89 ಮಾತೃನಂದಿನಿ ನಂದಿನಿ:-ಅವನಾರೆಂದರೆ, ನಿನ್ನ ಪೂರ್ಣಾಭಿಮಾನಕ್ಕೆ ಪಾತ್ರನಾದ ಅಚಲಚಂದ್ರನೇ, ನಗೇಶ:- ಆತನು ಸ್ವರ್ಣೆ ಯನ್ನು ಒಪ್ಪು ವನೇ? ನಂದಿನಿ:-ಒಪ್ಪಲಾರನೆಂದು ಹೇಗೆ ಹೇಳಲಿ ? ಆದರೆ ಈ ವರ್ಷವೇ ಅಗುವಂತಿಲ್ಲವೆಂದು ಕಾಣುವುದು. ನಗೇಶ:-ಮುಂದಿನ ವರ್ಷಕ್ಕೇ ಬೆಳೆಯಲಿ; ಮುಳುಗಿ ಹೋದು ದೇನು? ಹೇಗೂ ನಿನ್ನ ಅಭಿಪ್ರಾಯದಂತೆ ನಡೆಯಿಸಿದರೆ ಸರಿಯಷ್ಟೆ ! ನಂದಿನಿ:-ನನಗೆ ಸಮ್ಮತವಾಯಿತು. ನಾನಿನ್ನು ಹೊರಡಲೇ? ನಗೇಶ:-ಮತ್ತೊಂದು ಮಾತು. ನಂದಿನಿ:-ಅಭ್ಯಂತರವೇನು? ಆದಾವುದು? ನಗೇಶ:-ನಾದಾನಂದನ ವಿವಾಹವಿಚಾರದಲ್ಲಿ....- ನಂದಿನಿ:-ಈಗಲೇ ಆತುರವೇನು? ಹಾಗೂ ಇದರಲ್ಲಿ ನಾನು ಹೇಳು ವುದೇನು? ನಗೇಶ:- ಆತನು ನಿನ್ನನ್ನೇ ಭಾರೄಯಾಗಬೇಕೆಂದರೆ, ನೀನಲ್ಲದೆ ಮತ್ತಾರು ಹೇಳಬೇಕು? ಅವನಿಗೆ ಈಗಲೇ ಆತುರವಿಲ್ಲದಿದ್ದರೆ ಮುಂದೆಯಾ ದರೂ ಆಗಬೇಕಷ್ಟೇ? ಇದಕ್ಕೇನು ಹೇಳುವೆ? ನಂದಿನಿ:-ಗದ್ಗ ದಸ್ವರದಿಂದ- 1 ಅಪ್ಪ! ನನಗಿದೊಂದು ಮಾತ್ರ ಸೇರಿಲ್ಲ. ನಾನು ಕೇವಲ ಪಿತ್ರಾಜ್ಞೆಯೊಂದರಲ್ಲಿಯೇ ಇರತಕ್ಕವಳು. ಪಿತ್ರಾಜ್ಞೆ ಯಿಂದಲೇ ಈ ನೈಷ್ಠಿಕ ವೃತ್ತಿಯನ್ನು ಹಿಡಿದಿರುವುದು. ಇದನ್ನು ನಾನು ಮನೋವಾಕ್ಕರ್ಮಗಳಿಂದಲೂ ರಕ್ಷಿಸುವುದೇ ನನ್ನ ಕರ್ತವ್ಯವೆನ್ನಿಸಿದೆ. ಅವರ ಶಾಸನಕ್ಕೆ ಪ್ರತಿಯಾಗಿ ನಾನು ಮನಸ್ಸಿನಿಂದಾದರೂ ನಡೆಯಲಾರೆನು. ಅವರ ಉದ್ದೇಶಸಾಫಲೄಗೊಳಿಸುವುದಕ್ಕಾಗಿ ಈ ದೇಹವನ್ನಾದರೂ ತ್ಯಜಿ ಸಲು ಸಿದ್ಧವಾಗಿರುವೆನು. ಈ ಬಗೆಯಲ್ಲಿರುವ ನನ್ನಲ್ಲಿ, ಈ ವಿಚಾರವನ್ನು ಹೇಳುವುದೇಕೆ? ಅಪ್ಪ ! ಪಿತ್ರಾಜ್ಞೆಯಿಂದ ಬಂದು ನಿಮ್ಮಲ್ಲಿರುವ ನನಗೆ ನೀನೂ ಪಿತೃವತ್ಪೊಜೄನೇ ! ಆದರೆ, ಈವರೆಗೂ ಮೀರಿ ನುಡಿದ ನನ್ನ ಮಾತು ಗಳನ್ನು ಪ್ರತಿಷ್ಠೆಗಾಗಿ ಹೇಳಿದುದೆಂದು ಭಾವಿಸಬಾರದು. ನನ್ನ ಇದೊಂದು ಕೋರಿಕೆಯು ಮಾತ್ರ ಮಾನ್ಯವಾಗಬೇಕು.
ಪುಟ:ಮಾತೃನಂದಿನಿ.djvu/೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.