ಮಾತೃನಂದಿನಿ 14) ಪ್ರಿಯಭಗಿನಿಯರ ! ನಾಗರಿಕತೆಯು ಹೆಚ್ಚಿತು. ನಾಗರಿಕತೆಯು ಹೆಚ್ಚಿದಂತೆಲ್ಲಾ ನಮ್ಮ ವರ ಆಚಾರ-ವಿಚಾರಗಳ ಬದಲಾವಣೆಗಳೂ ಹೆಚ್ಚುತ್ತ ಬಂದಿರುವುವು. ಆಚಾರ-ವಿಚಾರಗಳ ಪರಿವರ್ತನೆಗೆ ತಕ್ಕಂತ, ನಾಗರಿಕತೆಯ ರೂಢರ್ಥ ದಂತೆ, ನಮ್ಮವರ ಎಂದರೆ, ಸ್ತ್ರೀಜನಾಂಗದವರ ವಿದ್ಯಾಭ್ಯಾಸವೂ ಹರಡುತ್ತ ಬಂದಿರುವುದು. ಎಲ್ಲೆಲ್ಲಿ ನೋಡಿದರೂ ಸ್ತ್ರೀವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ವನ್ನು ಕೊಡುತ್ತಿರುವವರೂ, ಸ್ತ್ರೀಸಮಾಜದಲ್ಲಿ ನಾಗರಿಕತೆಯ ಗಂಧವನ್ನು ಪರಿಷ್ಕಾರವಾಗಿ ಹತ್ತು ತಿರುವವರೂ ಕಾಣುತ್ತಿರುವರು. ಈಗಾಗಲೇ ನೂರಾರು ಸಂಘಗಳೂ, ಸಾವಿರಾರು ವಿದ್ಯಾಶಾಲೆಗಳೂ, ಎಷ್ಟೆಷ್ಟೋ ಲೇಖನಗಳೂ, ವಿದ್ಯಾಭ್ಯಾಸ-ಸ್ತ್ರೀಶಕ್ಷಣಗಳ ವಿಚಾರವಾಗಿ ಹುಟ್ಟಿದ ವುವು. ಎಲ್ಲಿ, ಯಾವ ಪಟ್ಟಣದಲ್ಲಿ ನೋಡಿದರೂ, ಸಂಘ-ಸಭೆ-ಸಮ್ಮಿಲನ ಪರಿಷತ್ತ ಮೊದಲಾದ ಕೂಟಗಳ ಅಬ್ಬರವೇ ಕಾಣುತ್ತಿರುವುವು. ಅದರ ಲ್ಲಿಯೂ, ಶಾಖೆಯು ಬೇರೆ ಏರ್ಪಟ್ಟು, ದೇಶೋತಿಗಾಗಿ ಬಹುವಾಗಿ ಹೊಡೆದಾಡುತ್ತಿರುವುದು ಮತ್ತೂ ವಿಶೇಷವಾಗಿದೆ. ಆದರೇನು ?- • ವೈದ್ಯರು ಹೆಚ್ಚಿರಕ್ಕೂ, ರೋಗಿಗಳೂ ಹೆಚ್ಚುವರು. ವೈದ್ಯಾಲಯವು ವಿಸ್ತಾರವಾದಷ್ಟೂ, ರೋಗಗಳೂ ಹಲವು ಬಗೆಯಾಗಿ ಕಾಡುವುವು. ೨ ಎಂದಾಡುವ ಬಲ್ಲವರ ಬೆಲ್ಲದಂತಹ ನುಡಿಯು ಬಳ್ಳಾಗುವುದಿಲ್ಲ. ವಿದ್ಯಾ ಶಾಲೆಗಳು ಹೆಚ್ಚಿದುವು. ವಿದ್ಯಾಬೋಧಕರೆಂಬವರೂ ಹೆದರು. ಆದರೆ, ಅದರೊಡನೆಯೇ ನಮ್ಮವರಲ್ಲಿ ಅಧಿಕಾರದ ಭಯಂಕರ ರೋಗವೊಂದು ಎಲ್ಲೆಡೆಯಲ್ಲಿಯೂ ಹರಡಿಕೊಳ್ಳುತ್ತಿರುವುದೇಕೆ ? ಸ್ತ್ರೀವಿದ್ಯಾಭ್ಯಾಸವು ಹೆಕ್ಕಿ ದಷ್ಯ, ದೇಶಾಭ್ಯುದಯಕ್ಕೆ ದಾರಿಯಾಗುವುದೆಂದು ಹಾರಾಡುತ್ತಿರುವ ಅ ವುರುಷವರ್ಗದವರ ಅಭಿಮಾನೋಕ್ತಿಗಳ ಫಲವೇನಾದುವು? ನಾಗರಿಕ ತೆಯು ಹೆಚ್ಚುತ್ತಿರುವ ಈಕಾಲದಲ್ಲಿಯೂ ಹೀಗೆ ಜನರು ನರಳುತ್ತಿರುವ ರೇಕೆ ?' ಎಂದೀ ಬಗೆಯಾಗಿ ಆಕ್ಷೇಪಗಳುಂಟಾಗುವುದೂ ಸಹಜವೇ! ಆದರೆ, ವಿದ್ಯಾಶಾಲೆಯು ಹೆಚ್ಚಿದ್ದರೂ ಜನರು ಅಕ್ಷರಶತ್ರುಗಳಾಗಿರುವರೆ ಬುದು ನನ್ನ ಅಭಿಪ್ರಾಯವಲ್ಲ. ವಿದ್ಯಾಶಾಲೆಯ ಮತ್ತು ಬೋಧಕರ ಸಂಖ್ಯೆಯು ಹೆಚ್ಚ ಕೂಡದೆಂದೂ ನಾನು ಹೇಳಲಿಲ್ಲ. ಶ್ರೀವಿದ್ಯಾಭ್ಯಾಸ
ಪುಟ:ಮಾತೃನಂದಿನಿ.djvu/೧೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.