196 ಸತೀ ಹಿತೈಷಿಣಿ ರೊಡನೆ ನಂದಿಸಿ ಸ್ವರ್ಣೆಯರ ಹಸ್ತವನ್ನು ವಿಧ್ಯುಕ್ತರೀತಿಯಿಂದ ನಾಲ್ ನಂದ ಆಡಲಚಂದ್ರರ ಹಸ್ತ್ರದಲ್ಲಿರಿಸಿ. ಧನ್ಯವಾದವನ್ನು ಮಾಡಿ, ಅನಂದಾಶ್ರು. ವನ್ನು ಸುರಿಸುತ್ತ ನಿಂತರು. ಆ ವೇಳೆಯಲ್ಲಿ ಅಲ್ಲಿ ಉಂಟಾದ ಸಂತೋಷದ ಕಲಕಲನಿನಾದವನ್ನು ವಿವರಿಸಬೇಕೇ? ನೆರೆದಿದ್ದವರಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲರ ವದನ ದ್ವಾರದಿಂದಲೂ ಹೊರಹೊರಡುತ್ತಿದ್ದ ಜಯಘೋಷವೂ ಉತ್ಸಾಹದಿಂದ ಮಾಡಲ್ಪಡುತ್ತಿದ್ದ ಕರತಾಡನಗಳ ಕೋಲಾಹಲವೂ ಅನಂದಮಂದಿರ-ಆನಂದ ವನಪ್ರಾಂತವನ್ನೆ ಕುಣಿಕುಣಿದಾಡಿಸಿತೆಂದರೆ ಸಾಕು. ಅಷ್ಟೇ ಅಲ್ಲ. ಸತ್ಯಾನಂದನು ಮತ್ತೆ ಕರುಣಾವ್ಯಂಜಕತ್ವ ರದಿಂದ ಹೇಳಿದನು. ಸುಕುಮಾರರೇ! ಸುಭಾಗೆಯರೇ !! ಇದುಮೊದಲು ನೀವು ಧರ್ಮಪ್ರಜಾ ಪತಿಗಳೆನ್ನಿಸುವ ದಂಪತಿಗಳಾಗಿರುವಿರಿ. ಇನ್ನು ಮುಂದೆ ನೀವು ಮಾಡಬೇ ಕಾದ ಪ್ರತಿಯೊಂದು ಕಾರ್ಯವೂ ನಿಮ್ಮಿಬ್ಬರ ಚಿತ್ತೈಕಾಗ್ರತೆಯನ್ನೇ ಅವ ಲಂಬಿಸಿದ್ದು, ನಿಯಮವನ್ನು ಮೀರದೆ ನಡೆಯಿಸಲ್ಪಡಬೇಕಾಗಿರುವುದು, ಇದಕ್ಕಾಗಿ ನೀವು ನಿಮ್ಮ ನಿಮ್ಮ ಭಾರ್ಯೆಯರೊಡನೆ ಮಾತೃಸಮ್ಮುಖದಲ್ಲಿ ಈಗಲೇ ಪ್ರಮಾಣಪೂರ್ವಕವಾಗಿ ದೀಕ್ಷೆಯನ್ನು ವಹಿಸಬೇಕು.” ನಾ ದಾನ ದ + ನಂದಿನಿ + ಅಚಲಚಂದ್ರ + ಸ್ವರ್ಣಕುಮಾರಿಯರು ಕೈ ಕಟ್ಟಿ, ವಿನೀತರಾಗಿ ನಿಂತು- ಅಪ್ಪಣೆಯಂತೆ ನಡೆಯಲು ಯಾವಾಗಲೂ ಸಿದ್ಧರಾಗಿರುವೆವು." ಎಂದು ನಿವೇದಿಸಿದರು. ಸತ್ಯಾ:- ಹಾಗಿದ್ದರೆ, ಜಾಗ್ರತರಾಗಿದ್ದು ಕೇಳಿ, ಹೇಳಿರಿ, ಷಡ್ಗುಣ್ಯ ಶ್ವರ್ಯ (ಸತ್ಯ, ಜ್ಞಾನ, ಧರ್ಮ,ದಯಾ, ಶಾಂತಿ, ಕ್ಷಮಾ) ಸಂಪನೆಯಾದ ಈ ನಮ್ಮ ಅರ್ಯ ಭೂಮಾತೆಯೇ ನಿಮಗೆಲ್ಲರಿಗೂ ತಾಯಿ-ತಂದೆ, ಗುರುದೈವ ಸರ್ವಸ್ವವೂ ಆಗಿರುವಳೆಂಬ ಭಾವನೆಯು ನಿಮ್ಮಲ್ಲಿ ಖಚಿತವಾಗಿರಬೇಕು. ನಾದಾ + ಅಚಲ :-ಪ್ರಮಾಣಮಾಡುವವು; ಹಾಗೆಯೇ ಇರಲು ನಂದಿನಿ+ಸ್ವರ್ಣ , ಆ ಇವರು.
- ಸತ್ಯಾ:- ನಿಮ್ಮ ಧರ್ಮ -ಧೇಯ-ಕರ್ತವ್ಯಗಳು ನಿಮ್ಮಲ್ಲಿ ಏಕಾ. ಭಿಪ್ರಾಯದಲ್ಲಿದ್ದು, ಒಬ್ಬರನ್ನೊಬ್ಬರು ಛಾಯಾ, ವ್ಯಕ್ತಿ-ಸಾದೃಶ್ಯದಿಂದ