ಈ ಪುಟವನ್ನು ಪ್ರಕಟಿಸಲಾಗಿದೆ
125

ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ

ಭಾಷೆ
ಪದ್ಯ ಅರ್ಥಸಂಬಂಧ
ಪೀಠಿಕೆ
ಸಂಭಾಷಣೆ
ಆಶಯ
ಒಟ್ಟು ಸಂವಿಧಾನ.

ಈ ಎಲ್ಲ ಅಂಶಗಳಲ್ಲಿ ಅರ್ಥಗಾರಿಕೆ ಕಳೆದ ಕೆಲವು ವರ್ಷಗಳಲ್ಲಿ, ತುಂಬ ವೇಗವಾಗಿ ಬದಲಾಗಿರುವುದನ್ನು ಕಾಣುತ್ತೇವೆ. ಹಿಂದಿನ ಕ್ರಮದ ಅರ್ಥ ಗಾರಿಕೆಯ ಮಾದರಿಗಳನ್ನು, ಬಡುಗುತಿಟ್ಟಿನ ಆಟಗಳಲ್ಲಿ ವ್ಯಾಪಕವಾಗಿಯೂ, ತೆಂಕುತಿಟ್ಟಿನ ಹರಕೆ ಬಯಲಾಟ ಮೇಳಗಳಲ್ಲೂ, ತಾಳಮದ್ದಲೆ ಸಂಘಗಳ ಹಳೆ ಅರ್ಥಧಾರಿಗಳಲ್ಲೂ ಇಂದಿಗೂ ಕಾಣಬಹುದು. ಹಳೆ ಮಾದರಿ ಅರ್ಥ ಗಾರಿಕೆಯ ಕೆಲವು ಮಾದರಿಗಳು;

1. ಲವ ಕುಶ ಪ್ರಸಂಗದ ರಾಮನ ಪೀಠಿಕೆ : ಅಯ್ಯಾ ಪಿತೃಆಜ್ಞಾ ಧಾರಕನಾಗಿ ಸೀತಾಂಗನಾ ನಿಮಿತ್ತದಿಂದ ರಾವಣ ಕುಂಭಕರ್ಣನೇ ಮೊದಲಾದ ದುಷ್ಟರನ್ನು ಸಂಹರಿಸಿ ದೇವತೆಯರ ಮನೋಭೀಷ್ಟವನ್ನೆ ನೆರವೇರಿಸಿ ಪುಷ್ಪಕ ವಿಮಾನಾಹೋರರಾಗುತ್ತಾ ಬಂದು ನೆಲೆಸಿದ್ದೇವೆ. ಸೂರ್ಯಾನ್ವಯದಲ್ಲಿ ಈ ಮೊದಲು ಅವತರಿಸಲ್ಪಟ್ಟ ರಾಜರು ಆಳಲ್ಪಟ್ಟಿರುವ ಈ ಸಾಕೇತಾ ಪಟ್ಟಣ ವನ್ನು ಕೈಗೊಳ್ಳುತ್ತಾ ಆಸೇತು ಹಿಮಾಲಯ ಪರಿಯಂತ ಸಮಸ್ತರಾಜ ರಿಂದಲೂ ಕಪ್ಪವನ್ನು ಕೈಗೊಳ್ಳುತ್ತಾ....(ರಾಮಾಯಣ ಪಠದ ಸಂಧಿ: ಅರ್ಥ ಲೇಖಕ ಕಂಚೀತೋಟ ಸೀತಾರಾಮಯ್ಯ ಪ್ರ: ಎಚ್. ಕೃಷ್ಣ ಪ್ರಭು ಹರಿಹರ ಪುರ 1915)

2. ಕೌರವನ ಪೀಠಿಕೆ (ವಿರಾಟಪರ್ವ) : ಅಯ್ಯಾ, ಲತ್ತಪಗಡೆ ಯನ್ನಾಡಿದ ದುಷ್ಟ ಪಾಂಡವರು ಪರಾಭವಗೊಂಡು ಕಷ್ಟದ ಕಾಂತಾರವನ್ನು ಸೇರಿ ಕಾರಡವಿಯಲ್ಲಿ ಘೋರ ಮೃಗಗಳಾಗಿ ಬಾಳಿದರು, ಹಿಂದಕ್ಕಾದರೋ ಶತಶೃಂಗ ಪರ್ವತದಿಂದ ಇಲ್ಲಿಗೆ ಬಂದು ಸೇರಿ ಧೂರ್ತರಾಗಿ ನಮ್ಮ ಹಿರಿಯರ