ಮೂರ್ತಿಯಂದದಿ ನವದ್ವಾರಯುತ ಮಾಗಿಸ । ಪ್ರೀರ್ತಿಯಂದದಿ ಸರ್ವ
ಥಾಧಳವಾಗಿ ವರ । ಕೃತಿವಾಸ ನಾರಿಯಂದದಿ ಚಿತ್ರಧರವಾಗಿ ನೇತ್ರ
ದಂದದಿ ತಾರಕಂ ।....
ಮುದ್ದಣನ ಪ್ರಭಾವದ ಸೂಚನೆ :
“ನೋಡುವ ವಿಟರೆದೆಗಾಡಿ ರವಿಛವಿ'-ಇದು ಮುದ್ದಣನ 'ಕುಂದರದನೆ ಪೂರ್ಣೆಂದುವದನೆ”, “ಕನ್ನೆ ಸುಗುಣ ಸಂಪನ್ನೆ” ಈ ಪದ್ಯಗಳನ್ನೂ “ಕಂಡನರಿ ಯದೆ ನಿದ್ರಿಸುತ್ತಿಹ” “ಎಂತು ವರ್ಣಿಪನಿಂಥ ಸತಿಯಳನಂತ ಗುಣಗಣಿಯಾ” “ಎಂತು ಬಣ್ಣಿಪೆ ಕಾಂತೆಯನು ಜೀಯ...' ಎಂಬ ಪದ್ಯವನ್ನು ನೆಪಪಿಸುತ್ತವೆ.
ಅಮಮಿದ ನ್ಯಾವ ಭೂಪ್ರಭುವೂ-ಈ ಪದ್ಯವು ವಿಷ್ಣು ಕವಿಯ ವಿರಾಟ ಪರ್ವದ 'ಇವಾಳ್ಯಾವ ಲೋಕದ ಸತಿಯೊ' ಎಂಬ ಪದ್ಯದ ಪ್ರೇರಣೆ ಹೊಂದಿ ದಂತಿದೆ.
ವಸ್ತುವು ದುರ್ಬಲವಾದುದರಿಂದ ಅರ್ಥಗಾರಿಕೆಗೆ ವಿಶೇಷ ಪೋಷಣೆ ಯನ್ನು ಕೊಡುವ ಪದ್ಯಗಳು ಈ ಪ್ರಸಂಗದಲ್ಲಿಲ್ಲ. ಆದರೂ ಹರಿಯಂತೆ ಕೌದುದೆ ಕರಿಯಂತೆ ವರತುಹಿನ ಗಿರಿಯಂತೆ ಪೂರ್ಣವದಕರಿಯಂತೆ ಸಂತತಂ | ಸುರುಚಿರ ಶ್ರೀ ಸುಧಾಧರ ವಿಹಾರಾ ರಾಮ....ಇಂತಹ ಪದ್ಯಗಳೂ, ಯುದ್ಧ ಭಾಗದಲ್ಲಿ ಮರುತ್ತ, ಧೂಮಕೇತು ಸಂವಾದ, ಶಿವ-ಧೂಮಕೇತು ಸಂವಾದ ಇವುಗಳಲ್ಲಿ ಮಾತುಗಾರಿಕೆಗೆ ಅವಕಾಶವಿದೆ.
ಪದ ಪ್ರಯೋಗ, ಪದ್ಯರಚನೆಗಳಲ್ಲಿ ಒಳ್ಳೆಯ ಹಿಡಿತ ಇರುವ ಈ ಕವಿ “ಅಮಮಿವನ್ಯಾವ” “ಆಸ್ಥಾನೋಲಗ” “ಏರಿಸುರುತರ” “ನಮಃಶಿಮೆನುತಾ “ಸಲಾಂ” “ನೈದಿಲೇಕ್ಷಣ” “ಸಿಂಧುತರದಲಿ” “ಕದಪಾಲ” ಮೊದಲಾದ ಶಬ್ದ