ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܘ ದು, ಒಂದುವೇಳೆ ಸಿಕ್ಕಿಬಿದ್ದರೆ ನಾನು ಆರೀತಿಯಲ್ಲಿ ಆತ್ಮಹ ತೈಯನ್ನು ಮಾಡಿಕೊಳ್ಳುವೆನು, ಇದು ನಿನಗೆ ತಿಳದಿರಲಿ. ನಾ ನುಸತ್ಯ ದಿನ ಮೊದಲ್ಗೊಂಡು ಮೂವತ್ತು ದಿನಗಳವರೆಗೆ ಗೋರಿಯಲ್ಲಿ ಜೀವಂತಳಾಗಿಯೇ ಇರುವೆನು. ಅಷ್ಮರೋಳ ಗಾಗಿ ನನ್ನನ್ನು ಉದಾರಮಾಡಬೇಕು. ನಿಜವಾಗಿಯೂ ನನ್ನನ್ನು ಉದ್ದಾರವಾಡಬೇಕು. ನಿನಗೆ ಇಚ್ಛೆಯಿರುವು ದಾದರೆ, ನನ್ನ ಅವಧಿಯಬಂದುದಿನ ಮುಂಚಿತವಾಗಿಯೇ ಯತ್ನಮಾಡು, ಅವಧಿಯದಿನ ಮೂಾರಿಕೆಲಸ ಮಾಡುವುದಾದರೆ ಪ್ರಯತ್ನವು ನಿಪ್ಪಲವಾಗುವುದು. ನನ್ನನ್ನು ಗೋರಿಯಿಂದ ಹೊರಗೆ ತೆಗೆದು ನೋಡಿದರೆ ನನ್ನ ಹಲ್ಲುಗಳು ಗಿಟಕರಿಸಿಕೊಂಡಿರುತ್ತವೆ. ಅವನ್ನು ಈ ಮದಿಂದ ಬಿಡಿಸಬೇಕು. ಅದಾದಮೇಲೆ ಅದೇ ಸೀಸೆಯಿಂದ ಎಂಟುತೊಟ್ಟು ಔಷಧವನ್ನು ನನ್ನ ಬಾಯಿಯಲ್ಲಿ ಬಿಡು, ಈ ಎಂಟು ತೊಟ್ಟುಗಳಲ್ಲಿ ಕೊಂಚವೂ ಹೆಚ್ಚು ಕಡಿಮೆ ಯಾಗ ಕೂಡದು ಎಚ್ಚರಿಕೆ. ಅದಾದಮೇಲೆ ಮತ್ತೇನೂ ಮಾಡಬೇಕಾದುದಿಲ್ಲ, ಅರ್ಧ ಗಂಟೆಯಕಾಲಮಾತ್ರ ನಿರೀಕ್ಷಿಸಿಕೊಂಡಿರಬೇಕು. ನೀನು ಪೇಕ್ಷೆಮಾಡದೆ,ನನ್ನಿಷ್ಟ್ಯದಂತೆ ನಡೆವುದಾದರೆ, ಅರ್ಧಗಂಟೆಯ ಬಳಿಕ ನಾನು ನಿನ್ನೊಡನೆ ಮಾತನಾಡಲು ಶಕ್ತಳಾಗುವೆನು. ನೀನು ನನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವು ದಾಗಿಯೂ ಹಾಗೇಕೆ ಹೇಳಬೇಕು--ನಾನು ನಿನ್ನ ಹೆಂಡತಿ ಯಾಗುವುದಾದರೆ, ನನ್ನ ಕೈಯಿಂದಲೇ ನಾನು ಸಂಪಾದಿ ಸಿಕೊಂಡಿರುವ ಲೆಕ್ಕವಿಲ್ಲದ ಪಾಪಗಳನ್ನು ನೀನು ಗಮನಕ್ಕೆ ತರುವುದಿಲ್ಲವೆಂದೂ, ನನಗೆ ತಿಳಿಸಿರುವೆ. ಬದುಕಿಸು-ನನ್ನನ್ನು ರಕ್ಷಿಸು-ನಾನು ನಿನ್ನವಳೇ ಆಗು