101 ಮಾತೃ ನಂದಿನಿ ಮುಂದಾಗಿಯೇ ಹೋಗಿ ಎಲ್ಲರೊಡನೆ ನಾವೂ ಸೇರಿ, ನಮ್ಮ ಕೈಲಾದ ಉಪಕರಣಗಳನ್ನು ಸಿದ್ಧಪಡಿಸುವುದು ಸಹಜವಲ್ಲವೆ? ನಿಜ! ಮೇಲೆಮೇಲೆ ಆಳುಗಳನ್ನು ಬರಮಾಡಿಕೊಂಡು ಅಬ್ಬರದ ಮನ್ನಣೆಯಿಂದ ಜಗ್ಗು ಹಾಕುತ್ತ ಹೋಗುವವರ ಮಾತು ನಮಗಿಲ್ಲ. ಆದುದರಿಂದ ನಮ್ಮ ಸುಹೃದಯ ವಾಚ ಕರೇ ನಡೆಯಿರಿ; ನಮ್ಮೊಡನೆ ನೀವೆಲ್ಲರೂ ಉತ್ಸವಕಾರ್ಯದಲ್ಲಿ ಸಹಾಯಕರಾಗಬೇಕಾಗಿದೆ. ಅದೇನು ಹೇಳುವಿರಿ? “ ನೀವಂತೂ ಆಮಂತ್ರಿತರಾಗಿರುವಿರಿ. ಹೋಗುವುದು ಸಹಜ. ನಾವೇಕೆ ಬರಬೇಕು ? 'ಕರೆಯದವರ ಮನೆಗೆ ಇರಲಾರದೆ ಹೋದರು' ಎcಬ ನಾಮಿತಿಯಂತೆ ನಮಗಲ್ಲಿ ಕೆಲಸವೇನು?” ಚಿಃ, ಚಿಃ !! ಹಾಗೆನ್ನಬಾರದು, ಸಾಹೃದಯರೇ! ನಮ್ಮ ಚಕ್ರವರ್ತಿ ಯವರಾಗಲಿ, ಅವರ ಮನೆಯವರಲ್ಲಿ ಯಾರೇ ಆಗಲಿ, ಅಂತಹ ದುರಭಿಮಾನವುಳ್ಳವರಾಗಿಲ್ಲ. ಅಲ್ಲದೆ ಅವರಿಗೆ ನಮ್ಮಲ್ಲಿ ಅಕೃತ್ರಿಮವಾದ ವಿಶ್ವಾಸವೂ, ಅವರಲ್ಲಿ ನಮಗೆ ಸಂಪೂರ್ಣವಾದ ಗೌರವವೂ ಇರುವುದು. ಹೀಗೆ ನಿರ್ದುಷ್ಟ-ಪವಿತ್ರ ಸ್ನೇಹದಿಂದ ಧರ್ಮಪಾಶಬದ್ಧರಾಗಿರುವ ನಮ್ಮಲ್ಲಿ ನೀವು ಭೇದವನ್ನು ಹೇಗೆ ಕಲ್ಪಿಸುವಿರಿ? ಅವರೇ ಬಂದು ಕರೆಯಬೇಕೆಂಬುದು ಮೂರ್ಖತನವು, ಅವರಿಗೆ ಪ್ರತಿನಿಧಿಗಳಾಗಿ ನಾವೇ ನಿಮಗೆ ಇದೇ ಅಕ್ಷತೆ ಕೊಟ್ಟು ಕರೆದಿರುವೆವಷ್ಟೆ. ಇನ್ನೂ ಸಂಶಯವೇನು ? "ಹೇಗಾದರೂ ಆಗಲಿ, ನಡೆಯಿರಿ. ನಿಮ್ಮ ಹಿಂದೆ ಬರುವುದು ನಮ್ಮ ಕೆಲಸ. ಅಲ್ಲಿ ದೊರೆಯಬಹುದಾದ ಮನ್ನಣೆಗಾಗಲೀ, ಅವಹೇಳನೆಗಾಗಲೀ ನೀವೇ ತಲೆಯೊಡ್ಡಬೇಕು.” ಓಹೋ! ಧಾರಾಳವಾಗಿ ತಲೆಯೊಡ್ಡುವೆವು. ಅಷ್ಟು ಧೈರ್ಯವಿಲ್ಲದಿದ್ದರೆ, ನಿಮ್ಮನ್ನು ಕರೆವುದಾಗಲೀ, ಇಷ್ಟು ದೂರದ ವ್ಯಾಖ್ಯಾನವನ್ನು ಹಿಡಿವುದಾಗಲೀ ನಮಗೆ ಸಾಧ್ಯವಾಗುತ್ತಿದ್ದಿತೆ? ಇನ್ನು ನಡೆಯಿರಿ. ನೋಡಿದಿರೊ ?-ಕಲೆಕ್ಟರ್ ಚಕ್ರವರ್ತಿಯವರ ವಿಶಾಲಭವನವಿದೆ! ಅಬ್ಬ ! ಏನಿದು? ಮನೆಯ ಮುಂಗಡೆ-ಹಿoಗಡೆ-ಇಕ್ಕೆಲಗಳಲ್ಲಿಯೂ ಸುತ್ತಲೂ ಇದೇನು-ಪಟಗೃಹ ( ಬಿಡಾರ- Tent ) ಗಳನ್ನು ನಿರ್ಮಿಸಿರುವರು ? ಅಲ್ಲಿಗಲ್ಲಿಗೆ ತಳಿರು ತೋರಣಗಳ ಚಪ್ಪರಗಳೇಕೆ? ಎಷ್ಟೊಂದು
ಪುಟ:ಮಾತೃನಂದಿನಿ.djvu/೧೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.