ಮಾತೃನ೦ ದಿನಿ 119 ಹೀಗೆಂದು ಬಹು ಗಂಭೀರವಾಗಿ ಗುರುಪಾದಪೀಠದಲ್ಲಿ ವಿಜ್ಞಾಪಿಸಿ ಕೊಂಡಿರುವ ಆ ಭಟ್ಟಾಚಾರ್ಯ ರೂ, ಆ ಸಂತರೂ, ಈಗೆಲ್ಲಿರುವರೋ ತಿಳಿ ಯಲಿಲ್ಲ! ಅವರೂ ಇಲ್ಲಿಯೇ ಇದ್ದರೆ, ಪಾಪ? ಚೆನ್ನಾಗಿ ಕೇಳಿ, ತಿಳಿದು ಕೊಳ್ಳಲಿ, ತಮ್ಮ ಸತ್ಯಪರಾಕ್ರಮವೆಂತಹದೆಂಬುದನ್ನು ! ಮಹನೀಯರೇ! ನಗೇಶರಾಯನ ಮೇಲೆ ಎಂತಹ ಆರೋಪವುಂಟಾಗಿದೆ ನೋಡಿ ದಿರೋ ? ಇದಕ್ಕೆ ನರೇಶರಾಯನು ಎಷ್ಟು ಮಟ್ಟಿಗೆ ಉತ್ತರವಾದಿಯಾಗಿ ನಿಲ್ಲ ಬೇಕು ? ಅದರೆ, ಮಾನನಿಧಿಯಾದ ಆತನಾಗಲೀ, ಆತನ ಅನುಗಾಮಿಗಳ ಗಲೀ ಇಂತಹ ಅಪಮಾನಕರಗಳಾದ ಅಲ್ಪ ವಿಷಯಗಳಲ್ಲಿ ಪ್ರಸ್ತಾಪಿಸುವ ರಾಗಿಲ್ಲ. ಮಗಳ ವಯಸ್ಸು ಮೀರುತ್ತಿದೆಯೆಂದು ಹೇಳುತ್ತ, ಅನನುರೂ ನಿಗೆ ಅಥವಾ ಅಯೋಗ್ಯ ವರನಿಗೆ ಬಲಾತ್ಕಾರವಾಗಿ ಮಗಳನ್ನೊಪ್ಪಿಸಿ, ತನ್ನ ಮತ್ತು ಮಗಳ ಸರ್ವನಾಶಮಾಡಿಕೊಳ್ಳುವಷ್ಟರ ಧೂರ್ತಪುರುಷನು ಆತ ನಲ್ಲ. ಶ್ರೀಮಂತನ ಕನೈಯನ್ನು ಕೊಳ್ಳುವುದರಿಂದ ವರದಕ್ಷಿಣೆಯ ಹೇರಳ ವಾಗಿ ದೊರೆತು, ತಾವು ಬದುಕುವೆನೆಂದು ಬಗೆದ ಭಟ್ಟಾಚಾರ್ಯ ರಾದಿಗಳಿಗೆ ಅಡ್ಡಬೀಳುವಷ್ಟರ ಹೆಡ್ಡತನವು ಅ ಕಲಿಪುರುಷನಲ್ಲಿಲ್ಲ. ಇಂತಹ ನೂರಾರು ಮಂದಿ ಭಟ್ಟಾಚಾರ್ಯರ, ಸಾವಿರಾರುಮಂದಿ ಸಂತರ ಬಾಯ್ ಳನ್ನು ಕಟ್ಟಿ, ಅವರನ್ನು ಆಕ್ರಮಿಸಿಕೊಂಡಿರುವ ಆ ಹಾಳು ಧನಪಿಪಾಸರೋಗದ ಹುಟ್ಟ ಡಗುವಂತೆ ಮಾಡಬಲ್ಲ ಸಾಹಸವು, ನಮ್ಮ ಪರಮಪೂಜ್ಯನಾದ ಸಗೇಶರಾಯ ನಲ್ಲಿರುವುದು. ಅಷ್ಟೇ ಅಲ್ಲ. ಅಜ್ಞಾತಗೋತ್ರದವಳನ್ನು ಪರಿತ್ಯಜಿಸಬೇ ಕೆಂದು ಹೇಳುವ ಮಹಾಜನರ ಉಪದೇಶಕ್ಕೆ, ನಮ್ಮ ಶ್ರೀಮಂತನು ಕವಿ ಯನ್ನಾದರೂ ಕೊಡಬಹುದೊ? ಎಂದಿಗೂ ಇಲ್ಲ. ಏಕೆಂದರೆ, ಕೇವಲ ಯಾವ ಧನಲೋಭಕ್ಕಾಗಿ ಸ್ವಹಸ್ತದಿಂದ ವಿಷಪ್ರಯೋಗಮಾಡಿ ರಕ್ತ ಸಂಬಂಧಿಯಾದ ತನ್ನ ಅಣ್ಣನ ಮಗಳನ್ನೇ ಇಹಲೋಕದಿಂದ ಹೊರಡಿಸಿದ ಭಟ್ಟಾಚಾರ್ಯರಂತಹ ಪುಣ್ಯಪುರುಷನು ನರೇಶರಾಯನಲ್ಲ ! ನ ವಿಯೋಗವಾದ ಬಳಿಕ, ಏಕಮಾತ್ರ ಪುತ್ರಿಯನ್ನು ಕೊತಗೊಂಡು ಕಾಲ ಯಾಪನ ಮಾಡುತ್ತಿದ್ದ ಆ ನಮ್ಮ ಪರಮಪೂಜ್ಯಪಾದನೂ ನಮ್ಮ ಪಿತೃ ದೇವನ ಜೈಷ್ಟಭ್ರಾತೃವೂ ಆದ ಆ ಯೋಗಿವಯ್ಯನನ್ನು ತನ್ನ ದ್ವೇಷಸಾಧನೆ
ಪುಟ:ಮಾತೃನಂದಿನಿ.djvu/೧೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.