ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೫೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ-ಶಚೀಂದ್ರನು ಬಂದು, ತಮ್ಮನ್ನು ನೋಡಲು ಅವನೇ ಹೋಗುವುದಕ್ಕೆ ಸಿದ್ದನಾದನು ಅತ್ತೆಯ ಆತ ನೊಡನೆ ಹೊರಡಲು ಅಪೇಕ್ಷೆ ಪಟ್ಟಳು. ದೇ-ಆಮೇಲೆ ? ಶ್ರೀ-ಅವನು ನನ್ನತೆಯ ಮಾತಿಗೆ ಕಿವಿಗೊಡ ಲಿಲ್ಲ' ದೇ- (ಸಂತೋಷದಿಂದ) ಶಚೀಂದನು ಒಳ್ಳೆಯದ ನೇ ಮಾಡಿದನು - ಅವನು ಒಳ್ಳೆಯ ಚಾಲಾಕಾದ ಹುಡು ಗನು - ಅವನು ಬುದ್ದಿಗೆ ತಮ್ಮ ಕೆಲಸವನ್ನೇ ಮಾಡಿರು ವನು. -ಅವನು ಹೇಳಿದ್ದೇನೆಂದರೆ-ನಾನು ಮೊದಲು ಹೋ ಗಿ ಮಾವನನ್ನು ನೋಡುವೆನು, ಅವನೇನಾದರೂ ನಿನ್ನನ್ನು ಅಪೇಕ್ಷಿಸುವಪಕ್ಷದಲ್ಲಿ ಹೇಳಿಕಳುಹಿಸುವೆನು, ಅನಂತರ ನೀ ನು ಬರಬಹುದು, ನಮ್ಮತೆಯು ಆದಾವ ಮಾತನ್ನೂ ಕೇಳಲಿಲ್ಲ, ಕೊ ನೆಗೆ ಶಚೀಂದ್ರನು ಆಿಗೆ ಬಹಳವಾಗಿ ಹೇಳಿ ತಾನೊಬ್ಬನೇ ಹೊರಟುಹೋದನು. ದೇಹೇಗಾದರೂ ಆಗಲಿ, ವಿಪತ್ತು ಬಂದ ಬಂದ ಹಾಗೆಯೇ ಕಳೆದು ಹೋಯಿತು, ನಾನು ಬಂದಿರುವೆನೆಂ ದು ತಿಳಸು. --ನಮ್ಮತೆಯು ಇನ್ನೂ ಹಿಂತಿರುಗಿ ಬಂದಿ ಲ್ಲವಲ್ಲ. - ದೇ-( ವಿಸ್ಮಯದಿಂದ ) ಹಿಂತಿರುಗಿ ಬರಲಿಲ್ಲವೆಂ ದರೇನು?