ವ್ಯಾಪಕವಾಗಿದೆ. ಆದರೆ, ದುರ್ಯೋಧನ-ಬಲರಾಮ ಪಾತ್ರಗಳೊಳಗಿನ ಸಂಬಂಧ, ದುರ್ಯೋಧನ ಕಾರ್ಯ ಸಾಧಕತ್ವ, ಬಹಳ ವಿನಯದಿಂದಲೇ ಆದರೂ ಹಿಂದೆ ತನಗಾದ ಮೋಸವನ್ನು ತಿಳಿಸುವ ಕೌರವನ ರೀತಿ-ಇವುಗಳನ್ನು ಯೋಚಿಸಿದರೆ, ಮೊದಲಿನ ಪದ್ಯವೂ ಅತೀ ಆವಶ್ಯಕ. ನೇರವಾಗಿ ವಿಷಯಕ್ಕೆ ಬಾರದೆ, ಓರೆಯಾಗಿ, ವಿನಯದಿಂದ, ಮನವೊಲಿಸಿ, ಸಂದೇಹವನ್ನು ಮಾಡಿಸು ವುದೇ (ಮನವೊಲಿಸುತ್ತ ಕಾರವ ತಾನು) ಪಾತ್ರಕ್ಕೂ, ಸನ್ನಿವೇಶಕ್ಕೂ ಇದೇ ರೀತಿಯಲ್ಲಿ “ಶರಸೇತು ಬಂಧನ' ಪ್ರಕರಣದಲ್ಲಿ (ಸುಭದ್ರಾ ಕಲ್ಯಾಣ : ಹಟ್ಟಿಯಂಗಡಿ ರಾಮಭಟ್ಟ) ಅರ್ಜುನನು ಮೂರು ಬಾರಿ ಬಾಣಗಳ ಸೇತುವೆಯನ್ನು ಕಟ್ಟುವ, ಹನುಮಂತನು ಮುರಿಯುವ ಕ್ರಿಯೆಗೆ ಮೂರು ಪದ್ಯಗಳಿವೆ. ಇವುಗಳಲ್ಲಿ ಒಂದನ್ನು ಮಾತ್ರ ಹಾಡಿ, ಉಳಿದುದನ್ನು ಅರ್ಥದಲ್ಲಿ ಮುಂದುವರಿಸಿ ಹೇಳುವ ಕ್ರಮವಿದೆ. ಆದರೆ, ಅರ್ಜುನ-ಹನುಮಂತರ ಸ್ಪರ್ಧೆ, ಹಂತ ಹಂತವಾಗಿ ಜಿದ್ದಾಗುವುದು, ಮತ್ತು ಹಿಮ್ಮೇಳದ ಬಳಕೆಯಿಂದ ನಿರ್ಮಿತವಾಗಬೇಕಾದ ವಾತಾವರಣ-ಇವುಗಳನ್ನು ಪರಿಭಾವಿಸಿದರೆ, ಇಲ್ಲಿನ ಮೂರೂ ಪದ್ಯಗಳನ್ನು ಅಳವಡಿಸಲೇ ಬೇಕೆಂದು ತೋರದಿರದು. ಪಾತ್ರಗಳ ಅಳವಡಿಕೆ, ಪದ್ಯಗಳ ಆಯ್ಕೆ, ಸನ್ನಿವೇಶಗಳ `ಆಯ್ಕೆ-ಇವುಗಳಲ್ಲಿ ಪರಂಪರೆಯ ಪುನರುಜ್ಜೀವನವೇ ಒಂದು ಪ್ರಯೋಗ ಆಗಬಹುದು.
●
ವೇಷ ಸಹಿತವಾದ ಆಟದ ಅರ್ಥಗಾರಿಕೆ ಮತ್ತು ವೇಷವಿಲ್ಲದ ತಾಳ ಮದ್ದಳೆಯ ಅರ್ಥಗಾರಿಕೆಗಳಲ್ಲಿನ ವ್ಯತ್ಯಾಸವು, ಬರಿಯ ಗಾತ್ರಕ್ಕೆ ಸಂಬಂಧಿಸಿದುದಲ್ಲ. ಅಂದರೆ, ಆಟದ ಅರ್ಥಗಾರಿಕೆ ಎಂಬುದು ಹ್ರಸ್ವ ತಾಳಮದ್ದಳೆ ಯದು ದೀರ್ಘ-ಎಂಬಷ್ಟೇ ಅಲ್ಲ. ಈ ವ್ಯತ್ಯಾಸ ಇರುವುದು, ಇರಬೇಕಾದುದು ನಿಜ. ಆದರೆ, ಅವೆರಡರೊಳಗಿನ ವ್ಯತ್ಯಾಸವು, ಎರಡು ವಿಭಿನ್ನ ಮಾಧ್ಯಮಗಳ, ಆರ್ಥಾತ್, ಪ್ರಕಾರಗಳ ವ್ಯತ್ಯಾಸ.ಮಾತುಗಾರಿಕೆಯೇ ಪ್ರಧಾನವಾಗಿರುವ ತಾಳಮದ್ದಲೆಗೆ, ನೃತ್ಯ, ವೇಷಭೂಷಣ, ಅಭಿನಯಗಳಿಂದುಂಟಾಗುವ ಆಟದ