142 ಸತಿ/ಹಿತೈಷಿಣಿ ನಾನು ಬಿಡಿಸಿ ಹೇಳಬೇಕಾಗಿಲ್ಲವಷ್ಟೆ ? ಮಹಿಳೆಯರೆಲ್ಲರನ್ನೂ ಕರೆಯಿಸುವ ವಿಚಾರವೂ ನಿಮ್ಮನ್ನು ಸೇರಿದೆ. ಉಳಿದ ಕಾರ್ಯಭಾರವೆಲ್ಲವೂ ನಮ್ಮದಾಗಿದೆ. ಮತ್ತೇನು ? ಭಕ್ತಿ-ಸೇವಾ:-ಎದ್ದು ನಿಂತು ಅಷ್ಟೇ ನಮಗೆ ಬೇಕಾಗಿರುವುದು, ಇನ್ನು ನಾವು ಹೊರಡಬಹುದೇ?' ನರೇಶ:-ಒಳ್ಳೆಯದು. ಸೇವಾನಂದ-ಭಕ್ತಿಸಾರರು ಎದ್ದು ನಿಂತು, ಅಚಲಚಂದ್ರನನ್ನು ಕುರಿತು(ಇನ್ನೂ ನಿಂಬವೇಕೆ? ಮಾರ್ಗದರ್ಶಕರೇ ! ಮತ್ತೇನಾದರೂ ಶೇಷ ವುಂಟೋ?” ಅಚಲ:--ಎದ್ದು ನಿಂತು-1 ಶೇಷವಿದ್ದರೂ ಈಗಲೇ ಆಗಬೇಕಾದುದಿಲ್ಲ. ನಾಳೆಯಾಗಲಿ; ನಡೆಯಿರಿ. ನಾದಾ:-ಅಚಲಚಂದ್ರ ! ನೀನೂ ಈಗಲೇ ಹೊರಡಬೇಕೇನು? ಅಚಲ:- ಬೇಡವೇ ? ಇಲ್ಲಿಗೆ ಬಂದಿದ್ದ ಕೆಲಸವು ಇಷ್ಟಕ್ಕೆ ಸರಿಯಾ ಯಿತು. ಇನ್ನೇನು ! ವೃಥಾ ಕಾಲಹರಣದಿಂದ ಇಲ್ಲೇಕೆ ಸುಮ್ಮನೆ ಕುಳಿತಿರ ಬೇಕು? ನರೇಶ:-ನ್ಯಾಯ ! ಇನ್ನು ಯಾವ ಕೆಲಸವಿದ್ದರೂ ನಾಳೆಯಾಗಲಿ. ಹೊರಡಿರಿ. - ಅಚಲಚಂದ್ರನು ತಲೆದೂಗುತ್ತ ಸೇವಾನಂದ-ಭಕ್ತಿಸಾರರ ಕೈ ಹಿಡಿದು ಕೊಂಡು ಹೊರಟು ಹೋದನು. ನಂದಿನಿಯ ಸ್ವರ್ಣರೊಡನೆ ತನ್ನ ಕಿರು ಮನೆಗೆ ನಡೆದಳು. ಉಳಿದವರೂ ಅಂದಿನ ಸಮಾಲೋಚನೆ-ಸಂಪ್ರಾರ್ಥನೆ ವಿಶೇಷ ಸೂಚನೆಗಳನ್ನು ಅಲ್ಲಿಗೆ ನಿಲ್ಲಿಸಿ, ಮುಂದಿನ ಕಾರ್ಯನಿರ್ವಾಹದಲ್ಲಿ ನಿರತರಾದರು. ದೀರ್ಘಲೇಖನದಿಂದ ಬೇಸತ್ತ ವಾತಕವರ್ಗಕ್ಕೂ ಇಲ್ಲಿಗೆ ಸ್ವಲ್ಪ ವಿರಾಮವನ್ನು ಕೊಟ್ಟ ಕಬೇಕಷ್ಟೆ. (ಆಗಲಿ.. |
ಪುಟ:ಮಾತೃನಂದಿನಿ.djvu/೧೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.