117 ಮಾ ನಂದಿನಿ ಸೇರಿಯ ನನಗೆ ಸಂತೋಷವುಂಟಾಗಲಿಲ್ಲ. ಯಾವಾಗಲೂ ಆ ತಾಯಿಯ ಹಂಬಲವೊಂದಲ್ಲದೆ ನನಗೆ ಮತ್ತಾವುದೂ ಬೇಕಾಗಿರಲಿಲ್ಲ. ಹೀಗೆ ನಾನು ಹುಚ್ಚನಂತಾಗಿ ಒಂದು ದಿನ ಗಂಗಾತೀರದಲ್ಲಿ ನಿರ್ವಿಣ್ಣನಾಗಿ ಕುಳಿತಿದ್ದಾಗ, ನನ್ನಲ್ಲಿಗೆ ದಯಾಘನನಾದ ಯೋಗೀಶ್ವಕನೊಬ್ಬನು ಬಂದು, ನನ್ನ ವಿಚಾರ ವೆಲ್ಲವನ್ನೂ ಕೇಳಿದನು. ನಾನು ಕೂಡ ನನ್ನ ಚರಿತೆಯನ್ನು ಆತನಿಗೆ ಹೇಳಿದುದಲ್ಲದೆ, ತಾಯಿಯನ್ನು ಬಿಟ್ಟಿರಲಾರೆನೆಂದೂ, ಅಂತಹ ನನ್ನ ಪರಮ ಪ್ರಿಯಮಾತೆಯನ್ನು ನೋಡಬಹುದಾದ ಉಪಾಯವಿದ್ದರೆ, ಹೇಳಬೇಕೆಂದೂ ಯೋಗಿಯನ್ನು ಬಹು ವಿಧದಿಂದ ಪ್ರಾರ್ಥಿಸಿದನು. ಯೋಗಿವರನು ನಗುನಗುತ್ತ ನನ್ನ ಕೈ ಹಿಡಿದು-ತಮ್ಮ! ನನ್ನೊಡನೆ ಬಾ. ನೀನು ತಾಯಿಯನ್ನು ಕಾಣುವೆ' ಎಂದು ಹೇಳಿ ನನ್ನನ್ನು ತಮ್ಮ ಆನಂದಮಂದಿರಕ್ಕೆ ಕರೆದೊಯ್ದು, ಅಲ್ಲಿದ್ದ ಉಳಿದ ಸಂನ್ಯಾಸಿಗಳನ್ನು ನನಗೆ ತೋರಿಸಿ,-(ನೋಡಿದೆಯಾ, ತಮ್ಮ ! ಇವರೆಲ್ಲರೂ ನನಗೂ ನಿನಗೂ ಅಣ್ಣ ತಮ್ಮಂದಿರು; ಇವರು ಇಲ್ಲಿರುವುದಾದರೂ ತಾಯಿಯ ಸೇವೆಗಾಗಿಯೇ ಎಂದು ಹೇಳುಹೇಳುತ್ತ ಅಲ್ಲಿ ಪ್ರತಿಷ್ಟಿತವಾಗಿದ್ದ ಮಹಾತಾಯಿಯ ಉಗ್ರ ರೂಪ-ಶಾಂತಮೂರ್ತಿಗಳನ್ನು ಕ್ರಮಕ್ರಮವಾಗಿ ತೋರಿಸಿ-ನೋಡಿದೆ ಹೈ ? ಇವಳೇ ನಿನಗೂ ನನಗೂ ಇಲ್ಲಿರುವ ಈಳಿದ ಸಂನ್ಯಾಸಿಗಳಿಗೂ ಮತ್ತು ಸಮಸ್ತ ಅರ್ಯ ಸಂತಾನಕ್ಕೂ ತಾಯಿ; ಇವಳೇ ನಮ್ಮ ಸಮಸ್ತ ರೈವವ; ಇವಳ ಸೇವೆಯೇ ನಮಗೆ ಮುಖ್ಯವಾಗಿ ತಪಶ್ಚರ್ಯೆ; ಇವಳ ಈ ಉಗ್ರ ಶಾಂತಿಸ್ಥಾಪನೆಗೆ ಪ್ರಯತ್ನಿಸುವುದೇ ನಾವು ಮಾಡಬೇಕಾಗಿರುವ ಮಾತೃ ಕೈಂಕಯ್ಯ; ಇದನ್ನು ಮಾಡುವವರಿಗೂ ನಾವು ಕೃತಕಾರ್ಯರಾಗಲಾರೆವು; ಅಣ್ಣ! ಚೆನ್ನಾಗಿ ನೋಡು; ನಿನ್ನನ್ನು ಹೆತ್ತ ತಾಯಿ ಮತ್ತಾರೂ ಅಲ್ಲ; ಈ ತಾಯಿಯ ಕಟಾಕ್ಷವೇ ಅ ರೂಪದಿಂದ ಜನ್ಮವೆತ್ತಿದ್ದು, ಈಗ ಮತ್ತೆ ಅವಳ ಲ್ಲಿಯೇ ಐಕ್ಯವಾದಳು; ಹೀಗೆಯೇಎಂದರೆ, ನಿನ್ನನ್ನು ಹೆತ್ತತಾಯಿಯಂತೆಯೇ ಉಳಿದ ಎಲ್ಲಾ ಪ್ರೀಯರೂ ಈ ತಾಯಿಯ ಪ್ರತಿನಿಧಿಸ್ವರೂಪಿಣಿಯರೆಂದೇ ತಿಳಿ. ಈ ನಿನ್ನ ತಾಯಿಯ ಸಂತೋಷವನ್ನು ನೀನು ಬಯಸುವವನಾಗಿದ್ದರೆ, ಇವಳ ಅಂತರಂಗಕೃಪಾಪರಿಪೂರ್ಣರಾದ ಶ್ರೀ ಪ್ರಪಂಚವನ್ನೇ ನೀನು ಮಾತೃಭಾವನೆಯಿಂದ ಕಾಣುತ್ತಿರು. ಹಾಗಾದರೆ ನಿನ್ನ ತಾಯಿ ನಿನ್ನಲ್ಲಿ 12 |
ಪುಟ:ಮಾತೃನಂದಿನಿ.djvu/೧೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.