ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಮಾಡಿದ್ದುಣೋ ಮಹಾರಾಯ, ವುದನ್ನು ನೋಡಿದರೆ ನನಗೂ ಬಹಳವಾಗಿ ಅಳುಬರು ತೆ, ನನ್ನ ಮುಖವನ್ನು ಸಂತರು ನೋಡಿ ನೀನು ಯಾಕೆ ಅಳುತೀಯಾ ಎಂದು ಕೂಗುತಾ ಬೆತ್ತದಿಂದ ನನ್ನನ್ನೂ ಸೆಳೆಯುತ್ತಾರೆ. ಪುಂಡಮಾತ ಬೈಯ್ಯುತಾರೆ. ಸದಾ-ನಾನು ಸಂತರನ್ನು ಕಂಡು ಹೊಡೆಯಬೇಡಿ ಎಂದು ಹೇ ಳುತ್ತೇನೆ. ನೀನು ಈ ದಿವಸ ಹೋಗಿಬಾ. ಹೀಗೆ ತಂದೆ ಮಕ್ಕಳು ಮಾತನಾಡುತ್ತಾ ಇರುವಾಗ, ಮಠದಿಂದ ಇಬ್ಬರು ಹುಡುಗರು ಬಂದು ಮಹಾದೇವ, ಯಾ ಕಪ್ಪ ಮಠಕ್ಕೆ ಬರಲಿಲ್ಲ ? ಸಂತರು ಕರೆದುಕೊಂಡು ಬರಹ ಳಿದರು, ನಿಮಗೆ ಆಗುತ್ತೆ ಬನ್ನಿ, ಎಂದರು. ಆಗ ಮಹಾ ದೇವನು ಅಳುತಾ ತಂದೆಯ ಮುಖವನ್ನು ನೋಡಿ ಬಿಕ್ಕಳಿ ಸುತಾ ನಿಂತು ಕೊಂಡನು. ಆಗ ಸದಾಶಿವದೀಕ್ಷಿತನು ತನ್ನ ಮನಸ್ಸಿನಲ್ಲಿ-ಅಯ್ಯೋ, ಈ ಉವಾಧ್ಯಾಯನು ಯಾಕೆ ಹೀಗೆ ಹುಡುಗರನ್ನು ಹೊಡೆಯುತಾನೋ ತಿಳಿಯದಲ್ಲ. ಹೊಡೆದರೆ ವಿದ್ಯಬರುತ್ತೆಯೆ ? ಮಕ್ಕಳು ಇದ್ದದ್ದೂ ಮಂಡಿಗೆ ಬೀಳು ತಾರೆ. ಅವರಿಗೆ ಹೆಚ್ಚಿನ ಭಯದಲ್ಲಿ ಬಂದರೂ ಮರೆತು ಹೋಗುತ್ತೆ ಎಂದುಕೊಳ್ಳುತಾ, ಮಠದ ಹುಡುಗರನ್ನು ಕು ರಿತು-ಎ ಹುಡುಗರ, ನಮ್ಮ ಮಹಾದೇವನನ್ನು ಹೊಡೆಯ ಬೇಡಿ ಎಂದು ಸಂತರಿಗೆ ಹೇಳಿ, ನಾನು ಹೇಳಿದರು ಎಂದು ಹೇಳಿ, ಹೀಗೆಂದು ಮಹಾದೇವನನ್ನು ಸಾಲೆಗೆ ಕಳುಹಿಸಿದನು. ಪಂತನು ಮಠದ ಬಾಗಿಲಲ್ಲಿ ಉದ್ದವಾದ ಸಂಣ ಬೆತ್ತವನ್ನು ಹಿಡಿದು ಅಲ್ಲಾಡಿಸುತ್ತಾ ದೂರದಲ್ಲಿಯೇ ಹುಡುಗರ ಸಂಗಡ