ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

 42 ಸತೀಹಿತ್ಯಷಿಣೀ ಮೂರ್ತಿಗಳಾಗಿ ಮಾಡಲು, ದಕ್ಷಿಣೆಯೇ ಮುಖ್ಯವಲ್ಲವೋ? ಹಾಗೂ ಇಲ್ಲಿ ರುವವನೆಂದರೆ ಮತ್ತೂ ಹೆಚ್ಚು!”

        ನಂದಿನಿ:ಬೇಕೆಂಬುದನ್ನಾದರೂ ಹೇಳದೀತೋ?
        ಅಚಲ:-ಆದೀತು; ಎಷ್ಟೇ ಕಡಮೆಯೆಂದರೂ ಇವನಿಗೆ ಲಕ್ಷವಾ ದರೂ ಕೊಡಬೇಕು ?
        ನಂದಿನಿ:-ಅದರಿಂದಲೇ ಜೀವಿಸಬೇಕೆಂದೋ ?
        ಅಚಲ:- -ಹಾಗೆಂದೇಲೇ ಹೇಳು; ನಷ್ಟವೇನುನಮ್ಮಯಾವ ತರುಣನನ್ನೇ ಕೇಳು; ಅವನ ಬಾಯಿಂದ-"ತಮಗೆ ಸಾವಿರಕ್ಕೆ ಕಡಮೆಯಿಲ್ಲದೆ ಯಾರು ವರದಕ್ಷಿಣೆ ಕೊಡಬಲ್ಲವರೋ, ಅವರ ಮಗಳನ್ನು ಮದುವೆಯಾಗಲು ನಮ್ಮ ತಡೆಯಿಲ್ಲವೆಂದೇ” ಹೊರಡುತ್ತಿದೆ.
         ನಂದಿನಿ:-ನಕ್ಕು-ಬುದ್ಧಿಯಿಲ್ಲದೆ ಕೊಡುವವರು ಕೆಡಲಿ | ಜೀವನ ವನ್ನು ಕಲ್ಪಿಸಿಕೊಳ್ಳಲಾರದೆ, ಹೆರವರ ಹಣಕ್ಕೆ ಕೈಯೊಡ್ಡಿ, ಜೀವಿಸಬೇಕೆಂಬ ಹೇಡಿಗಳಿಗೆ, ನಮ್ಮ ಹೆಣ್ಣು ಮಕ್ಕಳನ್ನು ನಾವು ಹೇಗೂ ಕೊಡಲೊಲ್ಲೆವು !'
          ಅಚಲ:-ಓಹೋ! ಹಾಗೂ ಇಷ್ಟವೋ ಆದರೆ, ನಿಮ್ಮ ಹುಡುಗ ಯರನ್ನು ಮದುವೆಯಿಲ್ಲದೆಯೇ ಇರಿಸಿಕೊಂಡಿರುವಿರೋ?
          ನಂದಿನಿ:-ಅಹುದು; ನಿಮ್ಮವರನ್ನು ಸುತ್ತಮುತ್ತಿ ಕಾಡುತ್ತಿರುವ ವರ ದಕ್ಷಿಣಿಯೆಂಬ ನಿಷಮ‌ಸನ್ನ ಪಾತರೋಗವು ನಾಶವಾಗುವವರೆಗೂ ನವ್ಮವ ರೆಲ್ಲರೂ ಹಾಗಾಗಿ ಇರಬೇಕು. ಹಾಗೆ ಮಾಡಿದವೇಲೆಯೇ ನಿಮ್ಮವರ ವಿುದುಳಿನಲ್ಲಯೂ ರಸೋತ್ಪತ್ತಿಯಾಗಬೇಕು !
           ಅಚಲ:-ಹೇಗೋ?
           ನಂದಿನಿ:-ಹೇಗೆಂದರೆ, ನಮ್ಮವರೆಲ್ಲರೂ ಹಟತೊಟ್ಟು ಒಗ್ಗಟ್ಟಿನಿಂದ ಮೇಲಕ್ಕೇರಿ ಕುಳಿತರೆ, ನಿಮ್ಮವರ ಹೆಮ್ಮೆ ಹಳ್ಳಕ್ಕೆ ಬಿದ್ದು, ನಮ್ಮವರನ್ನೇ ಬೇಡುವಂತಾದೀತು. ಹಾಗುವಂತೆ ಮಾಡಬೇಕೆಂಬುದೇ ಅಭಿ ಲಾಷೆ||
           ಅಚಲ:- ಹಾಗಿದ್ದರೆ ನಿಮ್ಮ ಇಷ್ಟ ! ಹೇಗೂ ಲಕ್ಷವಾದರೆ ದಕ್ಷಿಣ ಮೂರ್ತಿಯಾಗಬಹುದು.