಬೆಳಕಾಗುತಿರಲಿಲ್ಲವೇನೋ, ಪಾಸೀ, ಯಾರೂ ಕಂಡಿ ರಲಿಲ್ಲ ಯಾರೂ ಕೇಳಿರಲಿಲ್ಲ, ಅಂಧಾ ರೋಗ ಬಂತೆ ನಿನಗೆ? ಅಯ್ಯೋ ಮಗುವೇ ಕೃಷ್ಮಿ ನಿನ್ನ ಗೋಳನ್ನು ನಾನು *ಕೇಳಿ ಹೇಗೆ ಸಹಿಸಲೋ ನಾನು ಹೇಗೆ ಹೊಟ್ಟೆ ಹಿಡಿಯು ಲೋ ಅಪ್ಪಯ್ಯಾ ? ನಾನು ಒಂದು ದಿವಸವಾದರೂ ನಿನ್ನ ಸಂಗಡ ನೆಟ್ಟಗೆ ಮಾತನಾಡಲಿಲ್ಲವಲ್ಲೇ, ಇನ್ನು ಮೇಲೆ ನಾನು ಸರಿಯಾಗಿ ಮಾತನಾಡುತ್ತೇನೆ. ನಾನು ನಿನಗೆ ಕೈಮುಗಿಯು ತೇನೆ. ನನ್ನ ಅಪರಾಧವೇನಿದ್ದರೂ ಕ್ಷಮಿಸಿಬಿಟ್ಟು ಏಳಮ್ಮ, ಹಾ ಸೀತಾ, ಸೀತಾ ! ಎಂದು ತಿಮ್ಮಮ್ಮ ನು ಬಗೆಬಗೆಯಾಗಿ ಹಾಡಿಹಾಡಿ ಹಲ್ಲುಬಿ ಹಲುಬಿ, ಹೆಣದಮೇಲೆ ಬಿದ್ದು ಹೊರ ೪ಾಡುತಾ ನೆಲದಮೇಲೆ ಬಿದ್ದು ಉರುಳಾಡುತಾ, ಹಣೆ ಚೆಚ್ಚಿ ಕೊಂಡು, ಎದೆ ಎದೆ ಬಡಿದುಕೊಂಡು ಬಾಯಿಬಾಯಿ ಬಡಿದುಕೊ