ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ದನ್ನು ಆಕಯು ಬಲ್ಲಳೇ? ಖಿ-ನಾನು ಹೇಳಲಾರೆನು. ದೇ-ಆಕೆಯನ್ನು ಒಂದು ಸಲ ಕೇಳಿನೋಡು. ಖಿ-ತಾವು ಇಲ್ಲಿಯೇ ನಿಂತಿರೋಣಾಗಲಿ. ನಾನು ಹೋಗಿ ಕೇಳಿಕೊಂಡು ಬರುವೆನು. ದೇ-ಎಲ್ಲಿ, ಕಬೀರನು ಯಾವ ಮನೆಯಲ್ಲಿರುವನು? ಖಿ-ಮೂರನೆಯ ಮಹಡಿಯ ಮೇಲುಭಾಗದಲ್ಲಿ ಒಂದು ದೊಡ್ಡ ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡಿರುವನು. ದೇ-ಕಬೀರನ ತಂಗಿಯು ನನಗೆ ದೂರದವಳಲ್ಲ. ನಾನವಳಿಗೆ ಚಿಕ್ಕಪ್ಪನಾಗಬೇಕು. ನಾನು ಅವಳನ್ನು ನೋಡಲು ಮಹಡಿಯಮೇಲೆ ಹೋಗುವುದಕ್ಕ ಅಡ್ಡಿ ಯೇನಾದರೂ ಉಂಟೆ ?ನೀನೂ ನನ್ನ ಜತೆಯಲ್ಲಿಯೇ ಬಾ. ಏಳನೆಯ ಸಂಧಿ' (ಕಪಟವೇಷ) ಖಿರೋಜಾಬಾಯಿಯು ದೇವೇಂದ್ರವಿಜಯನನ್ನು ಜತೆಯಲ್ಲಿ ಕರೆದುಕೊಂಡು ಮೂರುನೆಯ ಮಹಡಿಯಮೇಲೆ ಹತ್ತಿಹೋಗಿ, ಕಬೀರುದ್ದೀನನು ವಾಸವಾಗಿರುತಿದ್ದ ಕೋಣೆಯನ್ನು ದೂರದಿಂದಲೇ ತೋರಿಸಿ ತಾನು ಹೊರಗದ ನಿಂತಳು. ದೇವೇಂದ್ರವಿಜಯನು ಆ ಕೋಣೆಯೊಳಗೆ ಪ್ರವೇಶ ಮಾಡಿ ನೋಡಲಾಗಿ ಮನೆಯೊಳಗೆ ಯಾರಾ ಇರಲಿಲ್ಲ.