ಈ ಪುಟವನ್ನು ಪರಿಶೀಲಿಸಲಾಗಿಲ್ಲ.

113 | ಶ್ರೀ | ಏಕಾದಶ ಪರಿಚ್ಛೇದ (ಸಂಘಶಕ್ತಿ) ಇಂದು, ಶಿವಪುರದ ವಿಶ್ವಕಲಾಶಾಲೆಯಲ್ಲಿ, ಸುಪ್ರಸಿದ್ಧನಾದ ನಮ್ಮ ದೇಶಭಕ್ತಾಗ್ರಣಿ. ಅಚಲಚಂದ್ರನಾಥನ ಸ್ವಾರಸ್ಯವಾದ ಭಾಷಣವು;-ಎಂದರೆ ಸಂಘಶಕ್ತಿಯನ್ನು ಕುರಿತು ವಿಚಾರಮಾಡುವ ಉಪನ್ಯಾಸವು. ಅಚಲಚಂದ್ರನ ಭಾಷಣವೆಂದರೆ, ಅಬಾಲವೃದ್ಧರಿಗೂ ಗೌರವಬುದ್ಧಿ; ಅದರಮೇಲೆ, ಸಂಘಶಕ್ತಿಸ್ವರೂಪವನ್ನು ಪ್ರದರ್ಶನಪಡಿಸುವ ಉಪನ್ಯಾಸವೆಂದರೆ, ಹೇಳ ತಕ್ಕುದೇನು ? ಕಲಾಶಾಲೆಯಲ್ಲಿ ಈವರೆಗೂ ಕಂಡು ಕೇಳದಿದ್ದಷ್ಟು ಸಂಭ್ರಮವು ತೋರುತ್ತಿದೆ. ಸಭಾಂಗಣದ ಶೃಂಗಾರವನ್ನೂ ಖಾಹ್ಯಾಂಗಣದ ಸುಸ್ವರೂಪವನ್ನೂ ನೋಡಿದರೆ, ಎಂತಹ ಕಾಡುಜನರ ಮನಸ್ಸಿಗಾದರೂ ನಾಗರಿಕತೆಯ ಗಂಧವು ಸೋ೦ಕುತಿದ್ದಿತೆಂದ ಬಳಿಕ, ಅಲ್ಲಿಯ ಸುವ್ಯವಸ್ಥೆಯನ್ನು ಕುರಿತು ವಿವರಿಸಬೇಕೇ? ಕಲಾಶಾಲೆಯ ಮಧ್ಯಭಾಗದ ಸಭಾಂಗಣದಲ್ಲಿ ಸಾಲು ಕುರ್ಚಿ-ಬೆಂಚುಗಳ ಮೇಲೆ, ಕಲೆಕ್ಟರರಿಂದ ಮೊದಲು ಅಧಿಕಾರಿಗಳು; ಉದ್ಯೋಗನಿರತರು, ಉಪನ್ಯಾಸಬೋಧಕರು, ಶಿಕ್ಷಕರು, ವಿದ್ಯಾರ್ಥಿಗಳು, ಒಟ್ಟಿನಲ್ಲಿ ಅಚಲಚಂದ್ರನಲ್ಲಿ ಆಂತರ್ಯವಾದ ವಿಶ್ವಾಸಗೌರವವನ್ನಿರಿಸುವ ಶಿವಪುರದ ಮತ್ತು ಸುತ್ತಮುತ್ತಲಿನ ಸಭ್ಯಸಮಾಜದವರೆಲ್ಲರೂ ಯೋಗ್ಯತಾನುಸಾರವಾದ ಕುರ್ಚಿಬೆಂಚುಗಳಲ್ಲಿ ಕುಳಿತು, ಭಾಷಣದ ರಸಸ್ವಾದನಮಾಡಲು ಆತುರರಾಗಿ ನೋಡುತ್ತಿರುವರು. ಮತ್ತೂ ಅಚಲಚಂದ್ರನಲ್ಲಿ ದ್ವೇಷಬುದ್ಧಿಯುಳ್ಳ ಭಟ್ಟಾಚಾರರಾದಿಯಾದ ಬಾಹ್ಯಾಡಂಬರ ಪರರೂ ಅಚಲನ ಭಾಷಣದಲ್ಲಿ ಬರಬಹುದಾದ ವಿಚಾರಗಳನ್ನು ಖಂಡಿಸಿ, ಅತನ ಉದ್ದೇಶ-ಪ್ರಯತ್ನಗಳನ್ನು ಸಾಗರೋಡಿಸದಂತೆ ಮಾಡಬೇಕೆಂಬ ವಿರೋಧಾಭಿಪ್ರಾಯದಿಂದ ಜನಗಳ ಗುಂಪಿನಲ್ಲಿ ಮರೆಯಾಗಿ ಕುಳಿತು, ಮಿಟಿಮೀಟನೆ ನೋಡುತ್ತಿದ್ದರು. ಹೆಚ್ಚೇಕೆ, ಅಚಲನು ಎಷ್ಟು ಹೊತ್ತಿಗೆ (