ಈ ಪುಟವನ್ನು ಪ್ರಕಟಿಸಲಾಗಿದೆ
ಹವ್ಯಾಸಿಗಳು : ಹೊಣೆ ಮತ್ತು ಸಮಸ್ಯೆಗಳು
153

ಇದೀಗ ರಂಗಶಾಸ್ತ್ರ ಬೆಳೆಯುತ್ತಿದೆ. ವಾಗುತ್ತಿದ್ದು, ಅದನ್ನು ನೋಡುವ ಅವಕಾಶಗಳೂ ಹೆಚ್ಚಿವೆ. ಆಧುನಿಕ ತಂತ್ರಜ್ಞಾನವಾದ ಆಡಿಯೋ, ವಿಡಿಯೋ, ದೀಪ ವ್ಯವಸ್ಥೆ ಇವುಗಳನ್ನು ಕಲಾತ್ಮಕವಾಗಿ ಅಳವಡಿಸುವಲ್ಲಿ ಸಾಧ್ಯತೆಗಳಿವೆ. ಈ ಸೌಲಭ್ಯಗಳನ್ನು ಬಳಸಿ ಹವ್ಯಾಸಿಗಳು ಬೆಳೆಯಬೇಕು. ರಂಗವನ್ನು ಬೆಳೆಸಬೇಕು.

ಸಧ್ಯ ನಮ್ಮ ಕಣ್ಣ ಮುಂದಿರುವ ವ್ಯವಸಾಯಿ ಯಕ್ಷಗಾನದ ಸ್ವರೂಪವೇ ಅದರ ಪ್ರಾತಿನಿಧಿಕ ರೂಪವೆಂಬಂತೆ, ಪ್ರೇಕ್ಷಕರಲ್ಲಿ ಸ್ಥಾಪಿತವಾಗುತ್ತಿದೆ. ಇದು ಸಹಜ, ಹೊಸತಾಗಿ ಬರುತ್ತಿರುವ ಪ್ರೇಕ್ಷಕವರ್ಗಕ್ಕೆ ಯಕ್ಷಗಾನದ ಸಾಂಪ್ರ ದಾಯಿಕ ಸೊಗಸಿನ ಪರಿಚಯವಿಲ್ಲ. ಅದನ್ನು ಜನರ ಮುಂದೆ ತಂದಿರಿಸಿ ಅದರ ಬಗೆಗೆ ತಿಳುವಳಿಕೆ ಉಂಟುಮಾಡುವ ಹೊಣೆ, ಜತೆಯಲ್ಲಿ ಸಂಪ್ರದಾಯದ ಸೊಗಸನ್ನು ಉಳಿಸಿ, ಉಚಿತವಾದ ಸುಧಾರಣೆಯೊಂದಿಗೆ ಒಳ್ಳೆಯ, ಮಾದರಿ ಪ್ರದರ್ಶನಗಳನ್ನು ನೀಡುವ ಹೊಣೆ ಇಂದು ಹವ್ಯಾಸಿ ಯಕ್ಷಗಾನ ಸಂಘಗಳ ಮೇಲಿದೆ. ಅದಕ್ಕಾಗಿ ಈ ಕೆಲವು ಕಾಠ್ಯಕ್ರಮಗಳನ್ನು ಹವ್ಯಾಸಿಗಳು ಅಳವಡಿಸಿ ಕೊಳ್ಳಬಹುದು :

1. ಸಾಂಪ್ರದಾಯಿಕ ವೇಷಭೂಷಣಗಳ ಬಗೆಗೆ ಮಾಹಿತಿ ಇರುವ ಕಲಾವಿದರಿಂದ ಸರಿಯಾದ ವಿಷಯ ಸಂಗ್ರಹ ನಡೆಸಿ ಹಳೆ ಮಾದರಿಯ ವೇಷಭೂಷಣ, ಬಟ್ಟೆಗಳಿಂದ ಕೂಡಿದ ಸಾಮಗ್ರಿ ಯನ್ನು ತಯಾರಿಸಿ ಬಳಸುವುದು.
2. ಸಾಂಪ್ರದಾಯಿಕ ನೃತ್ಯದ ಬಗೆಗೆ ಅನುಭವಿ ಕಲಾವಿದರಿಂದ ಪ್ರಾತ್ಯಕ್ಷಿಕೆ ಮತ್ತು ಚಿಕ್ಕ ಅವಧಿಯ ಪ್ರದರ್ಶನಗಳನ್ನು ಏರ್ಪಡಿಸುವುದು.
3. ಬಣ್ಣಗಾರಿಕೆ, ವೇಷ, ಹಿಮ್ಮೇಳದ ಬಗೆಗೆ ಕಮ್ಮಟ ಮತ್ತು ಸಂಪ್ರ ದಾಯಿ ಸುಧಾರಣೆಗಳ ಬಗೆಗೆ ಚರ್ಚೆಗಳನ್ನೇರ್ಪಡಿಸುವುದು.