ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಮಾತೃನ౦ದಿನಿ ತುಂಬುವುದನ್ನೂ ಮರೆತಿರಬಾರದು. ಇದೆಲ್ಲವೂ ಮುಗಿಯುವ ವೇಳೆಗೆ, ಆಗಲೇ ರಾತ್ರಿಯೂ ಆಗುತ್ತದೆ. ಆಬಳಿಕಂತೂ ನೀವು ಮಾಡುವುದಿನ್ನೇನಿದೆ??

   ಸುರಸೆ:-ನಂದಿನಿ! ನಿನಗೆ ಚೆಲ್ಲಾಟವಾಗಿದೆ. ನನಗೆಂದರೆ ಪ್ರಾಣ ಹೋಗುತ್ತಿದೆ. ಅವರ ಬಳಿಯಲ್ಲಿರುವಾಗ ಅವರು ಹೇಳುವಂತೆ ಕೇಳದಿದ್ದರೆ, ನನ್ನ ಅವಸ್ಥೆಯು ಹೇಗಾಗುವುದೋ ಎಂಬ ಭೀತಿ; ಹಾಗೂ ಧೈರ್ಯ ಹೊಂದಿ ಅವರಿಗೆ ನೀತಿಯನ್ನು ಹೇಳಬೇಕೆಂದು ಮನದಲ್ಲಿ ನಿಶ್ಚಯಿಸಿಕೊಂಡಿದ್ದರೂ, ಇದಿರಿಗೆ ಕಂಡಾಗ ನಾಲಿಗೆ ಹಿಂದಕ್ಕೆಳೆಯುತ್ತಿರುವುದಲ್ಲದೆ, ತಾಯ್ತಂದೆಗಳ ಮಾತನ್ನೇ ಕೇಳದವರಿಗೆ ನನ್ನ ಮಾತು ಗಣನೆಯಾಗುವುದೇನಂಬ ಶಂಕೆಯೂ ಹುಟ್ಟಿ, ಮನದಲ್ಲಿ ಮಾಡಿಟ್ಟ ಮಂಡಿಗೆಯನ್ನು ಹಾಗೆಯೇ ಮುಗಿಸಿ ಬಿಡಬೇಕಾಗುತ್ತದೆ. ಅವರ ಬಳಿಯಲ್ಲಿಲ್ಲದೆ ಉಳಿದೆಡೆಯಲ್ಲಿರುವಾಗ ನಾನು ಹಾಗೇನಾದರೂ ಸೋಮಾರಿಯಾಗಿಯಾಗಲೀ, ಸೊಗಸುಗಾರ್ತಿಯಾಗಿಯಾಗಲೀ ನಲಿಯುತ್ತಿರುವೆನೆಂದು ತಿಳಿದೆಯೇನು? ನಂದಿನಿ ! ಇನ್ನೂ ನಿನಗೆ ಅಬಗೆಯ ಶಂಕೆ ಬಿಡದಿದ್ದರೆ ಇನ್ನಾದರೂ ಬಿಟ್ಟು ಬಿಡಬೇಕೆಂದು ಕೇಳುತ್ತೇನೆ. ನನಗೆ ಅದಾವುದೂ ಬೇಕಾಗಿಲ್ಲ. ನಾನೇನು ಮಾಡಲಿ? ನಮ್ಮ ಅಣ್ಣನಂತೆಯೇ ನನ್ನ ಸ್ವಾಮಿಯೂ ದೇಶಭಕ್ತರಲ್ಲಿ ಒಬ್ಬರಾಗಿರಬೇಕೆಂಬ ಆಶೆ ಬಲವಾಗಿದೆ. ಆದರೆ,... ಅದಕ್ಕೆ ಅದೃಷ್ಟವೇ ಕಾರಣವಲ್ಲವೇ? ಸುಮ್ಮನೆ ಅತ್ತರಾದೀತೆ?
  ನಂದಿನಿ:-ಸುರಸೆ? ನೀನು ನನ್ನ ಸ್ವಭಾವವನ್ನು ಚೆನ್ನಾಗಿಯೂ ತಿಳಿದಿರುತ್ತೀಯಾದುದರಿಂದ ಈಗಿನ ನನ್ನ ಶ್ರೇಷ್ಲೋಕ್ತಿಗೆ ಅಸಮಾಧಾನಗೊಳ್ಳುವುದಿಲ್ಲವೆಂದೇ ನನ್ನ ನಂಬಿಕೆಯಾಗಿದೆ, ಏಕೆಂದರೆ,- ನಾನು ಸಮಯ ಸಿಕ್ಕಿದಾಗ, ಸ್ತ್ರೀಸಮಾಜವನ್ನು ಸುತ್ತಿ ಕಾಡುತ್ತಿರುವ ಅವಿಚಾರಗಳನ್ನು ಹೇಳದೆ ಬಿಡುವವಳಲ್ಲ. ಅದನ್ನು ಹೇಗಾದರೂ ಹೇಳಿಯೇ ಬಿಡಬೇಕಲ್ಲದೆ ಸುಮ್ಮನಿರುವುದು ನನ್ನ ಶೀಲವಾಗಿಲ್ಲ. ಇದಕ್ಕೆ ನೀನು ಬೇರೆಬೇರೆ ಅರ್ಥವನ್ನು ಕಲ್ಪಿಸಿಕೊಂಡು ಖತಿಗೊಳ್ಳುವುದು ಸರಿಯಲ್ಲ. ನಾನು ನಿನಗಾಗಿ ಇದನ್ನು ಹೇಳಿದುದಿಲ್ಲ. ಈ ಕಾಲದ ಹಣದ ಸೊಕ್ಕೇರಿ, ಸುತ್ತುಮುತ್ತಲ ದುರ್ವಿಷಯಗಳ ಮುತ್ತಿಗೆಯಿಂದ ತಮಗಾಗುತ್ತಿರುವ ಅಪಾಯವನ್ನೂ