ಈ ಪುಟವನ್ನು ಪರಿಶೀಲಿಸಲಾಗಿಲ್ಲ.

157 || ಶ್ರೀ || ಚತುರ್ದಶ ಪರಿಚ್ಛೇದ. - KA (ಅಭಯಪ್ರದಾನ) ನಂದಿನಿಯ ಭಾಷಣವಾದ ದಿನ ರಾತ್ರಿ, ಹತ್ತು ಗಂಟೆ ಹೊಡೆದು ಹೋಗಿದ್ದಿತು. ನಂದಿನಿಯ ಮಲಗುವ ಮನೆಯಲ್ಲಿ ಬಾಗಿಲನ್ನು ಭದ್ರ ಪಡಿಸಿ, ಹಾಸಿಗೆಯ ಮೇಲೆ ಕುಳಿತು, ಯಾವುದೋ ಪತ್ರವನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದಳು. ಅವಳ ಹಾಸಿಗೆಯ ಬಳಿಯಲ್ಲಿಯೇ, ಸ್ವರ್ಣ ಕುಮಾರಿಯೂ ಬೇರೇ ಹಾಸಿಗೆಯ ಮೇಲೆ ಮಲಗಿ ಗೊರಕೆಹೊಡೆಯುತ್ತಿದ್ದಳು. ನಂದಿನಿಯು ಹಿಡಿದಿದ್ದ ವತ್ರವಾರದೋ ಏನೆಂದು ಬರೆಯಲ್ಪ ದಿತೋ ಎಂಬ ಶಂಕೆಯು ನಮ್ಮ ವಾಚಕವರ್ಗವನ್ನು ಮುಟ್ಟಿರಬಹುದು ! ಆದಾವುದೂ ಈಗಲೇ ತಿಳಿಯದಿದ್ದರೂ, ಅವಳ ಮುಖದಲ್ಲಿ ತೋರುತ್ತಿದ ಮರುಕವನ್ನು ನೋಡಿದ್ದರೆ, ಕೇವಲ ಆತ್ಮೀಯರ ವತ್ರಲೇಖನವೆಂದೆ ತೋರುತ್ತಿದ್ದಿತು. ಆದುದರಿಂದ, ಅಂತದರ ಪ್ರತಿಬಿಂಬವನ್ನೇ ಇಲ್ಲಿ ನಾಟಕ ವರ್ಗದ ಮುಂದಿಡುವುದು ಸಹಜವಲ್ಲವೆ? ಇರಲಿ. _ || ಪ || I"ನಂದಿನಿ! ಈಗಲಾದರೂ ಹೇಳು. ಏನುತ್ತರವನ್ನು ಕೊಡಬಲ್ಲೆ? ನಾರಾ ನಂದನು ಗೃಹಸ್ಥಾಶ್ರಮದಲ್ಲಿದ್ದು, ನಿನ್ನಿಷ್ಟದಂತೆ ದೇಶಸೇವೆಯಲ್ಲಿ ಕೃತಾರ್ಥ ನಾಗುವಂತೆ ಅನುಗ್ರಹಿಸುವೆನೋ, ಇಲ್ಲದಿದ್ದರೆ ವಿರಕ್ತವೃತ್ತಿಯಿಂದ ದೇಶಿಗ ನಾಗಿ ಸುತ್ತಿ ಸುತ್ತಿ ಇಹಜನ್ಮವನ್ನು ಕೊನೆಗಾಣಿಸಿಕೊಳ್ಳಲೆಂದೇ ಜರಿದು ನೂಕುವೆಯೋ, ಏನು ಮಾಡುವೆ? ಹೇಳು ! ಈವರೆಗೂ ನೋಡಿದೆನು; ನಿನ್ನಿಂದ ಸದುತ್ತರವು ದೊರೆಯಲಿಲ್ಲ. ನಿನ್ನ ಸೂಚನೆಯಂತೆಯೇ ನಾನು