ಮಾತೃನ೦ದಿನಿ . 37 ಸುರಸೆ:-ಹೇಗಾದರೂ ಹೇಳು; ನನಗೆ ಕೊರತೆಯಿಲ್ಲ. ನನ್ನ ಅಣ್ಣ ನಾದರೆ,-ನಂದಿನಿಯು ಎಲ್ಲಿದ್ದರೂ ನನಗೆ ಕೇವಲ ಸಮೀಪದಲ್ಲಿರು ವಂತಯೇ ತಿಳಿಯುವುದು. ಅವಳು ಈ ಊರಲ್ಲಿರುವಾಗ ಅವಳ ಸಂದರ್ಶನ 'ಸಂಭಾಷಣಗಳು ಎಷ್ಟು ಸುಲಭವಾಗಿ ದೊರೆಯುವವೋ, -ಅಷ್ಟೆ ಸುಲಭ ವಾಗಿ, ಅಥವಾ ಅದಕ್ಕೂ ಹೆಚ್ಚಿನ ಸುಲಭರಿತಿಯಿಂದ ಅವಳ ಸರಸ ಪ್ರ ಸಂಗವ ನನಗೆ ದೊರೆಯುತ್ತದೆ. ಅದಲ್ಲದೆ ಅವಳು ಇಲ್ಲಿರುವಾಗ ಹೋಗಿ ನೋಡಬೇಕೆಂದರೆ, ನನ್ನ ಸಂಗಡಿಗರು ತಾವೂ ಬರಬೇಕೆನ್ನುತ್ತಿರು ಇದರಿಂದ ಅವರನ್ನು ವಂಚಿಸಿ ಹೋಗಬೇಕಾಗುತ್ತದೆ. ಹಾಗೆ ಒಂದುವೇಳೆ ಅವಳು ಅಲ್ಲಿಂದ ಮತ್ತೆ ಹೊರಟು ಹೋದರೆ ಅವಳ ತಂದೆಯ ಒಳಗೇ ಹೋಗುವಳು. ಹಾಗಾದರೆ ನನಗೆ ವಾರಕ್ಕೊಂದಾವರ್ತಿಯಾದರೂ ತಪ್ಪದೆ ಗುರು ಪಾದಸೇವೆ, ಮಾತೃಮಂದಿರದ ವಾಸದಿಂದಾಗುವ ಪವಿತ್ರತೆ, ನಂದಿ ನಿಯ ಸರಸಪ್ರಸಂಗ ಲಾಭದಿಂದಾಗುವ ಉತ್ಸಾಹ, ” ಎಂಬೀ ಲಾಭತ್ರಯ ಗಳು ದೊರೆತಂತಾಗುವುವು. ಹೀಗಿರುವಾಗ ನನಗೇಕೆ ಚಿಂತೆ? " ಎಂದು ಹೇಳತ್ತಿರುವನು. ಆತನಾದರೂ ಗಂಡಸು; ಬೇಕೆಂದು ತೋರಿದಾಗಲೇ, ಎಲ್ಲಿಗಾದರೂ ಹೋಗಿ ಬರಬಲ್ಲನು. ಹೆಂಗಸರಾದ ನಮಗೆ ಹಾಗಾಗುವು ದೇನು ? ಮನೆಯಿಂದ ಮತ್ತೊಬ್ಬರ ಮನೆಗೆ ಹೋಗಬೇಕೆಂದರೆ ಕೂಡ, ಎಷ್ಟೋ ಹೊತ್ತ ಸವರಿಸಬೇಕಾಗುತ್ತದೆ. ಹಾಗೆಂದಬಳಿಕ, ಉರುಬಿಟ್ಟು ಹೊರಡುವುದಕ್ಕೆ, ಅದರಲ್ಲಿಯೂ ಎಲ್ಲಿಯೂ ಒಂದು ಕಾಡುಸೀಮೆಯಲ್ಲಿ ರುವವರನ್ನು ನೋಡಲು ಹೊರಡಬೇಕೆಂದರೆ, ಹೇಗಾಗುವುದು? ಸಹಾ ಯಕ್ಕೆ ಬರುವವರಾರು ? ಸುಮ್ಮತಿಯನ್ನು ಕೊಡುವವರಾರು ? ಇದೇ ನಮಗೆ ಹಿಡಿದಿರುವ ಕಳವಳವು. ಇದಕೋಸ್ಕರವೇ ನಾನು ಹಾಗೆ ಹೇಳಿದುದು, ನಂದಿನಿ:-ತಲೆದೂಗಿ ಭಲೆ! ಸುರಸೆ! ಭಲೆ !! ನೀನೂ ನಿಪುಣೆ; ನಿನ್ನ ಅಣ್ಣನಂತೂ ನಿಪುಣರಿಗೆಲ್ಲಾ ಉಪದೇಶಿಯೇ ಸರಿ. ಹೇಳಿ-ಕೇಳುವುದೆ ಲ್ಲವನ್ನೂ ಚಾಟೂಕ್ತಿಯಿಂದ ಎಷ್ಟು ಚೆನ್ನಾಗಿ ಹೇಳುತ್ತಿರುವೆ? ಅಜ್ಜ ! ನೀನೇನು, ಸಾಮಾನ್ಯದವಳೇನು ? ಸುಧಾರಕಾಗ್ರಣಿಗಳಾದ ಶರಚ್ಚಂದ್ರನಾಥ ರವರ ಪುತ್ರಿ; ಕಾಲ-ದೇಶ-ವರ್ತಮಾನಗಳ ಸ್ಥಿತಿಗತಿ-ವಿಚಾರಗಳನ್ನು ತಿಳಿದ ಪ್ರಜ್ಞಾವಂತನಾದ ಅಚಲಚಂದ್ರನ ನೆಚ್ಚಿನ ತಂಗಿ; ಮತ್ತೂ ಧರ್ಮಸೂಕ್ಷ
ಪುಟ:ಮಾತೃನಂದಿನಿ.djvu/೧೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.