ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃನ ದಿನಿ 73 ವಾಸಮಾಡುವಷ್ಟು ಹೆಡ್ಡ ರಾದರೂ ಯಾರಿರುವರು ? ಅವರ ಚಿತ್ರಾಶ್ರಮವು ಯಾವ ಅರಮನೆಗೆ ಕಡಮೆಯಾಗಿರುವುದು ? ಹಾಗೋ ? ಆದರೆ ಸಂತೋಷ. ನೋಡಿ ನಮ್ಮ ಕಣ್ಣುಗಳೂ ತಣಿ ಯಲಿ ! ಅಬ್ಬ ! ಮಠ-ಅಲ್ಲ ಅಲ್ಲ ! ಜೇನಾನಂದ ಪರಮಹಂಸರ ಪವಿ ಕ್ರಾಶ್ರಮವು ಇಂದು ಎಷ್ಟು ಸಂಭ್ರಮಗೊಳ್ಳುತ್ತಿದೆ, ನೋಡಲಾಗದೇ ? ಮಠದ (ಆಶ್ರಮದ) ಒಳಗೂ ಹೊರಗೂ ಸುತ್ತಲೂ ಬಾಳೆಯ ಕಂಬಗಳೂ, ತಳಿರು-ತೋರಣಗಳೂ ನಳನಳಿಸುತ್ತಿವೆ. ಮಠದತುಂಬ ಜನರು ಕಿಕ್ಕಿರಿದು ನಿಂತೂ ಸ್ಥಳ ನಾಲದೆಂದು ಹೊರಗಡೆಯಲ್ಲಿ ನಿಂತಿರುವರು. ಬಂದಿರುವವರೆ ಲ್ಲರೂ ಕುತೂಹಲಾವಿಷ್ಟರಾಗಿ ಮಠದಕಡೆಯಿಂದ ಹೊರಡುವ ಶಬ್ದವನ್ನೇ ಕೇಳುತ್ತ ಕದಲದೆ ನೋಡುತ್ತಿರುವರು. ಏನನ್ನು ನೋಡಿ ಕೇಳುವರೋ ಬಲ್ಲವರಾರು? ಸಾಮಾನ್ಯವಾಗಿ ನೋಡಿದರೆ, ಇಬ್ಬರು ಹೆಂಗಸರಿರುವೆಡೆಯಲ್ಲಿಯೇ ಗದ್ದಲವುಂಟೆಂದು ಹೇಳುವರಲ್ಲವೆ? ಹಾಗಾದರೆ, ನೂರಾರುಮಂದಿ ಹೆಂಗಸ ರೂ, ಅವರ ಉಡಿಯಲ್ಲಿ, ಮಡುಲಲ್ಲಿ, ಬೆನ್ನಲ್ಲಿ, ಸುತ್ತಮುತ್ತಲೂ ಮಕ್ಕಳೂ , ಸಾಲದುದಕ್ಕೆ ಹುಡುಗರಾದಿಯಾಗಿ ಮುದುಕರವರೆಗೆ ಗಂಡಸರೂ ಸೇರಿ ದರೆ, ಆಕಡೆಯಲ್ಲಿ ಗದ್ದಲವೆಷ್ಟೆಂಬುದನ್ನು ಹೇಳಲಾದೀತೇ? ಹೆಚ್ಚೇಕೆ, ಈ ದಿನದ ನೋಟದಲ್ಲಿ ಮಠವೇ ಒಂದು ದೊಡ್ಡ ಸಂತೆಯ ಗಡಿಯಾಗಿದೆಯೆಂದು ಹೇಳಬಹುದು. 1 ಹೋ! ಹೋ! ತಾಳಿರಿ. ಕೂಗದೆ- ಹಾರಾಡದೆ ನಿಲ್ಲಿರಿ, ಕಿವಿ ಕೊಟ್ಟು ಕೇಳಿರಿ, ಕೂಗಿ ಗದ್ದಲಮಾಡುವವರು ಹೊಡೆದೋಡಿಸಲ್ಪಡು ವರು ! ಸದ್ದು ! ಸದ್ದು !! ಸದ್ದು !!!” ( ಇದೇನಿದು ! ಘನಘರ್ಜನೆ ? ಹೀಗೇಕೆ ಕೂಗುವರು ?” ಆತುರಪಡಬೇಡಿರಿ; ಬಾಂಧವರೇ! ನಿಧಾನಿಸಿ ಕೇಳಿದರೆ ತಿಳಿದೀತು. ಓಹೋ! ತಿಳಿದೆವು. ಸ್ವಾಮಿ (?) - ಅಲ್ಲ ಪೀಠಾಧಿಕಾರಿ-. ಇದೂ ಸಮಂಜಸವಾಗಿಲ್ಲ-ಸಮಾಜಶಾಸನ ಸಂಸ್ಕಾರಿಗಳಾದ ಜಿವಾನಂದ