ವಿವಾಹ, ಇಂದ್ರಜಿತು, ಕಾರ್ತವೀರ, ತ್ರಿಶಂಕು ಚರಿತ್ರೆ). ಇವುಗಳನ್ನು ಬಳಕೆಗೆ ತರುವುದರಿಂದ, ಅರ್ಥದಾರಿಗೆ ಹೊಸ ಸಂದರ್ಭ, ಹೊಸ ಸವಾಲು ಕಲಾ ಒದಗಿಬರುತ್ತದೆ. ಹೊಸತಾದ ಆಶಯವನ್ನು ಹೇಳುವ ದೃಷ್ಟಿ ಪ್ರಸಂಗ ರಚನೆಯಲ್ಲೆ ಇದ್ದಾಗ (ಉದಾ: ಅನಂತ ಆರ್. ಪೈಗಳ 'ಯಯಾತಿ', ಅಮೃತ ಸೋಮೇಶ್ವರರ 'ಕಾಯಕಲ್ಪ', 'ವಿಶ್ವರೂಪ', ರಾಘವ ನಂಬಿಯಾರರ "ಅಮರೇಂದ್ರ ಪದವಿಜಯ) ಅರ್ಥದಾರಿ ಅದೇ ವಸ್ತುಗಳ ಹಳೆಯ ಪ್ರಸಂಗಗಳ ಪ್ರದರ್ಶನದಲ್ಲಿ ವಹಿಸುವ ಜಾಡನ್ನು ಬಿಟ್ಟು, ವಸ್ತುವಿಗೆ ಹೊಸತಾಗಿ ಸ್ಪಂದಿಸು ವುದೂ ಅಷ್ಟೆ ಮುಖ್ಯ. ಇಲ್ಲವಾದರೆ, ಅಸಮತೋಲ ಬರುತ್ತದೆ. ವಿದನು ಪ್ರಸಂಗದ 'ಕಥೆಯನ್ನು ಕೊಡುವ ವಾಹಕನಾಗದೆ, ಕಥೆಯ ವಸ್ತು ವನ್ನು ಹೊಸ ನೋಟದಿಂದ ಮಂಡಿಸುವ ಸೃಷ್ಟಿಶೀಲನಾಗಬೇಕು. ಆಗ "ಭೀಷ್ಮ ವಿಜಯ" ಅಂಬೆಯ ದುರಂತದ ಚಿತ್ರವೂ ಆಗಬಲ್ಲುದು, 'ಕ್ಷತ್ರಿಯ ಸಂಹಾರ' ಸರ್ವಾಧಿಕಾರಿಯ ವಿರುದ್ಧದ ನೈತಿಕ ಹೋರಾಟವಾಗಬಲ್ಲದು. ಮಾತುಗಾರಿಕೆ 'ರಸ' ಸೃಷ್ಟಿ ಸರಳ ಆವೇಶವಾಗದೆ, ಭಾವಪ್ರಕಾಶನವಾಗಿ, ಧ್ವನಿಯ ಅಭಿವ್ಯಕ್ತಿಯಾಗಿ, ವಕ್ರೋಕ್ತಿಯ ಸಾರ್ಥಕ್ಯವಾಗಿ ಮೂಡಬಲ್ಲುದು.
ಹೀಗೆ, ಪೀಠಿಕೆ, ಸಂವಾದ, ಪದ್ಯಗಳ ಆಯ್ಕೆ, ವಸ್ತುವಿನ ಮಂಡನೆ, ತರ್ಕ, ಪಾತ್ರ ನಿರ್ಮಾಣ, ಪ್ರಸಂಗ ರಚನೆ-ಈ ಎಲ್ಲ ಹಂತಗಳಲ್ಲೂ, ಪರಂಪರೆ ಯನ್ನು ಅರ್ಥಮಾಡಿಕೊಂಡು, ಬೆಳೆಯುವ ಪ್ರಯೋಗ ಶೀಲತೆಯ ಮೂಲಕ, ಸಂಸ್ಕೃತಿಯ ಜೀವಂತಿಕೆಯತ್ತ ಮುಖಮಾಡಿದ ಪ್ರಯೋಗ ಶೀಲತೆ ನಮ್ಮದಾಗ ಬೇಕು. ಅನುಬಂಧ
- 1. ಪ್ರತಿನಾಯಕ ಪಾತ್ರಗಳ ತರ್ಕಯುಕ್ತ ಚಿತ್ರಣದಿಂದ, ನಾಯಕ ಪಾತ್ರಗಳು ದುರ್ಬಲವಾಗಿ ಕಾಣುತ್ತವೆ. ಇದು ಕಾವ್ಯದ ವಸ್ತು ವಿಗೆ ನ್ಯಾಯವನ್ನು ಒದಗಿಸುವುದಿಲ್ಲ ಎಂಬ ಆಕ್ಷೇಪವೊಂದು, ಯಕ್ಷಗಾನದ ಮಾತುಗಾರಿಕೆ ಬಗೆಗೆ ಇದೆ. ಇದು ವಿಶೇಷತಃ