ಈ ಪುಟವನ್ನು ಪ್ರಕಟಿಸಲಾಗಿದೆ
128
ಮಾರುಮಾಲೆ

1930ರ ಬಳಿಕ ತಾಳಮದ್ದಲೆಯ ಅರ್ಥಗಾರಿಕೆಯು ಕಂಡ ಬದಲಾ ವಣೆಯಿಂದಾಗಿ (ಅದರ ಪ್ರಭಾವದಿಂದ ಆಟಗಳಲ್ಲೂ) ಅರ್ಥಗಾರಿಕೆಯ ಅಂಗ ಗಳು ಬದಲಾದಾಗ ಪೀಠಿಕೆಯೂ ಬದಲಾಯಿತು. ಕತೆಯನ್ನು ಹೇಳುವುದರ ಜತೆಗೆ, ಪಾತ್ರದ ಮನಸ್ಸಿನ ಸ್ಥಿತಿ, ತನ್ನ ಜೀವನದ ಅವಲೋಕನ, ಪಾತ್ರದ ಸಮರ್ಥನೆ-ಇವು ಪೀಠಿಕೆಯ ವಿಷಯಗಳಾದವು. ಇದೇ ಪದ್ಧತಿಯು ಇಂದಿಗೂ ಮುಂದುವರಿದಿದ್ದು, ತಾಳಮದ್ದಲೆಯ ಪ್ರಮುಖ ಆರ್ಥಧಾರಿಗಳಲ್ಲಿ ಹೆಚ್ಚಿ ನವರ ಪೀಠಿಕೆಯಲ್ಲಿ, ಹಿಂದಿನ ಕತೆಯನ್ನು ಹೇಳುವ ಅಂಶ ಗೌಣವಾಗಿದೆ.

ಹೆಚ್ಚಿನ ಅಭ್ಯಾಸ, ವ್ಯುತ್ಪತ್ತಿಗಳುಳ್ಳ ಕಲಾವಿದರಿಂದ ಹೀಗೆ ಪೀಠಿಕೆ ಬದಲಾದ ಬೆನ್ನಲ್ಲೇ ಪೀಠಿಕೆಯಲ್ಲಿ ಇನ್ನೊಂದು ಬದಲಾವಣೆ ಬಂತು.ಅದು ಹರಿದಾಸರು ಯಕ್ಷಗಾನವನ್ನು ಪ್ರವೇಶಿಸಿದ ಬಳಿಕ (ಪಲ್ಪೆ ಶಂಕರ ನಾರಾಯಣ ಸಾಮಗರು, ಶೇಣಿ ಗೋಪಾಲಕೃಷ್ಣ ಭಟ್ಟರು). ಅವರು ಹರಕಥೆಯ ಪೀಠಿ ಕೆಯ ಆದರ್ಶದಿಂದ ಅರ್ಥಗಾರಿಕೆಯ ಪೀಠಿಕೆಯನ್ನು ರೂಪಿಸಲು ಯತ್ನಿಸಿದರು. ಹರಿಕಥೆಯಲ್ಲಿ, ಇಡಿಯ ಕಥೆಯು ಪ್ರತಿಪಾದಿಸುವ ತತ್ವವೇನು, ಪ್ರಧಾನ ಪಾತ್ರಗಳ ತಾತ್ವಿಕ ನಿಲುವುಗಳೇನು ಎಂಬುದನ್ನು ಪೀಠಿಕೆಯಲ್ಲಿ ಹೇಳಿ, ಅದರ ವಿವರಣೆಯಾಗಿ ಕಥೆಯನ್ನು ನಿರೂಪಿಸುವ ಕ್ರಮವಿದೆಯಷ್ಟೆ. ಅದೇ ಕ್ರಮವನ್ನು ಅರ್ಥಗಾರಿಕೆಗೆ ಅಳವಡಿಸಲಾಯಿತು. ಇದರಲ್ಲಿ ಸಾಮಗರು ಹರಿ ಕತೆಯ ಪೀಠಿಕೆಯದೇ ಪಡಿಯಚ್ಚನ್ನು ಅರ್ಥಗಾರಿಕೆಗೆ ತಂದರೆ, ಶೇಣಿಯವರು ಅದರ ತಂತ್ರವನ್ನು ಮಾತ್ರ ಅಳವಡಿಸಿ, ಪಾತ್ರದ ಮಾತುಗಾರಿಕೆ, ವಿವರಗಳಲ್ಲಿ ಪೀಠಿಕೆ ಯಕ್ಷಗಾನದ ಪರಂಪರೆಯನ್ನು ಅನುಸರಿಸಿ ಸಮನ್ವಯಗೊಳಿಸಿದರು.

ಹರಿಕತೆಯ ಪೀಠಿಕಾ ವಿಧಾನವು ಅರ್ಥಗಾರಿಕೆಯ ಶಿಲ್ಪಕ್ಕೆ ಒಂದು ಸವಂಗ್ರತೆಯನ್ನೂ ಅಂದವನ್ನೂ ನೀಡಿತು. ಜತೆಗೆ ಅದರಿಂದ ಕೆಲ ಆಭಾಸ ಗಳೂ ಕಾಣಿಸಿದವು. ಪಾತ್ರಗಳು ಮುಂದೆ ನಡೆಯುವ ಘಟನೆಗಳನ್ನು ಮೊದಲೇ ತಿಳಿದವರಂತೆ ತತ್ವಾರ್ಥ ಪ್ರತಿಪಾದನೆ ಮಾಡುವುದು ನಾಟಕ ಧರ್ಮಕ್ಕೆ, ಕಲಾತ್ಮಕ ಸೌಂದರ್ಯಕ್ಕೆ ತೊಡಕಾಯಿತು.