ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ಮಾಡಿದ್ದುಣೋ ಮಹಾರಾಯ, ಬೆಟ್ಟವನ್ನು ಹತ್ತಿ ಬೆಟ್ಟವನ್ನು ಇಳಿದುಕೊಂಡು ಹೋಗಿಬ ರುತಿದ್ದರು. ಒಂದುಸಾರಿ ಹೋಗಿಬಂದ ದಾರಿಯಲ್ಲಿ ಪುನಃ ತಿರಗಾಡುತಿರಲಿಲ್ಲ. ಇವರ ಬಟ್ಟೆ ಇಂಥಾದ್ದೆಂದು ಯಾರಿಗೂ ಗೊತ್ತಿಲ್ಲ. ಊರಬಿಟ್ಟು ಇವರು ಹೊರಟಮೇಲೆ ಇವರ ಹೆ ಸರು ವೇಷ ಬೇರೆಬೇರೆಯಾಗುತಿತ್ತು. ನೆಟ್ಟಗೇಗಾಡಿ, ನಾ ರೋಳುಗಾಡಿ, ಜಿಂಕೆ, ಕರಡಿ, ಹಂದಿ, ನೆಲಗವಿಸಿದ್ದೇಶ್ವರ, ನಾಗರಮುರಿ, ಹೀಗೆ ಬಗೆಬಗೆಯಾಗಿ ಹೆಸರನ್ನು ಇಟ್ಟುಕೊಂಡಿ ದೂರು. ಇದಕ್ಕೆ ಸರಿಯಾಗಿ ವೇಷವನ್ನೂ ಬದಲಾಯಿಸಿಕೊ ಳ್ಳುತಿದ್ದ ರು. ಹೆತ್ತ ತಾಯಿಬಂದು ನೋಡಿದರೂ ಇಂಥವನೇ ತನ್ನ ಮಗನೆಂದು ಕಂಡುಹಿಡಿಯುವುದು ಕಷ್ಟವಾಗುವಹಾಗೆ ವಿರೂಪ ಮಾಡಿಕೊಳ್ಳುತಿದ್ದರು. ಇವರಿಗೆ ಕನ್ನಡ ತೆನಗು ಅರವು ಮಲೆಯಾಳಿ ಹಿಂದುಸ್ತಾನಿ ಕೂರಚರಮಾತು ತೊದ ವರನಾತು ಅಂಬಾಣಿಯವರಮಾತು ಇದೆಲಾ ಬರುತಿತ್ತು. ಕೊಡಗರ ಮಾತನ್ನೂ ಆಡುತಿದ್ದ ರು. ಹಣೆಮಟ್ಟದ ದೊಣ್ಣೆ ಒಂದು, ಕೈಬಾಕು ಒಂದು, ಇದು ಒಬ್ಬೊಬ್ಬರಲ್ಲಿಯೂ ಇರು ತಿತ್ತು. ತಮ್ಮ ಕೆಲಸಕ್ಕೆ ಬೇಕಾದ ಇತರ ಸಾಮಾನುಗಳ ನ್ನು ತೆಗೆದುಕೊಂಡು ಕಣವೇ ಕೆಳಗೆ ದೊಡ್ಡ ಊರುಗಳಿಗೆ ಹೋಗಿ ಅಲ್ಲಿ ಜೋಗಿ, ಜಂಗಮ, ದಾನ, ಗೊರವ, ಪಂ ಡಾರ, ಬುಡುಬುಡಕೆ, ಕೊರವಂಜಿ, ಇದೇ ಮೊದಲಾದ ವೇ ಷಗಳನ್ನು ಹಾಕಿಕೊಂಡು ಬೇರೆಬೇರೆ ಇರುತಿದ್ದರು. ಕೆಲ ವರು ಭಾರಿವರ್ತಕರ ವೇಷವನ್ನೂ ಇನ್ನು ಕೆಲವರು ಬ್ರಾ ಹ್ಮಣರ ವೇಷವನ್ನೂ ಹಾಕಿಕೊಂಡು ಇರುತಿದ್ದರು. CP