ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮಾತೃನ೦ದಿನಿ 67

ಮನಾದ ಬಳಿಕ, ಧರ್ಮ ಕರ್ಮಗಳ ಸೂಕ್ಷ್ಮವಿಚಾರವನ್ನ ಮಾಡುವಷ್ಟರ ವಿವೇಕವುಂಟಾಗಿ, ಯಾವುದು ನೀತಿಗೆ ವಿರುದ್ಢವೋ- ಯಾವುದು ತಮ್ಮ ಸ್ವಧರ್ಮ-ಸ್ವಕರ್ತವ್ಯಗಳಿಗೆ ಮುಖ್ಯವೋ- ಅಂತವುಗಳನ್ನು ಕಂಡುಹಿಡಿದು ಬಲಪಡಿಸಿಕೊಳ್ಳುವವರಾಗುವರು. ಈ ಬಗೆಯ ಅಂತರಿಂದ್ರಿಯದ ವರಿವಕ್ವ ಫಲವನ್ನು ಹೊಂದಿರುವವರೇ ಮಾನವಜನ್ಮದ ನಾರ್ಥಕತೆ ಹೊಂದುವೂದಕ್ಕೂ, ತಮ್ಮ ಸಂಸರ್ಗ-ಸಹವಾಸಗಳಲ್ಲಿರುವವರನ್ನೂ ಸುಸ್ಥಿತಿಗೆ ತರುವದಕ್ಕೂ ಅರ್ಹರಾಗುವರು.

  ಅಳುವುದು, ಹೋರುವುದು, ಚೇರುವುದು, ಜಗಳವಾಡುವದು. ಚಾಡಿಹೇಳಿ ಹೆರವರನ್ನು ದೂರಿಗೆಳೆದಾಡಿ ನಲಿಯುವುದು, ಕಂಡಕಂಡ ವಸ್ತುಗಳನ್ನಾಶಿಸಿ ತನಗಾಗಬೇಕೆಂದು ಹಠತೊಟ್ಟ ತಮ್ಮವರನ್ನು ಕಾಡುವುದೂ ಇಂತಿವೆ ಮೊದಲಾದ ಚಾನಲ್ಯವೇ ಬಾಲ್ಯತ್ವದ ಕುರುಹಾಗಿರುವುದು. ಆದರೆ, ಮೇಲೆ ಹೇಳಿರುವವೆಲ್ಲವೂ ಅಶಿಕ್ಷಿತರಾದ ಸ್ತ್ರೀಯರಲ್ಲಿ ವಿಶೇಷವಾಗಿರುವುವೆಂಬುದನ್ನು ನಮ್ಮ ಸುತ್ತಮುತ್ತಲೂ ಕಾಣುತ್ತಿರುವ ಅನೇಕ ಸಂಸಾರಗಳಲ್ಲಿ ನೋಡಿ ತಿಳಿಯಬಹುದು. ಇದಕ್ಕೂ ಹೆಚ್ಚಾಗೆ ಹೇಳಲಾರೆನು. ಒಟ್ಟಿನಲ್ಲಿ ನಾನು ಹೇಳುವುದೆಂದರೆ ಇಷ್ಟೇ! ಸ್ವರ್ಣೆಗೆ ಹದಿನಾಲ್ಕು ವರ್ಷಗಳಾಗಲಿಕ್ಕೆ ಮೊದಲೇ ವಿವಾಹವಾಗಬೇಕೆಂಬೂದಾಗಿದೆ.ಇನ್ನಿದರ ಮೇಲೆ ನಿಮ್ಮಿಷ್ಟ!

ನಗೇಶ:- ನಂದಿನಿಯ ಮುಖವನ್ನು ನೋಡಿ ತಲೆದೂಗುತ್ತ,- "ಅವಳ ಮನಃಸ್ಥಿತಿಯು ಈಗ ಹೇಗಿದೆ? ಪರಿಪಕ್ವಾವಗಿದೆಯೋ? ಇನ್ನೂ ಬಾಲ್ಯತಾವಲ್ಯದಲ್ಲಿಯೇ ಇದೆಯೋ?”

ನಂದಿನಿ: -ಅಪ್ಪ! ಸ್ವರ್ಣೆಯ ಸ್ವಭಾವವೇ ಕೋಮಲವು., ಹಾಗೂ ಅವಳ ಬುದ್ಧಿಶಕ್ತಿಯಂತೂ ಅಸಾಧಾರಣವಾದ ಪ್ರತಿಭಾವಿಶೇಷಣದಿಂದ ಮತ್ತೂ ಪ್ರಕಾಶಿಸುವಂತಿರುವುದು. ಹೀಗಿರುವವಳನ್ನ ಪರಿಪಕ್ವಸ್ಥಿತಿಗೆ ಬಂದಿಲ್ಲವೆಂದು ಹೇಳಲಿಕ್ಕಾದೀತೇ? ಅವಳು ತಕ್ಕಮಟ್ಟಿಗೂ ಸಾರಾಸಾರ ವಿಚಾರಜ್ಞಾನವನ್ನು ಹೊ೦ದಿರುವಳು.

ನಗೇಶ:-ಹಾಗಿದ್ದರೆ ಅವಳಿಗಿನ್ನು ಒಬ್ಬ ವರನನ್ನು ಸಂಪಾದಿಸಬೇಕಾ