ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತನ೦ದಿನಿ 171 ಸಲ್ಲ, ಮತ್ತು ನಮ್ಮ ವಿದ್ಯಾ-ಬುದ್ದಿ-ಶಕ್ತಿ-ಮೇಧಾ-ಪ್ರಜ್ಞಾ ಇವೆಲ್ಲಕ್ಕೂ ಅಭಿಮಾನಿಗಳಾದವರೆಲ್ಲರೂ ಸ್ತ್ರೀಯರೇ ಅಹುದು. ಅಲ್ಲದೆ, ಮುಂದೆ ನಮ್ಮ ಸಮಸ್ತ ವಿಚಾರಗಳಿಗೂ ಸ್ತ್ರೀಯರ ಸಹಾನುಭೂತಿಯೇ ಮೂಲವಾಗಿರ ಬೇಕು; ಅದಿಲ್ಲದಿದ್ದ ರಾಗದು, 1 ಹೆಂಗಸರು ಮಾಯಾವಿನಿಯರು; ಅನೇಕ ಕುಟಿಲ ತಂತ್ರಗಳಿಂದ ಪುರುಷರನ್ನು ದುರ್ಮಾರ್ಗದಲ್ಲಿ ಕೆಡಹತಕ್ಕವರು; ಆದುದರಿಂದ ಅವರನ್ನು ಯಾರೂ ನಂಬಬಾರದು; ವಿಶ್ವಾಸಪಡಲೂ ಬಾರದು;” ಎಂದು ಅನೇಕರು ಹೇಳುತ್ತಿರುವರು. ಇದು ಸಾಧುವಲ್ಲ. ಯಾರು ಸ್ತ್ರೀಯ ರನ್ನು ನಂಬಲಾರರೋ, ಅವರು ತಮ್ಮನ್ನು ತಾವೇ ನಂಬಲಾರದ ಕಳ್ಳರು. ಅಂತವರಲ್ಲಿ ನಿಜವಿಲ್ಲ; ಸ್ಥಿರತೆ..ಲ್ಲ; ಸಮಾಧಾನವು ಮೋದಲೇ ಇಲ್ಲ. ಎಂದರೆ, ಸ್ತ್ರೀಯರನ್ನು ಮೇಲೇರಿಸಿ ನಾವು ಅವರಿಗೆ ದಾಸಭೂತರಾಗಬೇಕೇನೆಂದು ಕೇಳುವಿರಿ?- ಹಾಗಲ್ಲ, ಸ್ತ್ರೀಯರನ್ನು ಅತಿಯಾಗಿ ಮುದ್ದಿಸಿ, ಅವರ ವಿಲಾ ಸಕ್ಕಾಗಿ ತಾವು ಮರುಳರಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ, ಸ್ತ್ರೀಯ ೨ಗೆ ನಾವು ಅತ್ಯಾವಶ್ಯವಾಗಿ ಕೊಡಬೇಕಾಗಿರುವ-ಆದಿಯಿಂದಲೂ ನಮ್ಮ ಅರ್ಯರಿಂದ ಸ್ತ್ರೀಜನಾಂಗಕ್ಕೆಂದು ವಹಿಸಲ್ಪಟ್ಟಿರುವ, ಮುಂದೆ ಅವರು ನೀರಮಾತೆಯ ರಾಗಿ, ಧರ್ಮಾಭಿವೃದ್ಧಿಗೆ ಆಶ್ರಯಸ್ವರೂಪಿಣಿಯರಾಗಿ ಪ್ರಕಾಶಿಸುವಂತೆ ಮಾಡಲ್ಪಡಬೇಕಾಗಿರುವ ವಿಚಾರಗಳಲ್ಲಿ ಮಾತ್ರ ನಾವು ಧರ್ಮೈಕನ್ಯಾಖ್ಯಿಕ ದೃಷ್ಟಿಯಿಂದ ಅವರಲ್ಲಿ ಧಾರಾಳಬುದ್ಧಿಯನ್ನು ತೋರಿಸಿದರೆ ಎಷ್ಟೋ ಉಪಕಾರ ಮಾಡಿದಂತಾಗುವುದು. ಹೀಗೆ ಮಾಡ ಬೇಕಾದರೆ ನಮ್ಮಲ್ಲಿ ಇನ್ನೆಷ್ಟು ಕಾಲ ಹಿಡಿಯಬೇಕೋ ತಿಳಿಯದು. ಮತ್ತೂ ಹೇಳುವದೇನಂದರೆ,-. ನಮ್ಮ ಆರ್ಯಬಾಂಧವರಲ್ಲಿ ತಮ್ಮ ಸತಿಯರಲ್ಲಿ ತಾವು ಆಪ್ತಾಲೋ 'ಚನೆ ಮಾಡುವುದಾಗಲೀ, ಅವರ ಅಭಿಪ್ರಾಯವನ್ನು ಅನುಮೋದಿಸುವುರಾ ಗಲ್ಲಿ ಬಹು ನಾಚಿಕೆಗೇಡಿನ ಸಂಗತಿಯೆಂದು ತಿಳಿದಿರುವವರು ಹಲವರಿರು ವರು. ಮತ್ತೆ.-ಪತ್ನಿಯ ಅಭಿಪ್ರಾಯದಂತೆ ನಡೆಯಬೇಕೆಂಬ ಒಂದೇ ಪಟ್ಟ ನ್ನು ಹಿಡಿದು, ಉಚಿತಾನುಚಿತ ಪ್ರಜ್ಞೆಯಿಲ್ಲದ ಕೇವಲ ವಿಲಾಸದಲ್ಲಿ ಬೆರೆ ದು, ತಮ್ಮ ಹಿರಿಯರನ್ನೂ ಗುರುಜನರನ್ನೂ ಗಳಿಸದೆ ತಿರುಗುವವರೂ ಕೆಲ ವರಿರುವರು. ಇವರಿಬ್ಬರ ಅಭಿಪ್ರಾಯಗಳೂ ಅನರ್ಥಕಾರಿಗಳಲ್ಲದೆ ಬೀರಿಲ್ಲ.