ಸತೀಹಿತ್ಯಷಿಣೀ ನಂದಿನಿ:-ಏತರಿಂದ? ಅಚಲ:-ವಿಲಾಸಪ್ರಿಯರಿಂದಾಗುವ ಪುರುಷಾರ್ಥ ಸಾಧನೆಗಳಾವು ವೆಂಬುದನ್ನೇ ತಿಳಿಯದ ನನಗೆ ಒಪ್ಪು ಗೆಯಾವುದು? ವಿವಾಹವೆಂಬುದೇನು, ವಿಷಯತೃಪ್ತಿಗೊಂದಕ್ಕೆ ಮಾತ್ರವೊ? ನಂದಿನಿ:-ನಾಗಾನಂದನನ್ನು ಕೇಳಿದರೆ ಹೇಳುವನು? ನನ್ನನ್ನು ಕಂಡಾಗಲೆಲ್ಲಾ ಕಾಡು ಹೆಂಗಸೆಂದೂ, ನಾಗರಿಕತೆಯ ಗಂಧವನ್ನ ತಿಳಿಯ ಲೊಲ್ಲದ ಜಡಳೆಂದೂ ಬಗೆಬಗೆಯಾಗಿ ಹಳಿದಾಡುತ್ತಿರುವನು. ನೀನೊ ಬ್ಬನೇ ಈ ಬಗೆಯಾಗಿ ವಿಲಾಸವನ್ನು ನಿರಾಕರಿಸುತ್ತಿರುವವನು. ಅಚಲ:-ನಂದಿನಿ! ಯಾರು, ಹೇಗೆ ಹೇಳಿದರೂ ಹೇಳಲಿ, ಸೊಕ್ಕಿನ ಮಕ್ಕಳನ್ನು ಸಾಹಸದಿಂದೆಯೇ ಭಂಗಿಸಬೇಕಲ್ಲದೆ ಬಾಯಿಮಾತಿನಿಂದಾಗದು. ನಾದನಿಗೆಂದರೆ ಸಹವಾಮಾಡಿಸಿರುವುದು ಆತನು ವ್ಯಾಸಂಗ ದಲ್ಲ.ಶ್ರದ್ಧಾಳುವಾಗಿದ್ದರೂ, ತನ್ನ ಸವೃತ್ತವನ್ನ ಸಂರಕ್ಷಿಸಿಕೊಳ್ಳುವಷ್ಟು ಧೈರ್ಯವುಳ್ಳವನಾಗಿಲ್ಲ. ಚಾಂತಲ್ಯವು ಅತಿಯಾಗಿರುವುದು. ಅದು ನನಗೆ ಸರಿ ತೂರದು. ಅದೂ ಹಾಗಿರಲಿ; ನನ್ನ ತಂಗಿ ಸುರಸೆಯೇ ದೃಷ್ಟಾಂತ ಕ್ಕಿರುವಳಷ್ಟೆ ! ನನ್ನ ಬೋಧನಾಬಲದಿಂದ ಅವಳು, ವಿಲಾಸಾದಿಗಳನ್ನು ತಕ್ಕಷ್ಟೂ ಬಿಟ್ಟಿರುವಳು. ಅವಳ ಗಂಡನೆಂದರೆ, ಅವನು ಈ ಕಾಲದ ಮೋಜುಗಾರನೇ ಸರಿ, ಸಾಲದುದಕ್ಕೆ ಹಣದಕೊಬ್ಬ, ವಿದ್ಯಾವಂತನೆಂಬ ಹೆಮ್ಮೆಯ ತಲೆಗೇರಿ ಹೋಗಿವೆ. ಯಾರ ಮಾತೂ ಕಿವಿಮುಟ್ಟುವಂತಿಲ್ಲ. ತನ್ನ ಪತ್ನಿಯಾದರೂ ತನ್ನಂತೆಯೇ ತಳ್ಳಿ-ಬಳ್ಳಿ ನಲಿಯುತ್ತಿರಬೇಕೆಂಬುದೂ ಅವಳು ಯಾವ ಕೆಲಸವನ್ನೂ ಮಾಡಲಾಗದೆಂಬುದೂ ಅವನ ಅಭಿಲಾಷೆ ಯಾಗಿದೆ. ಆದರೆ, ನನ್ನಲ್ಲಿ ಮಾತ್ರ ಅವನ ಬೇಳೆ ಬೆಯುವಹಾಗಿಲ್ಲ. ನನ್ನಲ್ಲಿ ಮಾತನಾಡಬೇಕೆಂದರೆ ಆತನಿಗೆ ನಾಲಿಗೆಯೇ ಬರುವುದಿಲ್ಲ. ಸುರಸೆಯಂತೂ ಈ ಕಾಲದ ನಮೂನೆ (Fashion)ಯನ್ನು ದೂರದಲ್ಲಿ ಬಿಟ್ಟಿರುವಳೇ? ನಂದಿನಿ:-ಹೇಗೆ? ಅಚಲ:-ಮತ್ತೇನು? ಗಂಡನ ಮುಖೋಲಾಸಕ್ಕೆಂದು ಆತನಿದಿರೆ ಅಲಂಕರಿಸಿಕೊಳ್ಳುವವಳಾದರೂ ಅವನತ್ತ ಹೊರಟನೆಂದರೆ, ಇತ್ತ ಎಂದಿ ನಂತೆ ಕೆಲಸಕ್ಕೆ ಹೊರಡುವಳು. ನಾನು, ಪತ್ಯಜ್ಞಿಯನ್ನು ವಿೂರುವುದು.
ಪುಟ:ಮಾತೃನಂದಿನಿ.djvu/೬೦
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ