ಈ ಪುಟವನ್ನು ಪ್ರಕಟಿಸಲಾಗಿದೆ
148
ಮಾರುಮಾಲೆ

ಹವ್ಯಾಸಿ ರಂಗ ಚಳುವಳಿ ಸಶಕ್ತವಾಗಿ ಬೆಳೆದಾಗ ಅದು ವ್ಯವಸಾಯಿ ರಂಗಭೂಮಿಯ ಮೇಲೆ ಪ್ರಭಾವ ಬೀರಬಲ್ಲದು, ಅದನ್ನು ನಿಯಂತ್ರಿಸ ಬಲ್ಲುದು ಮತ್ತು ರಚನಾತ್ಮಕವಾದ ಕೆಲಸಗಳನ್ನು ಮಾಡಬಲ್ಲುದು. ಆದರೆ, ಯಕ್ಷಗಾನದ ಹವ್ಯಾಸಿ ರಂಗವು ಗಾತ್ರದಲ್ಲಿ ಬಹಳ ದೊಡ್ಡದಾಗಿದ್ದರೂ, ಗುಣದಲ್ಲಾಗಲಿ, ಪರಿಣಾಮದಲ್ಲಾಗಲಿ ತೃಪ್ತಿಕರ ಮಟ್ಟದಲ್ಲಿ ಇಲ್ಲ ಎಂದು ಹೇಳಬೇಕಾಗಿದೆ.

ಹವ್ಯಾಸಿರಂಗವು ಸಾಮಾನ್ಯವಾಗಿ ಮಾಡುವ ಕೆಲಸಗಳು :
1. ಜನರಿಗೆ ಸಾಮಾನ್ಯ ಮನೋರಂಜನೆ ಒದಗಿಸುವುದು.
2. ಕಲಾವಿದರ ತಯಾರಿ, ವ್ಯವಸಾಯಿ ಮೇಳಗಳಿಗೆ ಒದಗಿಸುವಿಕೆ.
3. ಅಭಿರುಚಿಯನ್ನು ಉಳಿಸುವುದು.
4. ಸದಸ್ಯರ ಗೀಳಿಗೆ ಒಂದು ಅಭಿವ್ಯಕ್ತಿ ಅವಕಾಶ ನೀಡುವುದು.
—ಮಾಡಬಹುದಾದ ಕೆಲಸಗಳು :
1. ಗೋಷ್ಠಿ ಕಮ್ಮಟಗಳ ಮೂಲಕ ಸಮಸ್ಯೆಗಳ ಚರ್ಚೆ
2. ದಾಖಲಾತಿ, ಅಧ್ಯಯನ, ಸಂಗ್ರಹ,
3. ನೂತನ ಪ್ರಯೋಗದ ಪ್ರಯತ್ನ,
4. ಪ್ರಕಟಣೆ.
5. ಅಶಕ್ತ ಕಲಾವಿದರಿಗೆ ನೆರವು.

—ಮೇಲೆ ಹೇಳಿದ ಅಂಶಗಳ ಪೈಕಿ, ನಮ್ಮ ಹೆಚ್ಚಿನ ಹವ್ಯಾಸಿ ತಂಡಗಳು ಕೇವಲ ಮನೋರಂಜನೆ ಮತ್ತು ಸ್ವಂತ ಚಟ ಅಥವಾ ಗೀಳಿನ ತೀರಿಕೆಗಾಗಿಯೇ ರಂಗಚಟುವಟಿಕೆಯನ್ನು ರೂಪಿಸುವುದನ್ನು ಕಾಣುತ್ತೇವೆ.