140 ಸತಿ ಹಿತೈಷಿಣಿ (ಮತ್ತೊಂದು ಸತ್ಯ.) "ಸುಕುಮಾರಿ" ನಿನ್ನನ್ನು ಅಲ್ಲಿ ಬಿಟ್ಟುದು ಮೊದಲು, ಇಂದಿನವರೆಗೆ ನಡೆದ ಎಲ್ಲಾ ವಿಚಾರಗಳೂ ನನಗೆ, ನಿನ್ನ ಅಣ್ಣ ಅಚಲಚಂದ್ರನಿಂದ ತಿಳಿದುಬಂದಿದೆ. ಇದಕ್ಕಾಗಿ ಸಂತೋಷ. ನಿನಗೆ ಈಗ ನಾನು ಏನನ್ನು ಬರೆಯಬೇಕೋ ತಿಳಿಯದು. ಕಾಲೋಚಿತ ಸೂಚನೆಗಳಿಂದ ಎಚ್ಚರಿಸಲು, ನಿನ್ನ ಅಣ್ಣನು ಯಾವಾಗಲೂ ಜಾಗರೂಕನಾಗಿರುವನು. ನಿನ್ನ ಶ್ರೇಯೋಭಿವೃದ್ಧಿಯಲ್ಲಿ ಯೂ ಮತ್ತು ನಿನ್ನ ನಿತ್ಯನೈಮಿತ್ತಕ-ಕ್ರಿಯಾಕಲಾಪದಲ್ಲಿಯೂ ನಿನಗೆ ಆಶ್ರ ಯವಿತ್ತಿರುವ, ಪುಣ್ಯಪುರುಷನಾದ ನಾಗೇಶರಾಯನೂ ಮತ್ತು ನಿನ್ನ ಪಿತೃ ವ್ಯನೂ ಸಪರಿವಾರರಾಗಿ ಸಿದ್ಧರಾಗಿರುವರು. ಇನ್ನು ಉಳಿದವರ ಮಾತು ಹಾಗಿರಲಿ. ಆದರೆ, ವತ್ಸೆ ! ನಿನ್ನನ್ನು ನಾನು ಯಾವ ಉದ್ದೇಶದಿಂದ ಅಲ್ಲಿ ಬಿಟ್ಟ ದ್ದೆನೋ, ಆ ಉದ್ದೇಶವು, ಎಂದರೆ, ನಮ್ಮ ದೇಶಸೇವಕರಲ್ಲಿ ಕರ್ತವ್ಯಜಾಗ್ರ ತೆಯು, ತೋರಿ ಬಂದಿದೆ. ಇನ್ನು ನೀನು ಈಗ ಅಲ್ಲಿದ್ದು ಮಾಡಬೇಕಾದ ಕೆಲಸವೆಂದರೆ ಇಷ್ಟೆ. ಈ ನಿನ್ನ ಅಜ್ಞಾತವಾಸದ ಎರಡು ವರ್ಷ ವನ್ನೂ ನೀನು ಯಾವ ನಿನ್ನ ದೇಶಭಗಿನಿಯರ ಸರಸ-ಸಲ್ಲಾಪದಿಂದ ಸುಖವಾಗಿ ಕಳೆದಿರುವೆಯೋ, ಅವರೆಲ್ಲರನ್ನೂ ಒಟ್ಟುಗೂಡಿಸಿ, ನಿನ್ನ ಜೀವಿತವನ್ನೂ, ಜನೋದ್ದೇಶವನ್ನೂ, ಮುಂದಿನ ಕರ್ತವ್ಯವನ್ನೂ ಸ್ಪಷ್ಟ ಪಡಿಸುವಂತೆ ನಿದ ರ್ಶನವೂರ್ವಕವಾದ ನಾಲ್ಕಾರು ಮಾತುಗಳನ್ನಾಡಿ, ನಿದ್ರಿತರಾಗಿರುವ ಅವ ರೆಲ್ಲರನ್ನೂ ತಟ್ಟಿ ಎಬ್ಬಿಸುವುದೂ, ಹಾಗೆ ಎಚ್ಚತ್ತು ಕಣ್ಣೆರೆದು ನೋಡುವ ವರಿಗೆ ಧನ್ಯವಾದವನ್ನೊಪ್ಪಿಸಿ, ಅವರಿಂದ ಅಭಿಪ್ರಾಯವನ್ನು ಹೊಂದುವುದೂ ಈ ಎರಡೇ ಕೆಲಸಗಳು ಸದ್ಯದಲ್ಲಿ ನಿರ್ಣಾಯಿಸಲ್ಪಟ್ಟಿವೆ. ಈ ಕೆಲಸವನ್ನು ಸರಿಯಾಗಿ ಮಾಡಬೇಕಾದ ವಿವರವು, ನಿನ್ನ ಅಣ್ಣನಿಂದಲೇ ನಿನಗೆ ತಿಳಿಯ ಬಹುರಾಗಿದೆ. ಮುಖ್ಯವಿಚಾರವೇನೆಂದರೆ, ನೀನು ನನ್ನ ಪರಮ ವಿಶ್ವಸನೀಯನಾದ ನಗೇಶರಾಯನ ಮತ್ತು ಅಚಲಚಂದ್ರನಾಥನ ಆಣತಿಯಂತೆ ಯಾವ ಕೆಲಸ ವನ್ನಾದರೂ ನಿರಾತಂಕವಾಗಿ ನೆರವೇರಿಸಿ, ಧನ್ಯಳೆನ್ನಿಸಿಕೊಳ್ಳುವುದು
ಪುಟ:ಮಾತೃನಂದಿನಿ.djvu/೧೫೪
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ