ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೯೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನ್ನು ಪ್ರೀತಿಸುವುದಿಲ್ಲ, ಆದರೆ ಹಠಕ್ಕಾದರೂ ನೀನು ಬಂದು ವರ್ಷವಾತ, ನನ್ನನ್ನು ಪ್ರೀತಿಸು. ನನ್ನ ಮುಖಲ್ಲಾಸ ಆದರೂ ಪ್ರೀತಿಸುವುದಾಗಿ ಹೇಳಿ, ಅನಂತರ ನೀನು ವಂ ಚಿಸು, ನಿನ್ನ ವಂಚನೆಯಿಂದ ನಾನು ವಂಚಿತಳಾದರೂ ನ ನಗೆ ಸುಖವುಂಟು. ನಾನು ಯಾವ ಆಶೆಯನ್ನಿಟ್ಟುಕೊಂಡಿ ರುವೆನೋ, ಆ ಆಕೆಯು ದುಸ್ಸಾಧ್ಯವೆಂದು ನಾನು ಬಲ್ಲೆನು, ನೀನು ಸುಳ್ಳಾಗಿಯಾದರೂ ನನ್ನನ್ನು ಪ್ರೀತಿಸುವುದಾಗಿ ಬ ಪ್ಪಿಕೊಳ್ಳುವುದಾದರೆ, ನನ್ನ ಆಸೆಯು ಕೃತಾರ್ಥವಾಗುವುದು, ನನಗೆ ಅಷ್ಮೆ ಸಾಕು.ಬಹಿಃ ಹಾಗಿರಲಿ,ಅಂತಃ ಆದ ನೀನು ನನ್ನನ್ನು ಪ್ರೀತಿಸುವುದಾಗಿ ನನಗ-ನನ್ನೊಬ್ಬಳಿಗೆ ಮಾತ್ರತಿಳಿಸು. ಅಷ್ಟು ಮಾತ್ರಕ್ಕೆ ನೀನು ನನ್ನವನಾಗುವೆ. ನಿನ್ನ ಹೆಂಡತಿಯಾದ ರೇವತಿಯ ಪ್ರಾಣರಕ್ಷಣೆಯನ್ನು ಹೊಂದಿ ಸುರಕ್ಷಿತಳಾಗಿ ಮತ್ತೆ ಮನೆಗೆ ಹೋಗಿ ಸುಖದಿಂದಿರುವಳು, ಆಕೆಯು ಅಲ್ಲಿದ್ದು ಕೊಂಡು ನಿನ್ನನ್ನು ನಿರೀಕ್ಷಿಸುತ್ತಿರಲಿ. ಒಂದು ವರ್ಷ ಕಾಲವೆಂಬುದು ನಿಮಿಷ ಮಾತ್ರದಲ್ಲಿಯೇ ಕಳ ದುಹೋಗುವುದು. ವರ್ಷಾಂತದಲ್ಲಿ ನೀನು ಆಕೆಯಲ್ಲಿ ಮು ತೆ ಸೇರಿಕೊಳ್ಳಬಹುದು. ಆಮೇಲೆ ನೀನು ಹೇಗೆ ಬೇಕೋ ಹಾಗಿರುವುದಲ್ಲದೆ, ನಿನಗೆ ಏನಿಷ್ಟ್ಯವೋ ಅದನ್ನೂ ಹೊಂದ ಬಹುದು. ಪ್ರಕೃತ, ನೀನು ಒಂದು ಕ್ಷಣಕಾಲದ ಮಟ್ಟ ಗಾದರೂ ಸ್ವರ್ಗ ಸುಖವಂತಹದೆಂಬುದನ್ನು ತೋರಿಸು ವುದಾದರೆ ನಾನು ಈ ದೇಹವನ್ನು ಧಾರಣಮಾಡಿ ದ್ದಕ್ಕೆ ಸಾರ್ಥಕವಾಗುವುದು. ನಿನ್ನ ಹೆಂಡತಿಗೆ ಇದಾವು ದೂ ಗೊತ್ತಾಗುವುದಿಲ್ಲ. ಇಲ್ಲಿ ನೀನು ನಾನು ಹೊರತಾಗಿ