ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                                           ಮಾತೃನ೦ದಿನಿ
                                                                                                                                                                  109 

ಉಚಿತಾನುಚಿತವನ್ನು ನೋಡದೆ ಕೆಲಸ ಮಾಡುವ ಮೂರ್ಖರು ಒಬ್ಬರಾದರೂ ನಮ್ಮಲ್ಲಿರುವುದಿಲ್ಲವೆಂದು ತಿಳಿಯಿರಿ.

   ಭಟ್ಟಾ:- ಹೇಗಾದರೂ ಹೊಗಳಿಕೊಳ್ಳಬಹುದಯ್ಯ! ನೀವ್ರ ಸಂಷನ್ನರು. ಹೇಗೆ ಹೇಳಿದರೂ ಸೊಗಸೀತು. `ಜಗದ್ಗು ರುಪೀಠಕ್ಕೆ ಅವಿಧೇಯನಾಗಿ, ಮತಾಚಾರಕ್ಕೆ ವಿರುದ್ಧಾಚಾರಿಯಾಗಿ, ದೈವದ್ರೋಹಿಯಾಗಿರುವವನನ್ನು, ಗುರುಸನ್ನಿಧಾನದಿಂದ ಬಂದ ನಿರೂಪವನ್ನೂ, ಬಹಿಷ್ಕಾರ ಪತ್ರಿಕೆಯನ್ನೂ ಕಾಲಕೆಳಗಿಟ್ಟು ನನಗಾರು ಸರಿಯೆಂದಿರುವವನನ್ನು, ಇಷ್ಟು ಪುರಸ್ಕರಿಸುತ್ತಿರುವ ನಿಮ್ಮಲ್ಲಿಯೇ, ನ್ಯಾಯವೂ ಧರ್ಮವೂ ಮೂರ್ತೀರ್ಭವಿಸಿರಬೇಕ

ಲ್ಲವೇ?

     ಶರಚ್ಚಂದ್ರ:- ಭಟ್ಟಾಚಾರ್ಯರೇ ! ಸ್ವಲ್ಪ ತಲೆಯೆತ್ತಿ ನೋಡಿ, ಮಾತನಾಡಿರಿ. ನೀವು ಯಾರಲ್ಲ ವಾದಿಸುತ್ತಿರುವಿರಿ? ನೀವು ಬಂದಿರುವ ಕೆಲಸವೇನು? ದೇಹಸ್ಮರಣೆಯಿಲ್ಲದೆ ಹೀಗೇಕೆ ಕೂಗುತ್ತಿರುವಿರಿ ? ಇದೇನು, ಆಟದ ಚಾವಡಿಯಂದೂ, ನೀವು ಮಾಡುತ್ತಿರುವುದು ಜೂಜಿನ ಸೋಲುಗೆಲುವುಗಳ ಹೋರಾಟಗಳೆಂದೂ ತಿಳಿದಿರೊ? ಅಥವಾ ಮನೆತನದ ತಲೆ ತೆರಿಗೆಗಳ, ಸುಲಿ-ಸಂತೆಗಳ ಗಡಿಯೆಂದೇನಾದರೂ ತಿಳಿದಿರೊ? ಇದು ಅಂತಹದೊಂದೂ ಅಲ್ಲ. ಇದೇ ನ್ಯಾಯಪೀಠ, ನಿಮ್ಮ ಮುಂದಿರುವವರೀ ನಾಕ್ಷಾದ್ದರ್ಮಸ್ವರೂಪರಾದ ನ್ಯಾಯಮೂರ್ತಿ ! ನಾವು ನ್ಯಾಯಪೀಠದ ಆಶ್ರಿತರು. ಇನ್ನಾದರೂ ತಿಳಿದು, ನೋಡಿ, ಯೋಗ್ಯತೆಗೆ ತಕ್ಕ ಮಾತುಗಳನ್ನಾಡಿರಿ. ಇಲ್ಲದಿದ್ದರೆ ನಿಮಗೆ ಮಾನವುಳಿಯುವುದಿಲ್ಲವೆಂದು ತಿಳಿಯಿರಿ.
     ಗಣೇಪಂತ:-- ಭಟ್ಟಾಚಾರ್ಯ ! ಇದೇನು ಅವಿವೇಕ? ಪ್ರಬಲರಲ್ಲಿ ಪ್ರತ್ಯಕ್ಷ ವಿರೋಧವು ಕೂಡದೆಂಬದಾಗಿ ಗುರುಗಳು ಈಗಲೇ ಹೇಳಿ ಕಳು ಹಿಲ್ಲವೆ? ಆಗಲೇ ಅದು ಮರೆತು ಹೋಯಿತೇ ?
    ಕಲೆಕ್ಟರ್‌:-ನ್ಯಾಯ! ಪ್ರತ್ಯಕ್ಷವಿರೋಧವು ತಕ್ಕುದಲ್ಲ. ಪರೋಕ್ಷದಲ್ಲಿ ಮಾಡುವ ವಿರುದ್ಧಾಚಾರಕ್ಕೆ ಪ್ರಾಯಶ್ಚಿತ್ತವೇ ಇರುವುದಿಲ್ಲ, ಅಲ್ಲವೇ, ಸ್ವಾಮಿ?
   ಗಣೇಶ:- ಕ್ಷಮೆಯಿರಲಿ ! ಚಕ್ರವರ್ತಿಮಹಾಶಯರೇ! ತಮ್ಮಲ್ಲಿ ನಾವು ಎಂದಿಗೂ ಅವಿಶ್ವಾಸಿಗಳಾಗುವವರಲ್ಲ. ನಮ್ಮ ಪರಮಗುರುಗಳೂ