ಈ ಪುಟವನ್ನು ಪ್ರಕಟಿಸಲಾಗಿದೆ
158
ಮಾರುಮಾಲೆ

ತೆಂಕುತಿಟ್ಟಿನ ವ್ಯವಸಾಯ ಮೇಳಗಳ ಪ್ರದರ್ಶನಗಳು, ವಿಪುಲ ದೃಷ್ಟಾಂತ ಒದಗಿಸುತ್ತವೆ.

ಯಕ್ಷಗಾನದ ಅಂಗಗಳೊಳಗಿನ ಸಂಬಂಧ, ಅವುಗಳಲ್ಲಿ ಒಂದರಲ್ಲಿ ಆದ ಬದಲಾವಣೆ, ಇನ್ನೊಂದರ ಮಿತಿಯನ್ನು ಇಂದು ಸಂಬಂಧಿಸುವುದು ಅಥವಾ ಇನ್ನೊಂದು ಅಂಗದ ಮೇಲೆ ಅದು ಬೀರುವ ಪರಿಣಾಮ-ಇವುಗಳ ಗ್ರಹಿಕೆಯೇ ಇಲ್ಲದೆ ಇಷ್ಟಬಂದಂತೆ ಬದಲಾವಣೆ ಮಾಡಹೋದರೆ, ಅಂತಹದು 'ಜನಪ್ರಿಯ'ವಾಗಿ ನೆಲೆಗೊಂಡಾಗ, ಕಲೆಗೆ ಶಾಶ್ವತವಾದ ಹಾನಿ ಉಂಟಾಗುತ್ತದೆ. ನಮ್ಮ ವೇಷವಿಧಾನ, ನೃತ್ಯ ರಂಗಭೂಮಿಯೊಂದರ ವೇಷಗಳಂತೆ ಇಲ್ಲದೆ, ತೀರ ಪ್ರತ್ಯೇಕವಾಗಿ ಕಾಣಿಸುವುದು ಈ ಕಾರಣದಿಂದಲೇ ಪರಿಜ್ಞಾನ ಇಲ್ಲದವರು ಕೈಯಾಡಿಸಿ, ಕಲೆಗೆ ಸಂಬಂಧಿಸದ, ಯಾವುದೋ ಕಾರಣಕ್ಕಾಗಿ ಮಾಡಿದ ಅಧ್ವಾನಗಳ ಕೈಯಲ್ಲಿ ಕಲೆ ಪಾಡು ಪಡುತ್ತದೆ.

ಪರಂಪರೆಯ ಇತಿ ಸ್ವರೂಪದ ಬಗೆಗಿನ ನಿಷ್ಠೆ-ಇದ್ದರೆ ಮಾತ್ರ ಪ್ರಯೋಗಕ್ಕೆ ಬೇಕಾದ ಕ್ಷೇತ್ರ ಸಿದ್ಧಿಯಾಗುತ್ತದೆ. ಅದೇ ಈಗ ಕಾಣುತ್ತಿಲ್ಲ.

[ವಿಚಾರ ಸೂಚನೆ : ಕೆರೆಮನೆ ಶಂಭು ಹೆಗಡೆ]