ಆದರೆ, ಇಂತಹ ಪದ್ಯಗಳನ್ನು ಹಿಮ್ಮೇಳದ ಸೊಗಸಿಗಾಗಿ, ರಂಗಕ್ರಿಯೆಯ
ಕಾವನ್ನುಳಿಸುವುದಕ್ಕಾಗಿ ಹಾಡಬೇಕಾದುದು ಅವಶ್ಯ. ಕೆಲವು ಸಂದರ್ಭಗಳಲ್ಲಿ
ಆ ಪದ್ಯಗಳನ್ನು, ಅದಕ್ಕೆ ತಕ್ಕ ಬಿಡ್ತಿಗೆ, ಮುಕ್ತಾಯ, ಗತ್ತುಗಳೊಂದಿಗೆ
ಹಾಡಿದಾಗ ಅವು ಮಾಡುವ ಪರಿಣಾಮ ಭವ್ಯವಾದದ್ದು. ಅವುಗಳಿಗೆ ಅರ್ಥದ
ವಿಸ್ತಾರ ಇಲ್ಲದಿದ್ದರೂ ಸರಿಯೆ.
ಇಂತಹ ಸಂದರ್ಭಗಳಲ್ಲಿ, ವಿಶೇಷವಾಗಿ, ಶೃಂಗಾರ, ಹಾಸ್ಯ, ಮುಂತಾದ
ರಸಗಳಿರುವಲ್ಲಿ, ಈ ಪದ್ಯಗಳನ್ನು ವಿಸ್ತಾರವಾಗಿ, ಹಲವು ಆವರ್ತಗಳಿಗೆ
ಬಾಯಿ ತಾಳಗಳೊಂದಿಗೆ ಹಾಡಿದಾಗ ತಾಳಮದ್ದಲೆಗೆ ಒಂದು ಪ್ರತ್ಯೇಕವಾದ
ಸೊಗಸು ಬರುತ್ತದೆ.23 ಇಲ್ಲಿ ನೃತ್ಯದ ಬಂಧನ ಇಲ್ಲದಿರುವುದರಿಂದ ಇದನ್ನು
ವಿಸ್ತಾರವಾಗಿ ಹಾಡಿ ರಂಜಿಸುವ ಸ್ವಾತಂತ್ರ್ಯವೂ ಹಿಮ್ಮೇಳಕ್ಕಿದೆ. ಇದು
ತಾಳಮದ್ದಲೆಗೆ ಒಂದು ಒಳ್ಳೆಯ ಆಯಾಮವನ್ನು ನೀಡುವ ಪ್ರಯೋಗವಾಗು
ತ್ತದೆ.
ಇಡಿಯ ರಾತ್ರಿಯ ಅವಧಿಯನ್ನು ದೃಷ್ಟಿಯಲ್ಲಿರಿಸಿ, ಯಕ್ಷಗಾನ ಪ್ರದ ರ್ಶನವನ್ನು ನಾಲ್ಕು 'ಕಾಲ'ಗಳಾಗಿ-ಅಂದರೆ ನಾಲ್ಕು ವಿಭಾಗಗಳಾಗಿ ಹಂಚಿ, ಕತೆಯ ವೇಗವನ್ನು ಗಣಿಸುವ ವಿಧಾನವೊಂದು ಸಂಪ್ರದಾಯದಲ್ಲಿದೆ. ಮೊದಲ ಕಾಲ (ಸ್ಥೂಲವಾಗಿ 10 ಘಂಟೆಯಿಂದ 12 ಘಂಟೆ) ಕ್ಕಿಂತ ಎರಡನೇ ಕಾಲ, ಅದಕ್ಕಿಂತ ವೇಗವಾಗಿ ಮೂರನೆಯ ಕಾಲ, ಅದಕ್ಕಿಂತ ನಾಲ್ಕನೆಯ ಕಾಲ- ಹೀಗೆ ಕತೆ ಸಾಗಬೇಕೆಂಬುದು ಈ ಕಾಲ ವಿಭಾಗದ ಸ್ಥೂಲ ಸಿದ್ಧಾಂತ. (ಇವು ಸಂಗೀತದ ನಾಲ್ಕು 'ಕಾಲ'ಗಳಲ್ಲ) ಇದು ಮುಖ್ಯವಾಗಿ ಆಟಕ್ಕಾಗಿ ಅನ್ವಯಿಸು ವಂತಹದಾದರೂ, ತಾಳಮದ್ದಳೆಯಲ್ಲೂ ಈ ಸಂಪ್ರದಾಯಕ್ಕೆ ಮಹತ್ವ ಇಲ್ಲದೆ ಇಲ್ಲ. ತೀರ ನಿಧಾನವಾಗಿ ಸಾಗಬೇಕಾದ ಕಥಾಭಾಗವೊಂದು, ರಾತ್ರಿಯ ಕೊನೆಯ ಭಾಗದಲ್ಲಿ ಪ್ರದರ್ಶಿತವಾಗುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ಬಲು ವೇಗವಾಗಿ ಸಾಗಿದರೆ ಅದು ಉಚಿತವಾಗದು ನಿಜ. ಆದರೆ, ಕತೆಯ ವೇಗ ಉತ್ತರೋತ್ತರವಾಗಿ ಹೆಚ್ಚಬೇಕೆಂಬುದು ಸ್ಥೂಲವಾಗಿ ಅಂಗೀಕಾರಾರ್ಹವಾದ